spot_img
Saturday, April 26, 2025
spot_img

ಮೋದಿ ಮೇಲೆ ಆರೋಪ ಹೊರಿಸುವುದು ಮಾತ್ರ ಕಾಂಗ್ರೆಸ್‌ ನ ಏಕಮಾತ್ರ ಅಜೆಂಡಾ : ಕಾಂಗ್ರೆಸ್‌ ವಿರುದ್ಧ ನಮೋ ತೀವ್ರ ಆಕ್ರೋಶ  

ಜನಪ್ರತಿನಿಧಿ (ನವ ದೆಹಲಿ ) : ನಾವೆಲ್ಲರೂ ಜೊತೆಗೂಡಿ ಕಾಂಗ್ರೆಸ್‌ನಿಂದ ಈ ದೇಶವನ್ನು ಕಾಪಾಡಬೇಕು, ದೇಶದ ನಾಗರಿಕರನ್ನು ಕಾಪಾಡಬೇಕು. ನಮ್ಮ ಮಕ್ಕಳ, ಯುವ ಜನತೆಯ ಭವಿಷ್ಯವನ್ನು ಕಾಪಾಡಬೇಕು, ಇದು ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತನ ಕೆಲಸ ಎಂದು ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಸಮಾಲೋಚನಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರದಾನಿ ಮೋದಿ, ಕಾಂಗ್ರೆಸ್‌ನ ಟ್ರ್ಯಾಕ್‌ ರೆಕಾರ್ಡ್‌ ನಮ್ಮೆಲ್ಲರ ಕಣ್ಣ ಮುಂದಿದೆ.  ಕಾಂಗ್ರೆಸ್‌ ಅಸ್ಥಿರತೆ ತುಂಬಿರುವ ಒಂದು ಪಕ್ಷ, ಕಾಂಗ್ರೆಸ್‌ ಪರಿವಾರ ರಾಜಕೀಯ ಮಾಡುವ ಪಕ್ಷ, ಕಾಂಗ್ರೆಸ್‌ ಭ್ರಷ್ಟಾಚಾರ ಮಾಡುವ ಪಕ್ಷ, ಕಾಂಗ್ರೆಸ್ ದುಷ್ಟ ರಾಜಕಾರಣವನ್ನು ಮಾಡುವ ಪಕ್ಷವಾಗಿದೆ ಎಂದು ಅವರು ಕಾಂಗ್ರೆಸ್‌ ವಿರುದ್ಧ ಮೋದಿ ಹರಿಹಾಯ್ದಿದ್ದಾರೆ.

ಕಾಂಗ್ರೆಸ್‌ನ ವಿರುದ್ಧ ಈ ದೇಶದಲ್ಲಿ ಕೋಪ ಹೆಚ್ಚಾಗುವುದು ಆರಂಭವಾಗಿದೆ. ಕಾಂಗ್ರೆಸ್‌ನಲ್ಲಿ ವಿಕಾಸದ ಅಜೆಂಡಾವೇ ಇಲ್ಲ. ಕಾಂಗ್ರೆಸ್‌ಗೆ ಭವಿಷ್ಯದ ಬಗ್ಗೆ ಏನೂ ಗೊತ್ತಿಲ್ಲ.  ದೇಶವನ್ನು ಇವರು ಭಾಷೆಯ ಆಧಾರದ ಮೇಲೆ ಅಥವಾ ಕ್ಷೇತ್ರದ ಆಧಾರದ ಮೇಲೆ ವಿಭಜಿಸುವುದನ್ನೇ ನೋಡುತ್ತಿರುತ್ತಾರೆ, ದೇಶ ಹೊತ್ತಿ ಉರಿಯುವುದನ್ನೇ ನಿರೀಕ್ಷಿಸುತ್ತಿರುತ್ತಾರೆ. ದೇಶದ ಸೈನಿಕರ ಮನೋಬಲವನ್ನು ಮುರಿಯುವುದರಲ್ಲೂ ಕೂಡ ಕಾಂಗ್ರೆಸ್‌ ಹಿಂದೆ ಉಳಿಯುವುದಿಲ್ಲ ಎಂದು ಪ್ರಧಾನಿ ಕಾಂಗ್ರೆಸ್‌ ವಿರುದ್ಧ ಕಿಡಿ ಕಾರಿದ್ದಾರೆ.

ದೇಶದ ರಕ್ಷಣೆಯ ಬಗ್ಗೆ ಏನಾದರೂ ಆದಾಗಲೂ ಕೂಡ ಹಾಗೂ ನಮ್ಮ ಸೈನಿಕರು ಏನಾದರೂ ಸಾಧಿಸಿದಾಗಲೂ ಕೂಡ ಕಾಂಗ್ರೆಸ್‌ ಅದನ್ನು ಪ್ರಶ್ನೆ ಮಾಡಿದೆ. ಐದು ವರ್ಷಗಳ ಹಿಂದೆ ಕಾಂಗ್ರೆಸ್‌ ಏನು ಹೇಳಿದೆ ಎಂದು ನೀವು ಯೋಚನೆ ಮಾಡಿ. ನಮ್ಮ ವಾಯು ಸೈನ್ಯಕ್ಕೆ ರಫೇಲ್‌ ಥರದ ಅಡ್ವಾನ್ಸ್ಡ್‌ ಏರ್‌ಕ್ರಾಫ್ಟ್‌ ಸಿಗಬಾರದು ಎಂದು ಕಾಂಗ್ರೆಸ್‌ ಪ್ರಯತ್ನ ಮಾಡಿತ್ತು. ಎಚ್‌ಎಎಲ್‌ ನನ್ನು ಮುಳುಗಿಸುತ್ತಿದ್ದೇವೆ ಎಂದು ನಮ್ಮ ವಿರುದ್ಧ ಕಾಂಗ್ರೆಸ್‌ ಅಪಪ್ರಚಾರ ಮಾಡಿತ್ತು. ಎಚ್‌ಎಎಲ್‌ ಹೇಗೆ ಈಗ ವೇಗವಾಗಿ ಮುನ್ನುಗ್ಗುತ್ತಿದೆ ಎಂದು ನೀವೇ ಗಮನಿಸುತ್ತಿದ್ದೀರಿ ಎಂದು ಅವರು ಹೇಳಿದ್ದಾರೆ.

ಇನ್ನು, ಕಾಂಗ್ರೆಸ್‌ ಪ್ರತಿಸಲ ಭಾರತೀಯ ಸೈನ್ಯವನ್ನು ಅವಮಾನ ಮಾಡುವುದರಲ್ಲೇ ಕಾಲ ಹರಣ ಮಾಡಿದೆ. ಕಾಂಗ್ರೆಸ್‌ ತುಂಬಾ ಚಂಚಲವಾಗಿದೆ. ಕಾಂಗ್ರೆಸ್‌ನಲ್ಲೇ ಗುದ್ದಾಟವಾಗುತ್ತಿದೆ. ಕಾಂಗ್ರೆಸ್‌ನ ಒಂದು ವರ್ಗ ಯಾವಾಗಲೂ ಮೋದಿಯನ್ನು ಆದಷ್ಟು ದ್ವೇಷ ಮಾಡಬೇಕು ಎಂದು ಹೇಳುತ್ತದೆ. ಮೋದಿ ಮೇಲೆ ವ್ಯಕ್ತಿಗತ ಆರೋಪ ಹೊರಿಸಬೇಕು, ಮೋದಿಯನ್ನು ಕೆಳಗಿಳಿಸುವುದಕ್ಕೆ ಎಷ್ಟು ಪ್ರಯತ್ನ ಆಗುತ್ತದೋ ಅಷ್ಟು ಪ್ರಯತ್ನ ಮಾಡು ಎಂದು ಹೇಳುತ್ತದೆ. ಇನ್ನೊಂದು ವರ್ಗ ಕಾಂಗ್ರೆಸ್‌ನಲ್ಲಿದೆ. ಆ ವರ್ಗ ಕಾಂಗ್ರೆಸ್‌ ಪರಂಪರೆಯಿಂದ ಹೊರಬಂದಿರುವವರು. ಆ ಇನ್ನೊಂದು ವರ್ಗ ಏನು ಹೇಳುತ್ತದೆ ಎಂದರೇ, ಮೋದಿ ಮೇಲೆ ವ್ಯಕ್ತಿಗತ ದ್ವೇಷ ಅಥವಾ ಆರೋಪ ಮಾಡುವುದಿದ್ದರೇ ಕಾಂಗ್ರೆಸ್‌ನಿಂದ ಹೊರಗೆ ಹೋಗು ಎಂದು ಹೇಳುತ್ತದೆ. ಕಾಂಗ್ರೆಸ್‌ ನಮ್ಮ ಹಾಗೆ ಸಿದ್ಧಾಂತಗಳಿಗಾಗಿ ಗುದ್ದಾಟ ಮಾಡುತ್ತಿಲ್ಲ. ಸಿದ್ಧಾಂತಗಳನ್ನು ವಿರೋಧಿಸುವಷ್ಟರ ಮಟ್ಟಿಗೆ ಕಾಂಗ್ರೆಸ್‌ ಕೆಳಮಟ್ಟದಲ್ಲಿದೆ. ವೈಚಾರಿಕ ವಿರೋಧ ಮಾಡುವುದರಲ್ಲೂ ಕಾಂಗ್ರೆಸ್‌ ಹಿಂದುಳಿದಿಲ್ಲ. ಮೋದಿ ಮೇಲೆ ಆರೋಪ ಹೊರಿಸುವುದು ಮಾತ್ರ ಕಾಂಗ್ರೆಸ್‌ ನ ಏಕಮಾತ್ರ ಅಜೆಂಡಾ ಆಗಿ ಹೋಗಿದೆ ಎಂದು ಕಾಂಗ್ರೆಸ್‌ ವಿರುದ್ಧ ಮೋದಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,300SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!