Sunday, September 8, 2024

ಗೋ ಕಳ್ಳರನ್ನು ಬಂಧಿಸಿ ಕ್ರಮ ಕೈಗೊಳ್ಳಿ, ಇಲ್ಲವಾದಲ್ಲಿ ಬೀದಿಗಿಳಿದು ಹೋರಾಟ : ಸುಧಾಕರ್ ಶೆಟ್ಟಿ ನೆಲ್ಯಾಡಿ ಆಕ್ರೋಶ

ಜನಪ್ರತಿನಿಧಿ ವಾರ್ತೆ (ಬೈಂದೂರು)  : ಬೈಂದೂರು ತಾಲೂಕಿನಾದ್ಯಂತ ಇತ್ತೀಚೆಗೆ ಗೋಕಳ್ಳತನ ನಿರಂತರವಾಗಿ ನಡೆಯುತ್ತಿದ್ದು ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಿ  ಸೂಕ್ತ ಕಾನೂನು ಕ್ರಮ ಕೈಗೊಳ್ಳಿ ಎಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಬೈಂದೂರು ಪ್ರಖಂಡ ಸಂಯೋಜಕ ಸುಧಾಕರ ಶೆಟ್ಟಿ ನೆಲ್ಯಾಡಿ ಹೇಳಿದ್ದಾರೆ.

ಅವರು ಬೈಂದೂರು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಉದ್ದೇಶಿಸಿ ಮಾತನಾಡಿ, ಪೊಲೀಸ್ ಇಲಾಖೆಗೆ ಬೇಕಾದ ಸಹಕಾರವನ್ನು ನೀಡಲು ಸಂಘವು ಬದ್ಧರಾಗಿದ್ದು ವ್ಯವಸ್ಥಿತವಾಗಿ ನಡೆಯುತ್ತಿರುವ ಈ ಗೋಕಳ್ಳತನವನ್ನು ಮಟ್ಟಹಾಕಬೇಕು. ಇಲ್ಲವಾದಲ್ಲಿ ಹಿಂದೂ ಪರ ಸಂಘಟನೆಗಳು ಹಾಗೂ ಗೋ ಪ್ರೇಮಿಗಳೊಂದಿಗೆ ಸೇರಿ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಅವರು ಆಕ್ರೋಶ ಹೊರ ಹಾಕಿದ್ದಾರೆ.

ವಿಶ್ವ ಹಿಂದೂ ಪರಿಷತ್ ಬೈಂದೂರು ಪ್ರಖಂಡ ಅಧ್ಯಕ್ಷ ಜಗದೀಶ್ ಕೊಲ್ಲೂರು ಮಾತನಾಡಿ, ಬೈಂದೂರು ಭಾಗದಲ್ಲಿ ಸಾಕಷ್ಟು ಗೋಕಳ್ಳತನ ನಡೆಯುತ್ತಿದೆ. ಇತ್ತೀಚಿಗಷ್ಟೆ ರಾಮ ಮಂದಿರ ನಿರ್ಮಾಣಗೊಂಡಿದ್ದು ಇಡೀ ಹಿಂದೂ ಸಮಾಜವೇ ಒಟ್ಟಾಗಿದೆ. ಇದನ್ನು ಸಹಿಸಲು ಆಗದ್ದಿದ ದುಷ್ಟರು ತಲವಾರುಗಳನ್ನು ಹಿಡಿದುಕೊಂಡು ಮನೆಯ ಕೊಟ್ಟಿಗೆ ನುಗ್ಗಿ ಗೋವುಗಳನ್ನು ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇನ್ನು, ಇದು ಹಿಂದೂ ಸಂಘಟನೆ ಮಾಡಿದ ಸವಾಲುಗಳು, ಹಾಗೇ ಇಲಾಖೆಗಳಿಗೂ ಮಾಡಿದ ಸವಾಲುಗಳು, ಈ ಸವಾಲುಗಳನ್ನು ಇಟ್ಟುಕೊಂಡು ನಾವೆಷ್ಟು ಬಲಿಷ್ಟರು ಎನ್ನುವುದನ್ನು ತಿಳಿಯಲು ಈ ಕೃತ್ಯ ನಡೆಸಿದ್ದಾರೆ. ನಾವು ಈ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ನಮ್ಮ ಹಿಂದೂ ಸಂಘಟನೆಗಿದೆ. ಸ್ಥಳೀಯ ಪೊಲೀಸ್ ಠಾಣೆಗೆ ಹಾಗೂ ಇಲಾಖೆಗೂ ಮನವಿ ನೀಡುತ್ತೇವೆ ಎಂದು ಅವರು ಹೇಳಿದ್ದಾರೆ.  

ಪತ್ರಿಕಾಗೋಷ್ಠೀಯಲ್ಲಿ ವಿಶ್ವ ಹಿಂದೂ ಪರಿಷತ್ ಪ್ರಮುಖರಾದ ರಾಘವೇಂದ್ರ ಹೊಸಾಡು, ಗಿರೀಶ್ ಶಿರೂರು, ಸತೀಶ್ ಜೋಗಿ ಕಟ್‌ಬೆಲ್ತೂರು, ಕಿರಣ್ ತ್ರಾಸಿ, ಪ್ರಶಾಂತ ಪಡುವರಿ, ಗುರುರಾಜ್ ಕಲ್ಲುಕಂಠ, ಜಗದೀಶ್ ಆಲಂದೂರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!