Sunday, September 8, 2024

ಕುವೆಂಪು ಅವರ ರಚನೆಯನ್ನೂ ತೆಗೆಯುತ್ತೇವೆ ಎನ್ನುವ ರಾಜ್ಯ ಸರ್ಕಾರದ ವಿಕೃತ ಮನಸ್ಥಿತಿ ಇದು : ಕೋಟಾ ಶ್ರೀನಿವಾಸ ಪೂಜಾರಿ

ಜನಪ್ರತಿನಿಧಿ (ಬೆಂಗಳೂರು) : ಕರ್ನಾಟಕದ ಕಾಂಗ್ರೆಸ್‌ ಸರ್ಕಾರಕ್ಕೆ ಏನಾಗಿದೆ ಎನ್ನುವುದು ಗೊತ್ತಿಲ್ಲ.ಕುವೆಂಪು ಅವರ ರಚನೆಯ ಜ್ಙಾನ ದೇಗುಲವಿದು ಕೈ ಮುಗಿದು ಒಳಗೆ ಬಾʼ ಎನ್ನುವ ಬರಹವನ್ನು ವಸತಿ ಶಾಲೆಯಿಂದ ಬದಲಿಸಿ ʼಜ್ಙಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸುʼ ಎನ್ನುವ ಹೊಸ ಶಿರೋನಾಮೆ ನೀಡುವುದಕ್ಕೆ ಸರ್ಕಾರ ಆದೇಶ ಕೊಟ್ಟಿದೆ. ಇದೊಂದು ವಿಕೃತ ಮನಸ್ಸು ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ʼಕೈ ಮುಗಿದುʼ ಎನ್ನುವ ಶಬ್ದ ಕಾಂಗ್ರೆಸಿಗರಿಗೆ ಹಿಂದುಗಳಿಗಾಗೀರಬಹುದೇನೋ ಎನ್ನುವ ಆತಂಕವನ್ನು ಸರ್ಕಾರ ಆತಂಕ ವ್ಯಕ್ತಪಡಿಸುತ್ತಿರಬಹುದೇನೋ ಗೊತ್ತಿಲ್ಲ ಎಂದು ಅವರು ಹೇಳಿದ್ದಾರೆ.

ದುರದೃಷ್ಟಕರವಾಗಿ ಸರ್ಕಾರ ಎಷ್ಟೊಂದು ಮಾನಸಿಕವಾಗಿ ವಿರೋಧಾಬಾಸವನ್ನು ಹೊಂದಿದೆಯೆಂದರೇ, ಕುವೆಂಪು ಅವರ ರಚನೆಯನ್ನಾದರೂ ಬದಾಲಾಯಿಸುತ್ತೇವೆ. ಒಟ್ಟಾರೆಯಾಗಿ ʼಕೈ ಮುಗಿದುʼ ಎನ್ನುವ ಶಬ್ದವನ್ನು ತೆಗೆಯುತ್ತೇವೆ ಎನ್ನುವ ವಿಕೃತ ಮನಸ್ಥಿತಿಯನ್ನು ಅತ್ಯಂತ ಪ್ರಬಲವಾಗಿ ಖಂಡಿಸುತ್ತೇವೆ ಎಂದು ಅವರು ಹೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!