spot_img
Friday, March 21, 2025
spot_img

ʼಭಾರತವನ್ನು ರಕ್ಷಿಸಿದ್ದಕ್ಕೆ ಗೋಡ್ಸೆ ಬಗ್ಗೆ ಹೆಮ್ಮೆ ಅನ್ನಿಸುತ್ತದೆʼ : ಕೇರಳದ ಎನ್‌ಐಟಿ ಪ್ರಾಧ್ಯಾಪಕಿ ವಿರುದ್ಧ ದೂರು ದಾಖಲು : ಅಮಾನತುಗೊಳಿಸುವಂತೆ ಎಬಿವಿಪಿ ಒತ್ತಾಯ !

ಜನಪ್ರತಿನಿಧಿ ವಾರ್ತೆ (ಕೋಜಿಕ್ಕೋಡ್) : ʼಭಾರತವನ್ನು ರಕ್ಷಿಸಿದ್ದಕ್ಕೆ ಗೋಡ್ಸೆ ಬಗ್ಗೆ ಹೆಮ್ಮೆ ಅನ್ನಿಸುತ್ತದೆʼ ಎಂದು ಕೇರಳದ ಕ್ಯಾಲಿಕಟ್‌ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ(ಎನ್‌ಐಟಿ) ಪ್ರಾಧ್ಯಾಪಕಯೋರ್ವರು ತಮ್ಮ ಫೇಸ್ಬುಕ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿದ್ದೀಗ ವಿವಾದಕ್ಕೆ ಕಾರಣವಾಗಿದೆ.

ಎನ್‌ಐಟಿಯ ಮೆಕ್ಯಾನಿಕಲ್‌ ಇಂಜಿನಿಯರಿಂಗ್‌ ವಿಭಾಗ ಪ್ರಾಧ್ಯಾಪಕಿ ಎ. ಶೈಜಾ ಎನ್ನುವವರ ಮೇಲೆ ಈ ಆರೋಪ ಕೇಳಿ ಬಂದಿದೆ.

ವಕೀಲ ಕೃಷ್ಣರಾಜ್‌ ಎಂಬುವವರು ಇತ್ತೀಚೆಗೆ ಮಹಾತ್ಮ ಗಾಂಧಿ ಹಂತಕ ನಾಥೂರಾಮ್‌ ಗೋಡ್ಸೆ ಫೋಟೋವೊಂದನ್ನು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಪೋಸ್ಟ್‌ ಗೆ ಎ. ಶೈಲಾ ಮೇಲಿನಂತೆ ಕಮೆಂಟ್‌ ಮಾಡಿರುವುದು ಈಗ ವಿವಾದ ಸೃಷ್ಟಿಸಿದೆ.

ಇದಕ್ಕೆ ಸಂಬಂಧಿಸಿದಂತೆ ಕೇರಳದ ಎಡ ಪಂಥೀಯರು ಶೈಜಾ ವಿರುದ್ಧ ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನು, ಎನ್‌ಐಟಿ ಕ್ಯಾಂಪಸ್‌ನಲ್ಲಿ ನಿನ್ನೆ(ಸೋಮವಾರ) ನಡೆದ ಪ್ರತಿಭಟನೆಯಲ್ಲಿ ಬಿಜೆಪಿಯ ವಿದ್ಯಾರ್ಥಿ ಸಂಘಟನೆಗುಆದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಶೈಜಾ ವಿರುದ್ಧ ಸೂಕ್ತ ಕಗತಕ್ಕೆ ಆಗ್ರಹಿಸಿದೆ. ಮಾತ್ರವಲ್ಲದೇ, ಕಾಲೇಜಿನಲ್ಲಿ ಶೈಜಾ ವಿರುದ್ಧ ಮೆರವಣಿಗೆ ನಡೆಸಿ, ಗೋಡೆ ಪ್ರತಿಕೃತಿ ದಹನ ಮಾಡಿದ್ದಲ್ಲದೇ, ಶೈಜಾ ಅವರನ್ನು ಎನ್‌ಐಟಿಯಿಂದ ಅಮಾನತುಗೊಳಿಸುವಂತೆ ಒತ್ತಾಯಿಸಿದೆ.

ಸದ್ಯ, ನಾಡಕ್ಯಾವು, ಕುನ್ನಮಂಗಳಂ ಒಳಗೊಂಡು ಕೆಲವು ಪೊಲೀಸ್‌ ಠಾಣೆಗಲಲ್ಲಿ ಶೈಜಾ ವಿರುದ್ಧ ಐಸಿಸಿ ಸೆಕ್ಷನ್‌ ೧೫೩ ಅಡಿಯಲ್ಲಿ ದೂರು ದಾಖಲಾಗಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.  

Related Articles

Stay Connected

21,961FansLike
3,912FollowersFollow
22,300SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!