spot_img
Saturday, December 7, 2024
spot_img

ವಿದ್ಯಾ ಅಕಾಡೆಮಿ ಮೂಡ್ಲಕಟ್ಟೆಯಲ್ಲಿ ಶಾಲಾ ವಾರ್ಷಿಕೋತ್ಸವ

ಕುಂದಾಪುರ: ವಿದ್ಯಾ ಅಕಾಡೆಮಿ ಮೂಡ್ಲಕಟ್ಟೆಯಲ್ಲಿ ಶಾಲಾ ವಾರ್ಷಿಕೋತ್ಸವ ಇತ್ತೀಚೆಗೆ ಜರುಗಿತು. ಮುಖ್ಯ ಅತಿಥಿಯಾಗಿ ಪೂರ್ಣಿಮಾ ಭಟ್ ಕಮಲಶಿಲೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ ಯಶಸ್ಸು ಒಂದು ಶಾಲೆಯು ಕಾಣಬೇಕಾದರೆ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಪೋಷಕರಲ್ಲಿ ಹೊಂದಾಣಿಕೆ ಇರಬೇಕು ಎಂದರು. ಮಕ್ಕಳನ್ನು ಸ್ವಾವಲಂಬಿಗಳಾಗಲು ಹುರಿದುಂಬಿಸಬೇಕು. ಶಿಕ್ಷಕರಾದವರು ಕ್ಲಿಷ್ಟಕರವಾದದನ್ನು ಮಕ್ಕಳಿಗೆ ಸರಳಿಕರಿಸಿ ಹೇಳುವ ಸಾಮರ್ಥ್ಯವನ್ನು ಪಡೆದಿರಬೇಕು ಹಾಗೂ ನಿಷ್ಪಕ್ಷಪಾತಿಗಳಾಗಿರಬೇಕು ಎಂದರು. ಮಕ್ಕಳನ್ನು ಬೆಳೆಸುವುದರ ಬಗ್ಗೆ ಪೋಷಕರಿಗೆ ಕಿವಿ ಮಾತುಗಳನ್ನು ಹೇಳಿದರು.

ನಂತರ ಮುಂದಿನ ಶೈಕ್ಷಣಿಕ ವರ್ಷಕ್ಕೆ ಮಕ್ಕಳ ಪದೋನ್ನತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಐ‌ಎಂಜೆ‌ಐ‌ಎಸ್‌ಸಿ ಯ ಪ್ರಾಂಶುಪಾಲೆಯಾದ ಡಾ.ಪ್ರತಿಭಾ ಎಂ ಪಟೇಲ್, ಶಾಲೆಯ ಶಿಕ್ಷಕರೂ ವಿದ್ಯಾರ್ಥಿಗಳು ಪೋಷಕರು ಹಾಗೂ ಎಲ್ಲಾ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು

ಕಾರ್ಯಕ್ರಮವನ್ನು ಶಾಲೆಯ ಶಿಕ್ಷಕಿ ಸಂಗೀತ ನಿರ್ವಹಿಸಿದರು. ಶಿಕ್ಷಕಿ ಸೋಫಿಯಾ ಸ್ವಾಗತಿಸಿದರು. ಶಾಲೆಯ ಆಡಳಿತ ನಿರ್ವಾಹಕಿ ಪಾವನ ಮಹೇಶ್ ವಾರ್ಷಿಕ ವರದಿಯನ್ನು ವಾಚಿಸಿದರು. ಶಿಕ್ಷಕಿ ರೇಷ್ಮಾ ಶೆಟ್ಟಿ ವಂದಿಸಿದರು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!