Sunday, September 8, 2024

ಕುಂದಾಪುರ ರೂರಲ್ ಆಯುರ್ವೇದ ಮೆಡಿಕಲ್ ಕಾಲೇಜು: ಉಚಿತ ಬಂಜೆತನ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ

ಕುಂದಾಪುರ: ( ಜನಪ್ರತಿನಿಧಿ ವಾರ್ತೆ) ಕುಂದಾಪುರ ರೂರಲ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಕೋಟೇಶ್ವರ ಇಲ್ಲಿ ಫೆ.19ರಿಂದ ಫೆ.24 ರ ತನಕ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1.30ರ ತನಕ ಆಸ್ಪತ್ರೆಯ ಕಾಯಚಿಕಿತ್ಸಾ, ಪ್ರಸೂತಿ ತಂತ್ರ ಮತ್ತು ರೋಗ ನಿದಾನ ವಿಭಾಗದ ವತಿಯಿಂದ ಉಚಿತ ಬಂಜೆತನ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ನಡೆಯಲಿದೆ ಎಂದು ಕಾಲೇಜಿನ ಪ್ರಾಚಾರ್ಯರಾದ ಡಾ.ಎಸ್.ಜಿ.ಪ್ರಸನ್ನ ಐತಾಳ್ ಹೇಳಿದರು.

ಅವರು ಕುಂದಾಪುರ ಪ್ರೆಸ್‌ಕ್ಲಬ್‌ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.

ಮದುವೆಯಾಗಿ ಒಂದು ವರ್ಷಕ್ಕಿಂತ ಹೆಚ್ಚು ಸಮಯದಿಂದ ಗರ್ಭಧಾರಣೆಗೆ ಪ್ರಯತ್ನಿಸಿದ್ದಲ್ಲಿ ಮತ್ತು ಗರ್ಭಧಾರಣೆ ಆದರೂ ಪದೇ ಪದೇ ಗರ್ಭಪಾತವಾಗುತ್ತಿದ್ದಲ್ಲಿ ಅಥವಾ ದಂಪತಿಗಳಲ್ಲಿ ಕೆಳಕಂಡ ಯಾವುದೇ ತರಹದ ಸಮಸ್ಯೆಗಳಿದ್ದಲ್ಲಿ ಅದಕ್ಕೆ ತಪಾಸಣೆ ಮತ್ತು ಚಿಕಿತ್ಸೆ ಲಭ್ಯವಿದೆ ಎಂದರು.

ಮುಖ್ಯವಾಗಿ ಸ್ತ್ರೀಯರಲ್ಲಿ ಮುಟ್ಟಿನ ಸಮಸ್ಯೆಗಳು, ಪಿ.ಸಿ.ಓ.ಡಿ ಥೈರಾಯ್ಡ್‌ನಂತಹ ಹಾರ್ಮೋನುಗಳ ವ್ಯತ್ಯಾಸಗಳು, ಫೈಬ್ರಾಯ್ಡ್, ಎಂಡೋಮೆಟ್ರಿಯಾಸಿಸ್ ನಂತಹ ಗರ್ಭಾಶಯದ ಸಮಸ್ಯೆಗಳು ಮತ್ತು ಪದೇ ಪದೇ ಗರ್ಭಸ್ರಾವ, ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಮತ್ತು ಪಿ.ಸಿ.ಓ.ಡಿ ಗುಣಮಟ್ಟದ ಸಮಸ್ಯೆಗಳು, ವೃಷಣದ ಊತ, ವೆರಿಕೋಸಿಸ್ ಸಮಸ್ಯೆಗಳು, ಜನನಾಂಗದ ಸೋಂಕು ಮತ್ತು ಇತರ ತೊಂದರೆಗಳಿಗೆ ಚಿಕಿತ್ಸೆ ಲಭ್ಯವಿದೆ ಎಂದರು.

ಈ ಶಿಬಿರದ ಪ್ರಮುಖ ಅಂಶಗಳು ಎಂದರೆ ಉಚಿತ ತಪಾಸಣೆ, ಪಥ್ಯಾಹಾರ ಸಲಹೆ, ಶೇ.೧೦ ರಿಯಾಯತಿ ದರದಲ್ಲಿ ಚಿಕಿತ್ಸೆ ಹಾಗೂ ಪ್ರಯೋಗಾಲಯ ಪರೀಕ್ಷೆ ಇದೆ ಎಂದರು.

ಆಸ್ಪತ್ರೆಯಲ್ಲಿರುವ ಸೌಲಭ್ಯಗಳು:
ಕುಂದಾಪುರ ರೂರಲ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಕೋಟೇಶ್ವರ ಇಲ್ಲಿ ಸುಸಜ್ಜಿತ ಒಳರೋಗಿ ಮತ್ತು ಹೊರರೋಗಿ ವಿಭಾಗಗಳು, ರೋಗ ನಿದಾನ ವಿಭಾಗ (ಲ್ಯಾಬೋರೇಟರಿ, ಎಕ್ಸ್-ರೇ), ಪಂಚಕರ್ಮ ವಿಭಾಗ, ಶಸ್ತ್ರ ಚಿಕಿತ್ಸಾ ವಿಭಾಗ, ಸೌಂದರ್ಯ ಚಿಕಿತ್ಸಾ ವಿಭಾಗ, ಫಿಸಿಯೋಥೆರಪಿ ವಿಭಾಗ, ಯೋಗ ಥೆರಪಿ, ಅಕ್ಯುಪಂಕ್ಚರ್ ಥೆರಪಿ, ಕಪ್ಪಿಂಗ್ ಥೆರಪಿ, ಲೀಚ್ ಥೆರಪಿ, ಅಗ್ನಿಕರ್ಮ, ಆಯುರ್ವೇದ ಔಷಧಾಲಯ, ಪಥ್ಯ ಆಹಾರ ವಿಭಾಗ (ಡಯಟ್) ಸೌಲಭ್ಯಗಳು ಇರುತ್ತದೆ ಎಂದರು.

ಪ್ರತಿ ಸೋಮವಾರ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1.30ರ ತನಕ ಉಚಿತ ವೈದ್ಯಕೀಯ ತಪಾಸಣೆ ಇರುತ್ತದೆ ಎಂದು ಅವರು ಹೇಳಿದರು.

ಸುದ್ಧಿಗೋಷ್ಠಿಯಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಪ್ರದೀಪ ಕುಮಾರ ಶೆಟ್ಟಿ, ಸಹಾಯಕ ಪ್ರಾಧ್ಯಾಪಕ ಡಾ.ಶ್ರೀಕಾಂತ್ ಆಚಾರ್ಯ, ಡಾ.ಪೂಜಾ ಶೆಟ್ಟಿ, ಡಾ.ಅಕ್ಷತಾ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!