Sunday, September 8, 2024

‘ಮರೆಯದಿರು ಓಲವೇ’ ಮ್ಯೂಸಿಕ್ ವೀಡಿಯೋ ಫೆ.14ರಂದು ಬಿಡುಗಡೆ

ಸಂದೇಶಗಳ ವಿಚಾರದಲ್ಲಿ ತಪ್ಪಾಗಿ ಅರ್ಥೈಸಿಕೊಂಡು ಅನುಭವಿಸುವ ಕೊರಗಿನ ಕುರಿತಾದ ಸಂಗೀತ ದೃಶ್ಯ ಸುರುಳಿ

ಕುಂದಾಪುರ: ಜನರ ಪರಸ್ಪರ ಸಂಬಂಧಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೇಸೆಜ್ ಗಳ ವಿಚಾರದಲ್ಲಿ ತಪ್ಪಾಗಿ ಅರ್ಥೈಸಿಕೊಂಡು ಅನುಭವಿಸುವ ಕೊರಗಿನ ಕುರಿತಾಗಿ ಮಾಡಿರುವ ಮರೆಯದಿರು ಓಲವೇ ಮ್ಯೂಸಿಕ್ ವಿಡಿಯೋ ಐಶ್ವರ್ಯ ಮೀಡಿಯಾ ಯ್ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಚಿತ್ರಕ್ಕೆ ನಾಗೇಶ್ ಕುಂದಾಪುರ ಚಿತ್ರ ಕಥೆ ಮತ್ತು ನಿರ್ದೇಶನ ಮಾಡಿದ್ದಾರೆ. ರಾಘವೇಂದ್ರ ಎಸ್ ಬೀಜಾಡಿ ಛಾಯಾಗ್ರಹಣ ಮತ್ತು ಸಂಕಲನ ಮಾಡಿ ತಮ್ಮ ಕೈ ಚಳಕವನ್ನು ತೋರಿಸಿದ್ದಾರೆ.

ಕುಟುಂಬದಲ್ಲಿನ ಸದಸ್ಯರ ನಡುವೆ, ಸ್ನೇಹಿತರ ನಡುವೆ, ಪ್ರೇಮಿಗಳ ನಡುವೆ ಸಾಮಾನ್ಯವಾಗಿ ನಡೆಯುವ ಜಾಲತಾಣಗಳಲ್ಲಿ ಮುಖ್ಯವಾಗಿ ವಾಟ್ಸ ಆಪ್ ನಲ್ಲಿ ಹಂಚಿಕೊಳ್ಳುವ ಮೇಸಜ್ ಗಳನ್ನು ಓದಿ ಅದನ್ನು ತಪ್ಪಾಗಿ ತಿಳಿದುಕೊಂಡು ಪರಸ್ಪರ ಸಂಬಂಧವನ್ನು ಹದಗೆಡುವ ಮಟ್ಟಿಗೆ ಹೋಗುತ್ತವೆ ಈ ವಿಷಯಾಧಾರಿತವಾಗಿದೆ.

ಕರ್ನಾಟಕ ಕರಾವಳಿಯ ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ಕೆಲವೊಂದು ಪರಿಸರಗಳು ಮುನ್ನೆಲೆಗೆ ಬಾರದ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.

ಐಶ್ವರ್ಯ ಮೀಡಿಯಾ ಹಾಗೂ ಐಶ್ವರ್ಯ ಸ್ಟುಡಿಯೋ ಇವರ ಚೊಚ್ಚಲ ಮ್ಯೂಸಿಕ್ ವೀಡಿಯೋ ಇದು. ಕಿರುತೆರೆ ವಾಹಿನಿಯ ಉದಯೋನ್ಮುಖ ನಟಿ ಆರೋಹಿ ನೈನಾ, ರಂಗಭೂಮಿ ಕಲಾವಿದೆ ಸುಮನಾ ಹೆಗ್ಡೆ, ಕಿರುಚಿತ್ರ ನಟ ಪೃಥ್ವಿರಾಜ್ ಶೆಟ್ಟಿ ಹಾಗೂ ಮುಂತಾದವರು ನಟಿಸಿದ್ದಾರೆ.

ವಿ.ಎನ್.ವಿ ಕ್ರೀಯೆಷನ್, ರಂಗ ಚಾಕ್ಷುಷ ಯಜ್ಞ, ಟೀಮ್ ಸಿನಿಕುಂದಾಪ್ರ ಈ ಚಿತ್ರಕ್ಕೆ ಬೆಂಬಲವಿದೆ. ಜನಪ್ರತಿನಿಧಿ ಮೀಡಿಯಾ ಪಾಟ್ನರ್ ಹಾಗೂ ಕುಂದಾಪ್ರ.ಕಾಮ್ ಡಿಜಿಟಲ್ ಮೀಡಿಯಾ ಪಾಟ್ನರ್ ನಲ್ಲಿ ಪ್ರೂತ್ಸಾಹಿಸಿದ್ದಾರೆ.

ಕಥೆ; ಟೀಮ್ ಸಿನಿ ಕುಂದಾಪ್ರ, ಸಹಾಯಕ ನಿರ್ದೇಶಕ; ಸಖಿಲ್ ಮಂಜು, ಗ್ರಾಫಿಕ್ಸ್; ವಾದಿರಾಜ ಆಚಾರ್ಯ ಹೂವಿನಕೆರೆ, ಪೋಸ್ಟರ್ ಡಿಸೈನ್; ವಿಘ್ನೇಶ್ ಆಚಾರ್ಯ ಬೀಜಾಡಿ.

ಕಲರ್ ಗ್ರೇಡಿಂಗ್; ರಕ್ಷಿತ್ ಕುಮಾರ್ ಕೋಟೇಶ್ವರ, ಮ್ಯೂಸಿಕ್; ಸುಹಿತ್ & ಡೇನಿಯಲ್ , ಬಿಜಿ‌ಎಮ್ ಮತ್ತು ಮಿಕ್ಸಿಂಗ್ ಮಾಸ್ಟರಿಂಗ್;
ಯು‌ಎಸ್ ಸ್ಟುಡಿಯೋ ಸಾಹಿತ್ಯ; ಡಾ. ರಶ್ಮಿ ಕುಂದಾಪುರ, ರಶ್ಮಿ ಸಾಗರ, ಹಾಡು; ದೀಪ್ತಿ ಉಮಾನಾಥ್ ಭಟ್ಕಳ, ವರ್ಷ ಆಚಾರ್ಯ, ಡಬ್ಬಿಂಗ್; ಬಿ. ಆರ್ ಸ್ಟುಡಿಯೋ ಬೆಂಗಳೂರು, ಲೈಫ್ ಲೈಕ್ ಸ್ಟುಡಿಯೋ ಬೆಂಗಳೂರು.

ಫೆಬ್ರವರಿ 14ರಂದು ಸಂಜೆ 7.30ಕ್ಕೆ ಐಶ್ವರ್ಯ ಮೀಡಿಯಾ ಯೂಟ್ಯೂಬ್ ಚಾನಲ್ ನಲ್ಲಿ ಪ್ರಸಾರವಾಗಲಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!