spot_img
Thursday, March 5, 2026
spot_img

ಭಕ್ತರ ಶ್ರದ್ಧಾಭಕ್ತಿಯ ಮುಂದೆ ಎಲ್ಲವೂ ಸಾಧ್ಯ-ಶಿವಸುಜ್ಞಾನತೀರ್ಥ ಶ್ರೀ


ಕಜ್ಕೆ ಅನ್ನಪೂರ್ಣೇಶ್ವರಿ, ಗಣಪತಿ, ಆದಿಶಂಕರಾಚಾರ್ಯರ ಶಿಲಾಬಿಂಬ ಪ್ರತಿಷ್ಠೆ ಮತ್ತು ಮಹಾಕುಂಭಾಭಿಷೇಕ

ಬ್ರಹ್ಮಾವರ, (ಜನಪ್ರತಿನಿಧಿ ವಾರ್ತೆ) ಅನ್ನಪೂರ್ಣೇಶ್ವರಿಯನ್ನು ಶ್ರದ್ಧಾಂತಃಕರಣ ಭಕ್ತಿಯಿಂದ ಆರಾಧಿಸುವುದರಿಂದ ಸಕಲ ಆಯುರಾರೋಗ್ಯ ಐಶ್ವರ್ಯ, ಮೋಕ್ಷದ ಮಾರ್ಗವೂ ಲಭಿಸುತ್ತದೆ. ಅಂಥಹ ಶಕ್ತಿ ಈ ಸಾನಿಧ್ಯಕ್ಕಿದೆ. ಇರುವೆಯೊಂದು ತನಗಿಂತ 30 ಪಟ್ಟು ಭಾರದ ವಸ್ತುವನ್ನು ಹೊತ್ತೊಯ್ಯುವಂತೆ ಇಲ್ಲಿ ಭಕ್ತರ ಮೂಲಕ ಆಶ್ಚರ್ಯಕರ ರೀತಿಯಲ್ಲಿ ದೇವಿ ಸೇವೆ ಮಾಡಿಸಿಕೊಂಡಿದ್ದಾಳೆ. ಎಲ್ಲವೂ ಅನ್ನಪೂರ್ಣೇಶ್ವರಿ, ಆಧಿಶಂಕರಚಾರ್ಯಾರ ಪೂರ್ಣಾನುಗ್ರಹವೇ ಕಾರಣ ಎಂದು ಶ್ರೀ ವಿಶ್ವಕರ್ಮ ಜಗದ್ಗುರು ಪೀಠ ಅರೇಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನದ ಅನಂತಶ್ರೀ ವಿಭೂಷಿತ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿಯವರು ಹೇಳಿದರು.

ಕಜ್ಕೆಯಲ್ಲಿ ನೂತನವಾಗಿ ನಿರ್ಮಾಣವಾದ ಶ್ರೀ ಅನ್ನಪೂರ್ಣೇಶ್ವರಿಯ ಶಿಲಾಮಯ ದೇವಸ್ಥಾನದ ಲೋಕಾರ್ಪಣೆಯ ಅಂಗವಾಗಿ  ಫೆ.೨೧ರಂದು ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಸಕಲ ಭಕ್ತರ ಸೇವೆ ಪರಿಶ್ರಮ, ಸತ್ಕರ್ಮ ಫಲ ಎಷ್ಟಿತ್ತು ಎಂದರೆ ಅದು ಅಗಾಧವಾದ ವರ್ಣಿಸಲಾಗದು. ಪ್ರತಿಷ್ಠಾಪನೆಗೆ ದಿನ ನಿಗಧಿಯಾಗಿ ೨೦ ದಿನಗಳ ಇರುವಾಗ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವುದು ಕಷ್ಟ ಎನ್ನುವ ಆತಂಕ ಇತ್ತು. ಆದರೆ ಭಕ್ತರ ಪರಿಶ್ರಮದ ರೂಪ, ದೇವಿಯ ಅನುಗ್ರಹದಿಂದ ಪವಾಡದಂತೆ ಎಲ್ಲವೂ ನಡೆದಿದೆ ಎಂದರು.

ನನ್ನ 41ನೇ ಚಾತುರ್ಮಾಸ್ಯ ಅತ್ಯಂತ ಅತಿಶಯವಾಗಿ ಇಲ್ಲಿ ನಡೆದಿದೆ. ೪೦ ಚಾತುರ್ಮಾಸ್ಯಗಳಿಗಿಂತ ಅದ್ಬುತವಾಗಿ ಇಲ್ಲಿ ನಡೆದಿದೆ. ಆಗ ಇಲ್ಲಿ ನಡೆದ ಯಾಗ ಯಜ್ಞಗಳು ಧಾರ್ಮಿಕ ಕಾರ್ಯಕ್ರಮಗಳನ್ನು ಮರೆಯಲಾಗದು. ಅಂತಹ ಶಕ್ತಿಕ್ಷೇತ್ರ ಕಜ್ಕೆಯಲ್ಲಿ ಇವತ್ತು ಸಾಕ್ಷಾತ್ ಅನ್ನಪೂರ್ಣೇಶ್ವರಿಯ ದಿವ್ಯ ಸಾನಿಧ್ಯ ಪ್ರತಿಷ್ಠಾಪನೆಗೊಂಡಿದೆ ಎಂದರು.

ಬೀದರ್ ಶಹಪುರದ ಶ್ರೀ ವಿಶ್ವಕರ್ಮ ಏಕದಂಡಗಿ ಮಠದ ಶ್ರೀ ಕಾಳಹಸ್ತೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಪುಣ್ಯಕ್ಷೇತ್ರಗಳಿಗೆ ಪಾದಸ್ಪರ್ಶ ಮಾಡಿದಾಗ ಪಾಪಕರ್ಮಗಳು ದೂರಾಗುತ್ತವೆ. ಪುಣ್ಯಸಂಪಾದನೆ ಜಗತ್ತಿನಲ್ಲಿಯೇ ಅತೀದೊಡ್ಡ ಸಂಪತ್ತು. ನಾವು ಪುಣ್ಯ ಸಂಪಾದನೆ ಮಾಡಬೇಕು. ದೇವರಿಗಿಂತ ಭಕ್ತರು ದೊಡ್ಡವರು. ಭಕ್ತರಿಗಿಂತ ಭಕ್ತಿ ದೊಡ್ಡದು. ಪ್ರತಿಯೊಬ್ಬ ಭಕ್ತರ ಹೃದಯದಲ್ಲಿಯೂ ಭಕ್ತಿಯ ತಂಗಾಳಿ ಬೀಸಬೇಕು ಎಂದು ಹೇಳಿದ ಅವರು ಶಿವಸುಜ್ಞಾನ ತೀರ್ಥ ಶ್ರೀಗಳ ಸಂಕಲ್ಪ ಶಕ್ತಿ ಅದ್ಭುತವಾದುದು. ಅವರ ಭಕ್ತಿ ಸಂಕಲ್ಪದಿಂದ ಕಜ್ಕೆ ಎನ್ನುವುದು ಪುಣ್ಯ ಕ್ಷೇತ್ರವಾಗಿ ನಿರ್ಮಾಣವಾಗಿದೆ. ಸಾಕ್ಷತ್ ಹೊರನಾಡಿಗೆ ಹೋದ ಅನುಭವವೇ ಇಲ್ಲಿ ಆಗುತ್ತಿದೆ. ಮತ್ತೆ ಮತ್ತೆ ಕಜ್ಕೆ ಅನ್ನಪೂರ್ಣೇಶ್ವರಿಯ ದರ್ಶನಕ್ಕೆ ಬರುವ ಮನಸ್ಸಾಗುತ್ತಿದೆ ಎಂದರು.
ವಿಶ್ವಕರ್ಮ ಸಮಾಜ ಒಗ್ಗಟ್ಟಾಗಬೇಕು. ಅಭಿವೃದ್ದಿಯ ಕಡೆಗೆ ಸಾಗಬೇಕು. ಶ್ರದ್ದೆಯಿಂದ ಕಾರ್ಯನಿರ್ವಹಿಸಬೇಕು. ಇವತ್ತು ರಾಮಲಲ್ಲನ ವಿಗ್ರಹ ನಿರ್ಮಿಸಿದ್ದು ವಿಶ್ವಕರ್ಮ ಸಮಾಜದ ಪ್ರತಿಭೆ. ಅವರಿಂದಲೇ ಇಲ್ಲಿ ಅನ್ನಪೂರ್ಣೇಶ್ವರಿಯ ವಿಗ್ರಹ ನಿರ್ಮಾಣವಾಗಿದೆ ಎಂದರು.

ಕೇಮಾರು ಶ್ರೀ ಸಾಂದೀಪನಿ ಸಾಧನಾಶ್ರಮದ ಶ್ರೀ ವಿಠಲದಾಸ ಮಹಾಸ್ವಾಮೀಜಿಗಳು ಆಶೀರ್ವಚನ ನೀಡಿ, ದೇವಸ್ಥಾನಗಳು ಆಧ್ಯಾತ್ಮಿಕ ದೀಪಸ್ತಂಭಗಳಿದ್ದಂತೆ. ಭವಸಾಗರದಲ್ಲಿ ಮುಳುಗಿರುವರಿಗೆ ರಕ್ಷೆ ನೀಡುವುದು ದೇವಸ್ಥಾನಗಳು. ಅಪ್ರತಿಮವಾದ ಭಗವಂತನ ನೋಡಲು ಪ್ರತಿಮೆಯೇ ಮಾಧ್ಯಮ. ಹಾಗಾಗಿ ಪ್ರತಿಮೆಗಳ ಮೂಲಕ ಭಗವಂತನ ಆರಾಧನೆ ಮಾಡುತ್ತೇವೆ. ಧನಾತ್ಮಕವಾದ ಶಕ್ತಿಯನ್ನು ದೇವಸ್ಥಾನಗಳು ನೀಡುತ್ತವೆ. ಮಠ ಮಂದಿರಗಳು ಭಕ್ತಿ, ಜ್ಞಾನದ ಕೇಂದ್ರಗಳಾಗಿ ಕಾರ್ಯನಿರ್ವಹಿಸಬೇಕೆ ಹೊರತು ವ್ಯಾಪಾರಿ ಕೇಂದ್ರಗಳಾಗಬಾರದು. ಹಿಂದೂ ಸಮಾಜಕ್ಕೆ ಪ್ರೇರಣೆ ನೀಡುವ ಕೇಂದ್ರಗಳು ಮಠ ಮಂದಿರಗಳಾಗಬೇಕು ಎಂದರು.

ಸಾವಿತ್ರಿ ಪೀಠ, ವಡ್ನಾಳ್ ಮಹಾಸಂಸ್ಥಾನ ಮಠದ ಶ್ರೀ ಶಂಕರಾತ್ಮನಂದ ಸರಸ್ವತಿ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಕಜ್ಕೆ ಜ್ಞಾನ, ಭಕ್ತಿ, ಆದ್ಯಾತ್ಮಿಕತೆ ಕೇಂದ್ರ ಎನ್ನುವುದನ್ನು ನಿಸ್ಸಂದೇಹವಾಗಿ ಹೇಳಬಹುದು. ಕರಾವಳಿ ಭಾಗದಲ್ಲಿ ಶಕ್ತಿಯನ್ನು ಭಗವತಿಯ ರೂಪದಲ್ಲಿ ಆರಾಧಿಸುತ್ತಾರೆ. ಇಲ್ಲಿ ಅನ್ನಪೂರ್ಣೇಶ್ವರಿ ನೆಲೆ ನಿಂತು ಭಕ್ತರನ್ನು ಹರಸುತ್ತಿದ್ದಾಳೆ ಎಂದರು.

ಬೆಂಗಳೂರು ದಕ್ಷಿಣ ಜಗದ್ಗುರು ಪೀಠದ ಶಿವಾನಂದಭಾರತಿ ಸ್ವಾಮೀಜಿ ಮಾತನಾಡಿ, ದೇವಸ್ಥಾನಗಳು ಜ್ಞಾನ ಪ್ರಸರಣ ಕೇಂದ್ರಗಳಾಗಬೇಕು. ಭಕ್ತಿಯ ಮೂಲಕ ಭಗವಂತನ ಕೃಪೆಗೆ ಪಾತ್ರರಾಗಲು ದೇವಸ್ಥಾನಗಳು ಪೂರಕವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಜ್ಯೋತಿವೀದ್ವಾನ್ ಮತ್ತು ಜ್ಯೋತಿಷಿ ಕೆ.ಪಿ ಕುಮಾರಗುತ್ತು ತಂತ್ರಿಯವರು, ಕಾಂಗ್ರೆಸ್ ಮುಖಂಡರಾದ ಪ್ರಸಾದ ರಾಜ್ ಕಾಂಚನ್, ಎಸ್.ಕೆ‌ಎಫ್ ಎಲಿಗ್ಸೆರ್ ಆಡಳಿತ ನಿರ್ದೇಶಕ ಡಾ.ರಾಮಕೃಷ್ಣ ಆಚಾರ್, ಉದ್ಯಮಿ ವಿಠಲ್ ಬೆಳಂದೂರು,ಕಾಳಿಕಾಂಬಾ ದೇವಸ್ಥಾನ ಬಾರಕೂರು ಇದರ ೨ನೇ ಮೊಕ್ತೇಸರ ಪ್ರವೀಣ ಆಚಾರ್ಯ, ಕಾಳಿಕಾಂಬಾ ದೇವಸ್ಥಾನ ಕಾರ್ಕಳ ಇದರ ಆಡಳಿತ ಮೊಕ್ತೇಸರ ಶಿಲ್ಪಿ ರಾಮಚಂದ್ರ ಆಚಾರ್ಯ, ಹೋಟೆಲ್ ಉದ್ಯಮಿ ಬಾಲಕೃಷ್ಣ ಶೆಟ್ಟಿ ಬೆಳಗಾಂ, ವಸಂತ ಮುರಳಿ ಆಚಾರ್ಯ, ಡಾ.ಉಮೇಶ ಆಚಾರ್ಯ, ಅರೇಮಾದನಹಳ್ಳಿ ಶಾಖಾ ಮಠದ ಕಾರ್ಯಧ್ಯಕ್ಷ ಎಚ್ ರಾಜೇಶ್ ಆಚಾರ್ಯ ಮಠದಬೆಟ್ಟು,ಎಚ್.ಬಿ ಕುಮಾರ ಆಚಾರ್ಯ ಹಾಸನ, ಸಾಗರ ಕಾಳಿಕಾಂಬಾ ದೇವಸ್ಥಾನದ ರಮೇಶ, ಶಿವಮೊಗ್ಗ ಕಾಳಿಕಾರಮೇಶ್ವರಿ ದೇವಸ್ಥಾನದ ಸರ್ವೇಶ್ವರ ಆಚಾರ್ಯ, ಶಶಿಕಲಾ ಪ್ರಭಾಕರ ಆಚಾರ್ಯ ಅಲೆಯೂರು ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸ್ವಾಗತ ಸಮಿತಿ ಅಧ್ಯಕ್ಷ ಕಾಶೀನಾಥ ಶೆಣೈ, ಪ್ರಧಾನ ಗೌರವ ಮಾರ್ಗದರ್ಶಕರಾದ ನೇಜಾರು ವಿಶ್ವನಾಥ ರಾವ್, ನಿವೃತ್ತ ಮುಖ್ಯ ಶಿಕ್ಷಕ ಕರುಣಾಕರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಖಜಾನೆ ಸುಕುಮಾರ ಆಚಾರ್ಯ ಮುನಿಯಾಲು, ಕಾರ್ಯದರ್ಶಿ ರವೀಂದ್ರ ಆಚಾರ್ಯ ಪೆರ್ಡೂರು, ಭಾಸ್ಕರ ಆಚಾರ್ಯ ಮುದ್ರಾಡಿ, ಎ.ಮಂಜುನಾಥ ಆಚಾರ್ಯ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸ್ಥಳದಾನಿಗಳಾದ ಕೃಷ್ಣಯ್ಯ ಶೆಟ್ಟಿ, ಶ್ರೀಧರ ಕಾಮತ್ ಅವರನ್ನು ಸನ್ಮಾನಿಸಲಾಯಿತು. ರಸ್ತೆಗೆ ಸ್ಥಳ ನೀಡಿದ ಕರಿಯ ನಾಯ್ಕ ಹಾಗೂ ವಾಸ್ತು ಶಿಲ್ಪಿ, ಶಿಲಾ ಶಿಲ್ಪಿ, ಕಾಷ್ಠ ಶಿಲ್ಪಿಗಳನ್ನು ಗೌರವಿಸಲಾಯಿತು. ಟಿ.ಜಿ ಆಚಾರ್ಯ ಹೆಬ್ರಿ ಸ್ವಾಗತಿಸಿದರು. ನಿವೃತ್ತ ಶಿಕ್ಷಕ ಕರುಣಾಕರ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಕಾಶ ಆಚಾರ್ಯ ಕುಕ್ಕೆಹಳ್ಳಿ ಮತ್ತು ರಾಜೇಶ ಕುತ್ಯಾರು ಕಾರ್ಯಕ್ರಮ ನಿರ್ವಹಿಸಿದರು. ಉದಯ ಆಚಾರ್ಯ ಗೋಳಿಯಂಗಡಿ ವಂದಿಸಿದರು.

ಅನಂತ ಶ್ರೀ ವಿಭೂಷಿತ ಶಿವಸುಜ್ಞಾನ ತೀರ್ಥ ಶ್ರೀಗಳ ಉಪಸ್ಥಿತಿಯಲ್ಲಿ ಬ್ರಹ್ಮಶ್ರೀ ವಿಶ್ವನಾಥ ಪುರೋಹಿತರ ನೇತೃತ್ವದಲ್ಲಿ ಅನ್ನಪೂರ್ಣೇಶ್ವರಿ, ಗಣಪತಿ ದೇವರು ಹಾಗು ಆದಿಶಂಕರಾಚಾರ್ಯರ ಶಿಲಾಬಿಂಬ ಪ್ರತಿಷ್ಠೆ ಮತ್ತು ಮಹಾಕುಂಭಾಭಿಷೇಕ ನಡೆಯಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!