spot_img
Saturday, June 21, 2025
spot_img

ಕಾಂಗ್ರೆಸ್ ಸಮಾವೇಶ : ಸಿಎಂ ಗೆ ಕಪ್ಪು ಬಾವುಟ ಪ್ರದರ್ಶನ, ಘೆರಾವ್‌ ಗೆ ಯತ್ನ

ಜನಪ್ರತಿನಿಧಿ (ಮಂಗಳೂರು) : ರಾಜ್ಯ ಸರ್ಕಾರ ಹಿಂದೂ ವಿರೋಧಿ ಧೋರಣೆಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕಪ್ಪು ಬಾವುಟ ಪ್ರದರ್ಶಿಸಿ, ಘೇರಾವ್ ಗೆ ಯತ್ನಿಸಿದ ಘಟನೆ ಹೊರವಲಯ ಬೋಂದೆಲ್ ಬಳಿ ಇಂದು(ಶನಿವಾರ) ನಡೆಯಿತು.

ಅಡ್ಯಾರ್ ನ ಸಹ್ಯಾದಿ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ರಾಜ್ಯಮಟ್ಟದ ಸಮಾವೇಶಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಭಿತ್ತಿಪತ್ರ ಹಿಡಿದು ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರು, ಕಾರನ್ನು ತಡೆದು ಘೇರಾವ್ ಹಾಕಲು ಪ್ರಯತ್ನಿಸಿರುವ ಘಟನೆ.

ಶಾಸಕ ಭರತ್ ಶೆಟ್ಟಿ ಹಾಗೂ ವೇದವ್ಯಾಸ್ ಕಾಮತ್ ಮೇಲೆ ಕಾರಣವಿಲ್ಲದೇ ಎಫ್ ಐಆರ್ ದಾಖಲಿಸಲಾಗಿದೆ ಎಂದು ಆರೋಪಿಸಿ, ಘೇರಾವ್‌ ಹಾಕುವ ಪ್ರಯತ್ನ ಮಾಡಿದರು. ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.  

Related Articles

Stay Connected

21,961FansLike
3,912FollowersFollow
22,400SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!