spot_img
Tuesday, April 14, 2026
spot_img

ಅಂಕಿತ್‌ ಸಕ್ಸೇನಾ ಹತ್ಯೆ ಪ್ರಕರಣ : ಶಿಕ್ಷೆ ಪ್ರಮಾಣ ನಿರ್ಧಾರವನ್ನು ಜ.31ಕ್ಕೆ ಮುಂದೂಡಿದ ನ್ಯಾಯಾಲಯ !

ಜನಪ್ರತಿನಿಧಿ ವಾರ್ತೆ (ನವ ದೆಹಲಿ ) : ವೃತ್ತಿಪರ ಛಾಯಾಗ್ರಾಹಕ ಅಂಕಿತ್‌ ಸಕ್ಸೇನಾರನ್ನು ಹತೈಗೈದ ಅಪರಾಧಿಗಳಿಗೆ ಶಿಕ್ಷೆ ವಿಧಿಸುವ ಕುರಿತಾಗಿ ವಾದ ವಿವಾದವನ್ನು ದೆಹಲಿ ನ್ಯಾಯಾಲಯ ಜ.31 ರಂದು ವಿಚಾರಣೆಯನ್ನು ಆಲಿಸಲಿದೆ.

ಡಿಸೆಂಬರ್‌ 23 ರಂದು ಸಕ್ಸೇನಾ ಅವರ ಗೆಳತಿ ಶೆಹಜಾದಿ ಅವರ ಪೋಷಕರಾದ ಅಕ್ಬರ್‌ ಅಲಿ ಹಾಗೂ ಶಹಜಾನ್‌ ಬೇಗಂ ಹಾಗೂ ತಾಯಿ ಚಿಕ್ಕಪ್ಪ ಮೊಹಮ್ಮದ್‌ ಸಲೀಂ ಅವರನ್ನು ದೋಷಿಗಳೆಂದು ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಸುನೀಲ್‌ ಕುಮಾರ್‌ ಶರ್ಮಾ ತೀರ್ಪು ನೀಡಿದ್ದರು.

ಶೆಹಜಾದಿ ಹಾಗೂ ಹತ್ಯೆಗೀಡಾದ ಸಕ್ಸೇನಾ ಪರಸ್ಪರ ಪ್ರೀತಿಸುತ್ತಿದ್ದರು. ಈ ಪ್ರೇಮ ಸಂಬಂಧವನ್ನು ವಿರೋಧಿಸಿ ಶೆಹಜಾದಿ ಕುಟುಂಬಸ್ಥರು ರಾಷ್ಟ್ರ ರಾಜಧಾನಿಯ ಖ್ಯಾಲಾ ಪ್ರದೇಶದಲ್ಲಿ 23 ವರ್ಷದ ಸಕ್ಸೇನಾ ಅವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದರು. 2018ರ ಫೆಬ್ರವರಿಯಲ್ಲಿ ಹತ್ಯೆ ಮಾಡಿದ್ದರು.

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ 302 (ಕೊಲೆ) ಹಾಗೂ 34(ಸಾಮಾನ್ಯ ಉದ್ದೇಶಕ್ಕಾಗಿ ಹಲವರು ಸೇರಿ ಮಾಡಿದ ಕೃತ್ಯ) ಅಡಿಯಲ್ಲಿ ಆರೋಪ ಹೊರಿಸಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಅಫಿಡವಿಟ್‌ ಗಳು ಸಲ್ಲಿಕೆಯಾಗದ ಕಾರಣದಿಂದ ಪ್ರಕರಣದ ವಿಚಾರಣೆಯನ್ನು ಮುಂದಕ್ಕೆ ದೂಡಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!