spot_img
Tuesday, April 14, 2026
spot_img

ಅಯೋಧ್ಯೆ ಶ್ರೀರಾಮ ಮಂದಿರ ಜೂಜಾಟದ ಕೇಂದ್ರವಾಗದಿರಲಿ : ಸಾಹಿತಿ ದೇವನೂರ ಮಹಾದೇವ

ಜನಪ್ರತಿನಿಧಿ ವಾರ್ತೆ(ಬೆಂಗಳೂರು) :  ಅಯೋಧ್ಯೆಯಲ್ಲಿ ಉದ್ಘಾಟನೆಗೆ ಸಿದ್ಧವಾಗಿರುವ ರಾಮಮಂದಿರವೂ ಜೂಜಾಟದ ಕೇಂದ್ರವಾಗಬಾರದು ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ಹೇಳಿದ್ದಾರೆ.

ಶ್ರಮಣ ಸಂಸ್ಕೃತಿ ಟ್ರಸ್ಟ್ ಹಾಗೂ ಬಯಲು ಬಳಗ ಸಹಯೋಗದಲ್ಲಿ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್  ರಾಜ್ ಸಂಸ್ಥೆಯಲ್ಲಿ ನಡೆದ 90ರ ನಂತರದ ಕರ್ನಾಟಕ ರಾಜ್ಯ ಮಟ್ಟದ ವಿಚಾರ ಕಮ್ಮಟ 2ನೇ ದಿನದ ಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು, ನಮ್ಮ ಬುಡಕಟ್ಟು ಜನಾಂಗದವರು ದೇವರನ್ನು ಮೌಲ್ಯಮಾಪನಕ್ಕೆ ಒಳಪಡಿಸುವಂತೆ ನಾವು ಕೂಡ 2024ನೇಯ ಲೋಕಸಭೆಯ ಸಂಸತ್ ಸದಸ್ಯರನ್ನು ಮೌಲ್ಯಮಾಪನ ಮಾಡಿ ಆಯ್ಕೆ ಮಾಡಬೇಕು ಎಂದು ಹೇಳಿದ್ದಾರೆ.

“ಛತ್ತೀಸ್‌ಗಡದಲ್ಲಿ ಆದಿವಾಸಿ ಜನಾಂಗದವರು ದೇವರುಗಳನ್ನೇ ಮೌಲ್ಯಮಾಪನ ಮಾಡುತ್ತಾರೆ. ನಾವು ಮನುಷ್ಯರನ್ನು ಮೌಲ್ಯಮಾಪನ ಮಾಡುತ್ತಿಲ್ಲ. ಹೀಗಾಗಿ, ಮೌಲ್ಯಮಾಪನದ ಸತ್ವವನ್ನು ನಮ್ಮ ಪೂರ್ವಜರಿಂದ ಕಲಿಯಬೇಕಿದೆ. ಮುಂದಿನ ಚುನಾವಣೆಯಲ್ಲಿ ನಾವೆಲ್ಲ ಎಚ್ಚರಗೊಂಡು ಈಗಲಾದರೂ ಮೌಲ್ಯಮಾಪನ ಮಾಡುವ ಅಗತ್ಯತೆ ಇದೆ. ಇಂದರಿಂದ ಶೇ. 90ರಷ್ಟು ಅಸಮರ್ಥರು ಸಂಸತ್ ಭವನದಿಂದ ಹೊರಗೆ ಉಳಿಯಲಿದ್ದಾರೆ” ಎಂದರು.

ದೇಶದಲ್ಲಿ ಬಡವ – ಬಲ್ಲಿಗನ ಅಂತರ ಹೆಚ್ಚಾಗಿದೆ. ಪ್ರಜಾಪ್ರಭುತ್ವ ಉಳಿಯಬೇಕೆಂದರೆ ಉದ್ಯೋಗ, ಶಿಕ್ಷಣ, ಆರೋಗ್ಯವನ್ನು ಮಾನದಂಡವಾಗಿಸಿ ಈ ಮಾಲ್ಯಮಾಪನದ ಕೆಲಸ ಆಗಲೇ ಬೇಕಿದೆ”. “ಸನಾತನ ಧರ್ಮ ಎಂಬುದು ಅನಾದಿ ಕಾಲದಿಂದ ಬಂದಂತಹ ಧರ್ಮ ಎಂಬುದನ್ನು ಒಪ್ಪಿಕೊಳ್ಳೋಣ. ಆದರೆ, ಇದು ಜಾತಿಯತೆ ಎಂಬ ಅನಿಷ್ಟ ಪದ್ಧತಿಯಿಂದ ಕೂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

“ಮೌಲ್ಯ ಹಾಗೂ ಅಪಮೌಲ್ಯಗಳು ಹೇಗಿವಿಯೋ ಅದೇ ರೀತಿಯಲ್ಲಿ ಹಿಂದೂ ಸಮಾಜದಲ್ಲಿ ಕೆಲವು ಅಪದ್ಧ, ಅಪಮೌಲ್ಯಗಳು ಇವೆ. ಜಾತಿಭೇದ, ಮೇಮುಕೀಳು, ಅಸ್ಪೃಶ್ಯತೆ ಬಹಳಿಷ್ಟಿದೆ‌. ಇಂದು ಸನಾತನ ಧರ್ಮದ ಮೌಲ್ಯ ಅಪಮೌಲ್ಯಗೊಂಡಿದೆ” ಎಂದರು.

“ಅಪೂರ್ಣ ರಾಮ ಮಂದಿರ ಉದ್ಘಾಟನೆಯ ವಿಚಾರ ಇದೀಗ ದೇಶದಲ್ಲಿ ಚರ್ಚೆಯಲ್ಲಿದೆ. ನಮ್ಮ ಬಹುತೇಕ ಹಳ್ಳಿಗಳಲ್ಲಿ ರಾಮಮಂದಿರಗಳಿವೆ. ಅವುಗಳು ಸಾಮಾನ್ಯವಾಗಿ ಜೂಜಾಟದ ಕೇಂದ್ರವಾಗಿ ಪರಿವರ್ತನೆಗೊಂಡಿವೆ. ಅದರಂತೆ ಅಯೋಧ್ಯೆಯ ರಾಮ ಮಂದಿರ ಕೂಡ ರಾಜಕಾರಣದ ಜೂಜಾಟದ ಕೇಂದ್ರವಾಗಿದಿರಲಿ” ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!