spot_img
Tuesday, April 14, 2026
spot_img

ಕುಮಾರಸ್ವಾಮಿ ಭೇಟಿ ಮಾಡಿದ ಬಿಜೆಪಿ ಮಾಜಿ ಸಚಿವ ಡಾ. ಕೆ ಸುಧಾಕರ್‌ ! ಕುತೂಹಲ ಕೆರಳಿಸಿದ ಎಚ್‌ಡಿಕೆ, ಸುಧಾಕರ್‌ ಭೇಟಿ

ಜನಪ್ರತಿನಿಧೀ ವಾರ್ತೆ (ರಾಮ ನಗರ) : ಜೆಡಿಎಸ್‌ ಅಧ್ಯಕ್ಷ ಎಚ್‌. ಡಿ ಕುಮಾರ್‌ ಸ್ವಾಮಿ ಅವರ ಮನೆಗೆ ಮಾಜಿ ಸಚಿವ ಡಾ. ಸುಧಾಕರ್‌ ಇಂದು(ಸೋಮವಾರ) ಭೇಟಿ ಮಾಡಿ, ಕುಶಲೋಪರಿ ನಡೆಸಿದ್ದಾರೆ.

ಸುಧಾಕರ್‌ ಅವರು ಕುಮಾರ ಸ್ವಾಮಿ ಅವರಿಗೆ ಹೂ ಗುಚ್ಛ ನೀಡಿ ಕುಮಾರ ಸ್ವಾಮಿ ಅವರಿಗೆ ಸಂಕ್ರಾಂತಿಯ ಶುಭಾಶಯ ತಿಳಿಸಿದರು. ಆ ಬಳಿಕ ಇಬ್ಬರೂ ಕೆಲ ಹೊತ್ತು ಮಾತುಕತೆ ನಡೆಸಿದರು.

ಇನ್ನು, ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಆಗಿ ಮಾಜಿ ಸಚಿವ ಸುಧಾಕರ್‌ ಅವರ ಹೆಸರು ಕೇಳಿ ಬರುತ್ತಿದೆ. ಈ ಹಿನ್ನಲೆಯಲ್ಲಿ ಸುಧಾಕರ್‌ ಕುಮಾರಸ್ವಾಮಿ ಅವರನ್ನು ಭೇಟಿ ನೀಡಿ ಮಾತುಕತೆ ಮಾಡಿದ್ದಾರೆ. ಸುಧಾಕರ್‌ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕ್ಷೇತ್ರದ ರಾಜಕೀಯದಲ್ಲಿ ಕುತೂಹಲ ಕೆರಳಿಸಿದೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಏರ್ಪಟ್ಟಿದ್ದು, ಉಭಯ ಪಕ್ಷ್ಗಳ ನಡುವೆ ಇದುವರೆಗೆ ಸೀಟುಗಳ ಹಂಚಿಕೆಯಾಗಿಲ್ಲ. ಆದರೂ ಕೆಲ ಕ್ಷೇತ್ರಗಳಲ್ಲಿ ಎರಡೂ ಪಕ್ಷಗಳಿಂದ ಕೆಲವು ಹೆಸರು ಕೇಳಿಸುತ್ತಿರುವುದು ರಾಜಕೀಯ ವಲಯದಲ್ಲಿ ಚರ್ಚೆ ಎಬ್ಬಿಸಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!