spot_img
Saturday, December 7, 2024
spot_img

ಕಾಳಾವರ ಗ್ರಾಮ ಪಂಚಾಯತ್ ವ್ಯಾಪ್ತಿಗೆ  ವಾರಾಹಿ ನೀರು ಹರಿಸುವಂತೆ ಒತ್ತಾಯ !

ಜನಪ್ರತಿನಿಧಿ ವಾರ್ತೆ (ಕಾಳವಾರ) : ವಕ್ವಾಡಿಯ ವರಾಹಿ ಕಾಲುವೆಗೆ ನೀರು ಹರಿಸಲು, ಅಸೋಡು ರೈಲ್ವೇ ಟ್ರಾಕ್ ನಿಂದ ಪಾಸ್ ಆಗಲು ಕಾಮಗಾರಿ ಬಹುತೇಕ ಮುಗಿದಿದ್ದು, ಕಾಮಗಾರಿಯನ್ನು ಕಾಳಾವರ ಗ್ರಾಮಪಂಚಾಯ್ ಸಾಮಾನ್ಯ ಸ್ಥಾಯಿ ಸಮಿತಿ ನೇತೃತ್ವದಲ್ಲಿ ಭೇಟಿ ನೀಡಿ ಪರಿಶೀಲಿಸಲಾಯಿತು.

ಉಳಿದ ಕಾಮಗಾರಿಯನ್ನು ಶೀಘ್ರದಲ್ಲಿ ಮುಗಿಸಿ ವಕ್ವಾಡಿಯ ಕಾಲುವೆಗೆ ನೀರು ಹರಿಸುವಂತೆ ಒತ್ತಾಯಿಸಿಲಾಗಿದೆ.

ಇನ್ನು, ಕಾಲುವೆಯ ಕಾಮಗಾರಿಯ ಆಮೆ ನಡಿಗೆಯಲ್ಲಿ ಸಾಗುತ್ತಿರುವುದು ಬಗ್ಗೆ ವಿಷಾದ ವ್ಯಕ್ತ ಪಡಿಸಿರುವ ಕಾಳಾವರ ಗ್ರಾಮ ಪಂಚಾಯತ್‌, ಈ ಬಾರಿ ಮಳೆಯ ತೀವ್ರ ಅಭಾವ ಆದ ಕಾರಣ ಈಗಲೇ ವಕ್ವಾಡಿ ಗ್ರಾಮದಲ್ಲಿ ಕುಡಿಯುವ ನೀರಿನ ಅಭಾವ ತಲೆದೂರಿದ್ದು, ಅಂತರ್ಜಲ ಮಟ್ಟ ಕುಸಿದಿದೆ. ಆದ್ದರಿಂದ ಕೂಡಲೇ ಕಾಮಗಾರಿಯನ್ನು ಮುಗಿಸಿ, ವಾರಾಹಿ ಎಡದಂಡೆ ಹಾಗೂ ಬಲದಂಡೆ ಕಾಲುವೆಗೆ ನೀರು ಹರಿಸುವ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಗ್ರಾಮ ಪಂಚಾಯತ್‌ ಒತ್ತಾಯಿಸಿ ಕರ್ನಾಟಕ ನೀರಾವರಿ ನಿಗಮ ನಿಯಮಿತ ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಅಭಿಯಂತರರು ಹಾಗೂ ಕರ್ನಾಟಕ ನೀರಾವರಿ ನಿಗಮ ಲಿಮಿಟೆಡ್‌ ನ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಪತ್ರ ಬರೆದಿದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!