spot_img
Wednesday, January 22, 2025
spot_img

ಕೇಂದ್ರ ಬಜೆಟ್‌ :ಸತತ 6 ಬಾರಿ ಕೇಂದ್ರ ಬಜೆಟ್‌ ಮಂಡಿಸಿದ ವಿತ್ತ ಸಚಿವೆಯಾಗಿ ನಿರ್ಮಲಾ ದಾಖಲೆ

ಜನಪ್ರತಿನಿಧಿ ವಾರ್ತೆ ( ನವ ದೆಹಲಿ) : ಲೋಕಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2024-25ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಮಾಡಿದ್ದಾರೆ.

2024-25ನೇ ಸಾಲಿನ ಕೇಂದ್ರ ಬಜೆಟ್ ನ್ನು ಇಂದು ಮಂಡನೆ ಮಾಡಿದ್ದು,  ಈ ಮೂಲಕ ಮೊರಾರ್ಜಿ ದೇಸಾಯಿ ಬಳಿಕ ಸತತ 6 ಬಾರಿ ಕೇಂದ್ರ ಬಜೆಟ್‌ ಮಂಡಿಸಿದ ವಿತ್ತ ಸಚಿವೆಯಾಗಿ ನಿರ್ಮಲಾ ದಾಖಲೆ ಬರೆದಿದ್ದಾರೆ. ಅಲ್ಲದೆ, 2019ರಿಂದ ಈವರೆಗೆ ಪೂರ್ಣಾವಧಿ ವಿತ್ತ ಸಚಿವೆಯಾಗಿ ಕಾರ್ಯ ನಿರ್ವಹಿಸಿದ ದೇಶದ ಮೊಟ್ಟ ಮೊದಲ ಮಹಿಳೆ ಎಂಬ ಖ್ಯಾತಿಗೂ ಅವರು ಭಾಜೀನರಾಗಿದ್ದಾರೆ.

ವಿತ್ತ ಸಚಿವೆ ನಿರ್ಮಲಾ ಅವರ ಬಜೆಟ್‌ ಭಾಷಣದ ಮುಖ್ಯಾಂಶಗಳು ಇಲ್ಲಿವೆ :

  • ಸಾಮಾಜಿಕ ನ್ಯಾಯದ ತತ್ವದಲ್ಲಿ ಕೇಂದ್ರ ಸರ್ಕಾರವು ಆಡಳಿತ, ಸೇವೆ, ಅಭಿವೃದ್ಧಿಗೆ ಆದ್ಯತೆ ನೀಡಿದೆ.
  • 2047ರ ವೇಳೆಗೆ ಭಾರತ ವಿಕಸಿತವಾಗಲಿದೆ, ಜಗತ್ತಿನಲ್ಲೇ ಬಲಿಷ್ಠವಾಗಲಿದೆ
  • ಕೇಂದ್ರ ಸರ್ಕಾರವು ಸ್ವಜನ ಪಕ್ಷಪಾತ, ವಂಶಾಡಳಿತಕ್ಕೆ ಇತಿಶ್ರೀ ಹಾಡಿದೆ
  • ಭ್ರಷ್ಟಾಚಾರ ನಿಗ್ರಹ ಮಾಡಿದ ಪರಿಣಾಮ ದೇಶವು ಸಾಮಾಜಿಕ ಆರ್ಥಿಕ ಏಳಿಗೆ ಸಾಕಾರವಾಗಿದೆ.
  • ಕೇಂದ್ರ ಸರ್ಕಾರದ ಸಮರ್ಥ ಆಡಳಿತದಿಂದ 25 ಕೋಟಿ ಜನ ಬಡತನದಿಂದ ಹೊರಗೆ
  • ಜನಧನ್‌ ಯೋಜನೆಯಿಂದ 2.7 ಲಕ್ಷ ಕೋಟಿ ರೂ. ಉಳಿತಾಯ ಖಾತೆಗೆ ಜಮೆ
  • ಪಿಎಂ ಸ್ವನಿಧಿ ಯೋಜನೆಯಿಂದ ಬೀದಿ ಬದಿ ವ್ಯಾಪಾರಿಗಳಿಗೆ ಸಹಾಯಧನ
  • ಪಿಎಂ ಜನಮನ ಯೋಜನೆಯಿಂದ ಬುಡಕಟ್ಟು ಸಮುದಾಯಗಳಿಗೆ ನೆರವು
  • ಪಿಎಂ ವಿಶ್ವಕರ್ಮ ಯೋಜನೆಯಿಂದ ಸಮುದಾಯಗಳ ಏಳಿಗೆ
  • ರೈತರಿಗೆ ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆಯಿಂದ 11.8 ಕೋಟಿ ರೈತರಿಗೆ ವಾರ್ಷಿಕ 6 ಸಾವಿರ ರೂ. ಸಹಾಯಧನ

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!