spot_img
Wednesday, January 22, 2025
spot_img

ಅತ್ಯಾಚಾರ ಸಾಬೀತು :  ಕುಂದಾಪುರ ಮೂಲದ ಹೆಸ್ಕಾಂ ಇಂಜಿನಿಯರ್‌ಗೆ ಏಳು ವರ್ಷ ಸಜೆ

ಕುಂದಾಪುರಕ್ಕೆ ವರ್ಗಾವಣೆಗೊಂಡಿದ್ದಾಗ ಯುವತಿ ಮೇಲೆ ಅತ್ಯಾಚಾರ !

ಜನಪ್ರತಿನಿಧಿ (ಕುಂದಾಪುರ) : ವಿವಾಹ ಆಗುವುದಾಗಿ ನಂಬಿಸಿ ಯುವತಿಯ ಮೇಲೆ ಅತ್ಯಾಚಾರವೆಸಗಿರುವ ಪ್ರಕರಣ ಸಾಬೀತಾಗಿರುವ ಹಿನ್ನೆಲೆಯಲ್ಲಿ ಹೈಕೋರ್ಟ್‌ ಆರೋಪಿ ಕುಂದಾಪುರದ ಬೆಟ್ಕೇರಿ ನಿವಾಸಿ ರಾಕೇಶ್‌ ಬಿ. ಗೆ ಏಳು ವರ್ಷಗಳ ಕಾಲ ಜೈಲು ಶಿಕ್ಷೆ ನೀಡಿ ರಾಜ್ಯ ಹೈಕೋರ್ಟ್‌ ತೀರ್ಪು ನೀಡಿದೆ.

ರಾಕೇಶ್‌ ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪೆನಿ (ಹೆಸ್ಕಾಂ) ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ. ಕುಮುಟಾದಲ್ಲಿ ಸೇವೆ ಸಲ್ಲಿಸುತ್ತಿರುವಾಗ ರಾಕೇಶ್‌ಗೆ ಬಿಇಡಿ ವ್ಯಾಸಂಗ ಮಾಡುತ್ತಿದ್ದ ಯುವತಿಯೋರ್ವಳೊಂದಿಗೆ ಪ್ರೇಮಾಂಕುರವಾಗಿತ್ತು. ತಾನೇ ಮದುವೆ ಆಗುವುದಾಗಿ ಆ ಯುವತಿಯನ್ನು ನಂಬಿಸಿದ್ದ. ತದನಂತರ ಕುಮುಟಾದಿಂದ ಬಂಟ್ವಾಳಕ್ಕೆ ವರ್ಗಾವಣೆಗೊಂಡಿದ್ದ ಮತ್ತು ಆ ಬಳಿಕ ಕುಂದಾಪುರಕ್ಕೆ ವರ್ಗಾವಣೆಗೊಂಡಿದ್ದ.

೨೦೧೫ರಲ್ಲಿ ಕುಂದಾಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಯುವತಿಯನ್ನು ಕುಂದಾಪುರಕ್ಕೆ ಕರೆಸಿಕೊಂಡಿದ್ದಲ್ಲದೇ, ಒಪ್ಪಿಗೆಯಿಲ್ಲದೇ  ಆಕೆಯನ್ನು ಬಲವಂತ ಪಡಿಸಿ  ದೈಹಿಕ ಸಂಪರ್ಕ ಬೆಳೆಸಿದ್ದ, ಈ ಸಂಬಂಧಿಸಿದಂತೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಕುಂದಾಪುರ ನ್ಯಾಯಾಲಯ ಆರೋಪಿ ರಾಕೇಶ್‌ ಬಿ. ಎಂಬಾತನನ್ನು ನಿರ್ದೋಷಿ ಎಂದು ತೀರ್ಪು ನೀಡಿತ್ತು. ಸಂತ್ರಸ್ತೆ ಯುವತಿ ಕುಂದಾಪುರ ನ್ಯಾಯಾಲಯ ನೀಡಿದ್ದ ತೀರ್ಪನ್ನು ಪ್ರಶ್ನಿಸಿ  ಹೈಕೋರ್ಟ್‌ ಗೆ ಮೇಲ್ಮನವಿ ಸಲ್ಲಿಸಿದ್ದಳು.  ನ್ಯಾ| ಪ್ರಭಾಕರ ಶಾಸ್ತ್ರೀ ಹಾಗೂ ನ್ಯಾ| ಉಮೇಶ್‌ ಅಡಿಗ ಅವರಿದ್ದ ಹೈಕೋರ್ಟ್‌ನ ದ್ವೀಸದಸ್ಯ ನ್ಯಾಯಪೀಠ ಪ್ರಕರಣದ ವಿಚಾರಣೆ ಮಾಡಿ ರಾಕೇಶ್‌ ಬಿ. ದೋಷಿ ಎಂದು ತೀರ್ಪು ನೀಡಿದೆ.

ಈ ಸಂಬಂಧಿಸಿದಂತೆ ರಾಕೇಶ್‌ ಗೆ ಏಳು ವರ್ಷಗಳ ಸಜೆ ಹಾಗೂ ಐವತ್ತು ಸಾವಿರ ದಂಡ ಪಾವತಿಸಲು ಹೈಕೋರ್ಟ್‌ ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ. ಹಾಗೂ ದಂಡ ಕಟ್ಟಲು ವಿಫಲವಾದರೇ ಮತ್ತೆ ಆರು ತಿಂಗಳ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದಿದೆ.

ಶಿಕ್ಷೆಯನ್ನು ಏಕಕಾಲದಲ್ಲಿ ಅನುಭವಿಸಬೇಕು ಎಂದು ಹೈಕೋರ್ಟ್‌ ಹೇಳಿದ್ದು, ನಲವತ್ತೈದು ಸಾವಿರ ರೂ. ಸಂತ್ರಸ್ತೆಗೆ ಹಾಗೂ ಐದು ಸಾವಿರ ರೂಗಳನ್ನು ರಾಜ್ಯ ಸರ್ಕಾರಕ್ಕೆ ಪಾವತಿಸಬೇಕು ಎಂದಿದೆ.

ಇನ್ನು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸಂತ್ರಸ್ತೆಗೆ ಪಾವತಿಸಬೇಕಾದ ಪರಿಹಾರ ಮೊತ್ತದ ಕುರಿತಾಗಿ ಆರು ತಿಂಗಳೊಳಗಾಗಿ ತೀರ್ಮಾನ ತೆಗೆದುಕೊಳ್ಳಬೇಕು, ಅಪರಾಧಿ ರಾಕೇಶ್‌ ೪೫ ದಿನಗಳೊಳಗಾಗಿ ಸೆಷನ್ಸ್‌ ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ಹೈಕೋರ್ಟ್‌ ಆದೇಶಿಸಿದೆ.

ಪ್ರಕರಣದಲ್ಲಿ ಕುಂದಾಪುರದ ವಕೀಲ ರವಿಕಿರಣ್‌ ಮುರ್ಡೇಶ್ವರ್‌ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಆಗಿ ಹಾಗೂ ಸಂತ್ರಸ್ತ ಯುವತಿ ಪರ ಹರೀಶ್‌ ಟಿ. ಭಂಡಾರಿ ವಾದ ಮಾಡಿದ್ದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!