Sunday, September 8, 2024

ಉದ್ಯೋಗ ಖಾತ್ರಿ ಯೋಜನೆಯನ್ನು ಜನರಿಗೆ ಸಿಗದಂತೆ ಮಾಡುವ ಹುನ್ನಾರ ನಡೆಯುತ್ತಿದೆ : ರಮೇಶ್‌ ಶೆಟ್ಟಿ ವಕ್ವಾಡಿ ಆಕ್ರೋಶ

ಜನಪ್ರತಿನಿಧಿ (ಕುಂದಾಪುರ) : ಉದ್ಯೋಗ ಖಾತ್ರಿ ಕೂಲಿ ಪಾವತಿಯಾಗದೇ ಮೂರು ತಿಂಗಳು ಆಗಿದೆ. ಜನರು ಬಾವಿ ಮತ್ತು ವಯಕ್ತಿಕ ಕೆಲಸಗಳನ್ನು ಮಳೆಗಾಲದ ಸಮಯ ಹೊರತುಪಡಿಸಿ ಮಾಡಬೇಕಾಗಿದೆ. ಯೋಜನೆ ಅಡಿಯಲ್ಲಿ ಕೆಲಸ ಮಾಡುತ್ತಿರುವ ಜನರಿಗೆ ಸರಿಯಾದ ಸಮಯಕ್ಕೆ ಕೂಲಿ ಪಾವತಿಯಾಗದೇ, ಸಮಯಕ್ಕೆ ಸರಿಯಾಗಿ ಎಸ್ಟೀಮೆಟ್ ಗಳು ಆಗದೇ ಜನರು ಪರದಾಡುತ್ತಿದ್ದಾರೆ. ಇದರ ಬಗ್ಗೆ ಕೂಡಲೇ ಸರಕಾರ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಕುಂದಾಪುರ ತಾಲೂಕು ಪಂಚಾಯತ್ ರಾಜ್ ಒಕ್ಕೂಟ (ಕುಂದಾಪುರ ವಲಯ)ದ ಸಂಚಾಲಕ ರಮೇಶ್ ಶೆಟ್ಟಿ ವಕ್ವಾಡಿ ಒತ್ತಾಯಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿ ಆಕ್ರೋಶ ಹೊರಹಾಕಿದ ರಮೇಶ್‌ ಶೆಟ್ಟಿ ವಕ್ವಾಡಿ, ಗ್ರಾಮ ಸರಕಾರ ಎಂದು ಕರೆಸಿಕೊಳ್ಳುವ ಗ್ರಾಮ ಪಂಚಾಯತ್ ಕೇವಲ ಅಧಿಕಾರಿಗಳ ಆದೇಶಕ್ಕೆ ಕೆಲಸ ಮಾಡುವ ಇಲಾಖೆಯಾಗಿ ಪರಿವರ್ತನೆ ಆಗುತ್ತಿದೆ. ಸ್ವಂತ ಅನುದಾನಗಳು ಕಛೇರಿ ಅಗತ್ಯತೆಗಳಿಗೆ ಮೀಸಲಾಗುತ್ತಿದ್ದು, ಹದಿನೈದನೇ ಹಣಕಾಸು ನಿರ್ವಹಣೆಗೆ ಸರಕಾರದ ಮಾನದಂಡದಡಿ ಹಲವಾರು ನಿಬಂಧನೆಗಳಿಂದ, ಸ್ಥಳೀಯ ಜನರ ಸಣ್ಣ ಪುಟ್ಟ ಸಮಸ್ಯೆ ಗಳುನ್ನು ಈಡೇರಿಸಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ ಎಂದು ಅವರು ಹೇಳಿದ್ದಾರೆ.

ಗ್ರಾಮಪಂಚಾಯತಿಗಳು ಸ್ಥಳೀಯ ಜನರ ವೈಯಕ್ತಿಕ ಕೆಲಸಗಳನ್ನು (ಬಾವಿ, ಕೊಟ್ಟಿಗೆ ಇತ್ಯಾದಿ) ಹಾಗೂ ಸಾರ್ವಜನಿಕ ಕೆಲಸಗಳನ್ನು ನಿರ್ವಹಿಸಲು “ಉದ್ಯೋಗ ಖಾತ್ರಿ” ಯೋಜನೆಯೊಂದೇ ಆಧಾರವಾಗಿತ್ತು. ಆದರೆ ಇದೀಗ ಈ ಯೋಜನೆಯನ್ನೂ ಜನರಿಗೆ ಸಿಗದಂತೆ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಅವರು ಕಿಡಿ ಕಾರಿದ್ದಾರೆ.

ಸರಿಯಾದ ಸಮಯಕ್ಕೆ ಅನುಮೋದನೆ ದೊರೆಯದೇ, ಸರಿಯಾದ ಸಮಯಕ್ಕೆ ಇಂಜಿನಿಯರ್ ಗಳ ಎಸ್ಟಿಮೇಟ್  ದೊರೆಯದೇ ಜನರು ಸೌಲಭ್ಯದಿಂದ ವಂಚಿತರಾಗುತ್ತಿದ್ದು, ಹಲವಾರು ಕಟ್ಟುನಿಟ್ಟಿನ ನಿಯಮಗಳು ಕೆಲಸ ಆಗಲೇ ಬಾರದು ಎನ್ನುವ ಕಾರ್ಯಸೂಚಿ ಮಾಡಿದಂತಿದೆ. ಜಿಲ್ಲಾ ಪಂಚಾಯತ್ ನಿಂದ ಮೆಟೀರಿಯಲ್ ಬಿಲ್ಲಿಗೆ ಕೂಡಾ ವಿನಾಕಾರಣ ತೊಂದರೆ ನೀಡುತ್ತಿದ್ದು , ಇದು ಅಧಿಕಾರಿ ವ್ಯವಸ್ಥೆ ದರ್ಪದಂತಿದೆ. ಕೆಲಸ ಆಗದ ಬಗ್ಗೆ ಅಥವಾ ಸುಳ್ಳು ದಾಖಲೆಯ ಬಗ್ಗೆ ತನಿಖೆ ಮಾಡಿ ಕ್ರಮಕೈಗೊಳ್ಳುವುದನ್ನು ಬಿಟ್ಟು ವಿನಾ ಕಾರಣ ಜನರಿಗೆ ತೊಂದರೆ ನೀಡುತ್ತಿದ್ದಾರೆ. ಕೂಡಲೇ ಸರಕಾರ , ಸಚಿವರು ಮತ್ತು ಅಧಿಕಾರಿಗಳು ಇದರ ಬಗ್ಗೆ ಸೂಕ್ತ ಕ್ರಮವಹಿಸಬೇಕು ಎಂದು ಒತ್ತಾಯಿಸಿದ್ದಲ್ಲದೇ, ಇಲ್ಲದೇ ಇದ್ದಲ್ಲಿ ಗ್ರಾಮಪಂಚಾಯತ್ ಸದಸ್ಯರನ್ನು ಒಗ್ಗೂಡಿಸಿಕೊಂಡು ಪ್ರತಿಭಟನೆ ಅನಿವಾರ್ಯ ಆಗಲಿದೆ ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ.

342.56 ಕೋಟಿ ಕೂಲಿ ಬಾಕಿ :

ನರೇಗಾ ಯೋಜನೆಯಡಿ ವಿವಿಧ ಅಭಿವೃದ್ಧಿ ಚಟುವಟಿಕೆಗಳು ನಡೆಯುತ್ತಿವೆ. ಪ್ರತಿ ವ್ಯಕ್ತಿ ದಿನ 316 ರೂ. ಕೂಲಿ ಇದೆ. 2023 ರ ನವೆಂಬರ್ 30 ರಿಂದ 2024 ರ ಫೆಬ್ರವರಿ ಯವರೆಗೆ ದುಡಿದ ಕಾರ್ಮಿಕರಿಗೆ 342.56 ಕೋಟಿ ಕೂಲಿ ಪಾವತಿಯಾಗಬೇಕು. ಆದರೇ, ಈವರೆಗೆ ಪಾವತಿ ಆಗಿಲ್ಲ ಎಂದು ಉದ್ಯೋಗ ಖಾತ್ರಿ ಯೋಜನೆ ಅಧಿಕಾರಿಗಳೇ ಮಾಹಿತಿ ನೀಡುತ್ತಾರೆ.

ಕೇಂದ್ರದಿಂದ ರಾಜ್ಯಕ್ಕೆ ಅನುದಾನ ಬಿಡುಗಡೆ ಆಗುವುದು ವಿಳಂಬವಾಗುತ್ತಿದೆ. ಈ ಕಾರಣದಿಂದ ಕಾರ್ಮಿಕರಿಗೆ ಕೂಲಿ ಪಾವತಿಸಲು ಸಾಧ್ಯವಾಗುತ್ತಿಲ್ಲ ಎಂಬ ಅಭಿಪ್ರಾಯಯವೂ ಇದೆ ಎನ್ನುವುದು ಇಲ್ಲಿ ಉಲ್ಲೇಖಾರ್ಹ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!