Sunday, September 8, 2024

ʼವಿಕಸಿತ ಭಾರತ 2047ʼರ ಸಂಕಲ್ಪಕ್ಕೆ ಈ ಬಜೆಟ್‌ ಅಡಿಪಾಯ ಹಾಕಿದೆ : ಪ್ರಧಾನಿ ನರೇಂದ್ರ ಮೋದಿ

ಜನಪ್ರತಿನಿಧಿ ವಾರ್ತೆ (ನವ ದೆಹಲಿ ) : ಸಂಸತ್ತಿನಲ್ಲಿ ಇಂದು (ಗುರುವಾರ) ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ ಕೇಂದ್ರದ ಮಧ್ಯಂತರ ಬಜೆಟನ್ನು ಪ್ರಧಾನಿ ಶ್ಲಾಘಿಸಿದ್ದಾರೆ.

‌ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‌ ಮಂಡನೆ ಮುಕ್ತಾಯಗೊಳಿಸಿದ ನಂತರ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ʼಮಧ್ಯಂತರ ಬಜೆಟ್‌ ವಿನೂತನ ಹಾಗೂ ಸರ್ವಸ್ಪರ್ಶಿಯಾಗಿದೆ. ವಿಕಸಿತ ಭಾರತದ ಪ್ರಮುಖ ನಾಲ್ಕು ಆಧಾರ ಸ್ಥಂಭಗಳಾದ ಯುವ ಸಮುದಾಯ, ಬಡವರು, ಮಹಿಳೆಯರು ಹಾಗೂ ರೈತರನ್ನು ಈ ಬಜೆಟ್‌ ಸಬಲೀಕರಣಗೊಳಿಸಲಿದೆ. 2047ರ ಸಂದರ್ಭದಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿಸುವ ಎಲ್ಲಾ ಸಾಧ್ಯತೆಗಳನ್ನು ಸೂಚಿಸಿದೆ ಎಂದು ಅವರು ಹೇಳಿದ್ಧಾರೆ.

ಬಜೆಟ್‌ನಲ್ಲಿ ಮಧ್ಯಮ ವರ್ಗದ ಜನರನ್ನು ಹಾಗೂ ಬಡ ಜನರನ್ನು ಸಬಲೀಕರಣಗೊಳಿಸುವ ಹಾಗೂ ಅವರಿಗಾಗಿ ಹೇರಳ ಅವಕಾಶಗಳನ್ನು ಒದಗಿಸುವುದಕ್ಕೆ ಮಹತ್ವ ನೀಡಲಾಗಿದೆ. ಸೌರ ಫಲಕಗಳನ್ನು ಅಳವಡಿಸುವ ಯೋಜನೆಯು ಕೋಟ್ಯಂತರ ಕುಟುಂಬಗಳು ಉಚಿತ ವಿದ್ಯುತ್‌ ಪಡೆಯಲು ಸಹಾಯವಾಗಲಿದೆ ಎಂದು ಪ್ರಧಾನಿ ಹೇಳಿದ್ದಾರೆ.

ʼವಿಕಸಿತ ಭಾರತ 2047ʼರ ಸಂಕಲ್ಪಕ್ಕೆ ಅಡಿಪಾಯವನ್ನು ಈ ಬಜೆಟ್‌ ಭದ್ರಪಡಿಸಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹಾಗೂ ಅವರ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಯುವ ಭಾರತದ ಆಕಾಂಕ್ಷೆಗಳು ಈ ಬಜೆಟ್‌ ಪ್ರತಿಫಲಿಸುತ್ತಿವೆ ಎಂದೂ ಮೋದಿ ಅಭಿಪ್ರಾಯ ಪಟ್ಟಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!