Sunday, September 8, 2024

ಪುರಸಭೆ ಕುಂದಾಪುರ ಆಶ್ರಯದಲ್ಲಿ ʼಸಂವಿಧಾನ ಜಾಗೃತಿ ಜಾಥಾʼ ಕಾರ್ಯಕ್ರಮ

ಜನಪ್ರತಿನಿಧಿ ವಾರ್ತೆ ( ಕುಂದಾಪುರ ) : ಸಂವಿಧಾನ ಅಂದರೆ, ಅದೊಂದು ಒಳ್ಳೆಯ ವಿಧಾನ. ನಾಗರಿಕ ಸಮಾಜಕ್ಕೆ ಒಂದು ನೀತಿ ನಿಯಮ ಕೊಟ್ಟಿರುವುದೇ ಸಂವಿಧಾನ. ಆದರೇ, ಇಲ್ಲಿ ನಾವು ಯಾರೂ ಸಂವಿಧಾನದ ಆಶಯದಂತೆ ಬದುಕುತ್ತಿಲ್ಲ ಎನ್ನುವುದು ದೇಶದ ದುರಂತಗಳಲ್ಲೊಂದು ಎಂದು ಪ್ರದೀಪ್‌ ಕೆಂಚನೂರು ಹೇಳಿದರು.

ಅವರು, ಪುರಸಭೆ ಕುಂದಾಪುರದ ಆಶ್ರಯದಲ್ಲಿ ಇಲ್ಲಿನ ತಾಲೂಕು ಪಂಚಾಯತ್‌ ಆವರಣದ ಎದುರುಗಡೆ ನಡೆದ ಸಂವಿಧಾನ ದಿನಾಚರಣೆಯ ಪ್ರಯುಕ್ತ ನಡೆದ ಸಂವಿಧಾನ ಜಾಗೃತಿ ಜಾಥ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯ ನೆಲೆಯಲ್ಲಿ ಮಾತನಾಡಿದರು.

ಜನರ ಪ್ರತಿನಿಧಿತ್ವವೇ ಸಂವಿಧಾನದ ಮೂಲ ಆಶಯ. ಜಾತ್ಯಾತೀತ ಸ್ವರೂಪವೇ ನಾಶವಾದರೇ ದೇಶಕ್ಕೆ ಬಹಳ ದೊಡ್ಡ ಅಪಾಯವಿದೆ. ಎಲ್ಲರನ್ನೂ ಒಳಗೊಳ್ಳಿಸುವುದೇ ಸಂವಿಧಾನದ ಮೂಲ ಆಶಯ. ಆ ಆಶಯದಂತೆ ಬದುಕಲು ಇಲ್ಲಿನ ಜನ ಕೊನೆಯ ಪಕ್ಷ ಪ್ರಯತ್ನವಾದರೂ ಮಾಡಬೇಕಿದೆ. ಇಲ್ಲದೇ ಹೋದರೇ, ನಾಗರಿಕ ಸಮಾಜ ಉಸಿರಾಡುವುದು ಕೂಡ ಕಷ್ಟವಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಗಾಂಧೀಜೀ ಹಾಗೂ ಡಾ. ಬಿ. ಆರ್‌ ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ತಾಲೂಕು ಪಂಚಾಯತ್‌ ಕುಂದಾಪುರ ಇದರ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್‌ ರಾವ್‌, ಎಲ್ಲರಿಗೂ ಅವಕಾಶವನ್ನು ನೀಡುವಂತಹ ನಿಟ್ಟಿನಲ್ಲಿ ಸಂವಿಧಾನ ಬಹಳ ಮುಖ್ಯ. ಸಂವಿಧಾನದ ಕಾರಣದಿಂದಲೇ ಪ್ರಜಾಪ್ರಭುತ್ವ ಇಷ್ಟೊಂದು ಗಟ್ಟಿಯಾಗಿ ನೆಲೆನಿಲ್ಲುಲು ಸಾಧ್ಯಮಾಡಿಕೊಟ್ಟಿದೆ. ಸಂವಿಧಾನದ ಮಹತ್ವ ಎಲ್ಲರಿಗೂ ತಿಳಿಯುವಂತಾಗಬೇಕು ಎಂಬ ದೃಷ್ಟಿಯಲ್ಲಿ ಸಂವಿಧಾನ ಜಾಗೃತಿ ಜಾಥದಂತಂಹ ಕಾರ್ಯಕ್ರಮ ತುರ್ತಿದೆ ಎಂದು ಅವರು ಹೇಳಿದರು.

ಸಮಾಜ ಕಲ್ಯಾಣಾಧಿಕಾರಿ ರಾಘವೇಂದ್ರ ವರ್ಣೇಕರ್‌ ಸಂವಿಧಾನ ಪ್ರಸ್ತಾವನೆ ಬೋಧಿಸಿದರು. ಕಾರ್ಯಕ್ರಮದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ವಿವಿಧ ಸ್ಪರ್ಧಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರಸಭೆ ಕುಂದಾಪುರದ ಮುಖ್ಯಾಧಿಕಾರಿ ಆರ್.‌ ಮಂಜುನಾಥ್‌, ಎಸ್‌ಐ ನಂದಕುಮಾರ್‌, ಉಪ ತಹಶೀಲ್ದಾರ್‌ ವಿನಯ್‌ ಕುಮಾರ್‌, ದಲಿತ ಮುಖಂಡರುಗಳಾದ ಉದಯ ಕುಮಾರ್‌, ರಾಜು ಬೆಟ್ಟಿನ ಮನೆ ಹಾಗೂ ಪುರಸಭಾ ಸದಸ್ಯರುಗಳಾದ ಪ್ರಭಾಕರ ವಿ, ಶ್ರೀಧರ ಶೇರೆಗಾರ್‌, ದೇವಕಿ ಸಣ್ಣಯ್ಯ, ಶೇಕರ್‌ ಹಾಗೂ ಮತ್ತಿತರರು ಉಪಸ್ಥಿತರಿದ್ದರು.  

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!