Wednesday, September 11, 2024

ಶ್ರೀರಾಮ ಮಂದಿರ ನಿರ್ಮಾಣವಾಗಿದ್ದರೂ ಕಾಂಗ್ರೆಸ್ ಋಣಾತ್ಮಕವಾಗಿಯೇ ಚಿಂತಿಸುತ್ತಿದೆ : ಕಾಂಗ್ರೆಸ್‌ ವಿರುದ್ಧ ಮೋದಿ ವಾಗ್ದಾಳಿ

ಜನಪ್ರತಿನಿಧಿ (ಗುಜರಾತ್‌) : ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಿದ್ದರೂ ಕಾಂಗ್ರೆಸ್ ಋಣಾತ್ಮಕವಾಗಿಯೇ ಚಿಂತಿಸುತ್ತಿದೆ ಹಾಗೂ ದ್ವೇಷದ ದಾರಿಯಿಂದ ಈಚೆಗೆ ಬರಲು ಸಿದ್ಧವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು(ಗುರುವಾರ) ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ್ದಾರೆ.

ಗುಜರಾತ್‌ನ ಮೆಹ್ಸಾನಾ ಜಿಲ್ಲೆಯಲ್ಲಿ ವಲಿನಾಥ ಮಹಾದೇವ್ ದೇವಾಲಯವನ್ನು ಲೋಕಾರ್ಪಣೆ ಮಾಡಿ ಸಾರ್ವಜನಿಕರನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಿದರು. 8,350 ರೂ. ಕೋಟಿಗೂ ಹೆಚ್ಚು ವೆಚ್ಚದ ವಿವಿಧ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು.

ಕಾಂಗ್ರೆಸ್ ಸ್ವತಂತ್ರ ಭಾರತದಲ್ಲಿ ದೀರ್ಘಕಾಲದವರೆಗೆ ಅಭಿವೃದ್ಧಿ ಹಾಗೂ ಪರಂಪರೆಯ ನಡುವೆ ಸಂಘರ್ಷ ಹಾಗೂ ದ್ವೇಷವನ್ನು ಸೃಷ್ಟಿ ಮಾಡಿದೆ. ಇದಕ್ಕೆ ಮೂಲ ಕಾರಣವೇ ಕಾಂಗ್ರೆಸ್. ದಶಕಗಳ ಕಾಲ ದೇಶವನ್ನು ಆಳಿದ್ದು ಇದೇ ಕಾಂಗ್ರೆಸ್. ಸೋಮನಾಥ ದೇಗುಲದಂತಹ ಪವಿತ್ರ ಸ್ಥಳವನ್ನೂ ವಿವಾದಕ್ಕೆ ಕಾರಣವನ್ನಾಗಿಸಿದವರು ಇದೇ ಕಾಂಗ್ರೆಸ್‌ನವರು ಎಂದು ಟೀಕೆ ಮಾಡಿದ್ದಾರೆ.

ಇನ್ನು, ಕಾಂಗ್ರೆಸ್ ಗುಜರಾತ್‌ನ ಪಂಚಮಹಲ್ ಜಿಲ್ಲೆಯ ಪಾವಗಡ ದೇವಸ್ಥಾನದಲ್ಲಿ ಧಾರ್ಮಿಕ ಧ್ವಜಾರೋಹಣ ಮಾಡುವ ಆಸಕ್ತಿಯನ್ನು ತೋರಿಸಲಿಲ್ಲ ಮತ್ತು ದಶಕಗಳಿಂದ ಮೊಧೇರಾದ ಸೂರ್ಯ ದೇವಾಲಯವನ್ನು ಮತ ಬ್ಯಾಂಕ್ ರಾಜಕೀಯಕ್ಕೆ ಕಾಂಗ್ರೆಸ್‌ ಯಶಸ್ವಿಯಾಗಿ ಬಳಸಿಕೊಂಡಿತು ಎಂದು ಅವರು ಹೇಳಿದ್ದಾರೆ.

ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ದೀಸಾದಲ್ಲಿ ಏರ್ ಫೋರ್ಸ್ ಸ್ಟೇಷನ್ ರನ್‌ವೇ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ,ಇದು ಭಾರತದ ಭದ್ರತೆಯ ಪ್ರಮುಖ ಕೇಂದ್ರವಾಗಿ ಅಭಿವೃದ್ಧಿ ಹೊಂದಲಿದೆ. ‘ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿ ನಾನು ಹಲವಾರು ಪತ್ರಗಳನ್ನು ಬರೆದಿದ್ದೇನೆ ಹಾಗೂ ಇದಕ್ಕಾಗಿ ಸಾಕಷ್ಟು ಪ್ರಯತ್ನಿಸಿದೆ. ಆದರೆ ಕೇಂದ್ರದಲ್ಲಿ ಆಗಿನ ಕಾಂಗ್ರೆಸ್ ಸರ್ಕಾರವು ಅಡೆತಡೆ ಮಾಡಿದೆ ಎಂದಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!