spot_img
Saturday, April 18, 2026
spot_img

ರಾಜ್ಯ ಬಿಜೆಪಿ ಜಿಲ್ಲಾ ಘಟಕದ ನೂತನ ಅಧ್ಯಕ್ಷರ ನೇಮಕ | ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕಿಶೋರ್‌ ಕುಂದಾಪುರ ನೇಮಕ !

ಜನಪ್ರತಿನಿಧಿ ವಾರ್ತೆ (ಬೆಂಗಳೂರು)  :  ಕರ್ನಾಟಕ ರಾಜ್ಯ ಬಿಜೆಪಿ ಜಿಲ್ಲಾ ಘಟಕದ ನೂತನ ಅಧ್ಯಕ್ಷರನ್ನು ನೇಮಕ  ಮಾಡಲಾಗಿದೆ. ಒಟ್ಟು 39 ಸಂಘಟನಾ ಜಿಲ್ಲೆಗಳಿಗೆ ಜಿಲ್ಲಾಧ್ಯಕ್ಷರನ್ನು ನೇಮಿಸಲಾಗಿದೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ಉಡಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕಿಶೋರ್‌ ಕುಂದಾಪುರ ಆಯ್ಕೆಯಾಗಿದ್ದಾರೆ.  ಬಿಜೆಪಿ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿರುವ ಕಿಶೋರ್ ಕುಮಾರ್ ಅವರು 2013 ರಲ್ಲಿ ಅಂದಿನ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಾಗ ಮಾಡಿದ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಕುಂದಾಪುರ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು.  ಮಾತ್ರವಲ್ಲದೇ, ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅನುಭವ ಇವರಿಗಿದೆ.

ಇನ್ನು, ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಂಚಾಲಕರಾಗಿ ಎಸ್. ದತ್ತಾತ್ರಿ ಅವರನ್ನು ನೇಮಕ ಮಾಡಲಾಗಿದ್ದು, ಬಿಜೆಪಿ ರಾಜ್ಯ ಕಾರ್ಯಾಲಯ ಕಾರ್ಯದರ್ಶಿಯಾಗಿ ಲೋಕೇಶ್ ಅಂಬೆಕಲ್ಲು, ಸಹ ಕಾರ್ಯದರ್ಶಿಯಾಗಿ ಬಿ.ಹೆಚ್. ವಿಶ್ವನಾಥ ನೇಮಕಗೊಂಡಿದ್ದಾರೆ.

ಬಿಜೆಪಿ ಜಿಲ್ಲಾಧ್ಯಕ್ಷರ ಪಟ್ಟಿ ಇಂತಿವೆ :

ಮೈಸೂರು ನಗರ- ಎಲ್. ನಾಗೇಂದ್ರ

ಮೈಸೂರು ಗ್ರಾಮಾಂತರ- ಎಲ್.ಆರ್. ಮಹದೇವಸ್ವಾಮಿ

ಚಾಮರಾಜನಗರ- ಸಿ.ಎಸ್. ನಿರಂಜನ್ ಕುಮಾರ್

ಮಂಡ್ಯ- ಇಂದ್ರೇಶ್ ಕುಮಾರ್

ಹಾಸನ- ಸಿದ್ದೇಶ್ ನಾಗೇಂದ್ರ

ಕೊಡಗು- ರವಿ ಕಾಳಪ್ಪ

ದಕ್ಷಿಣ ಕನ್ನಡ- ಸತೀಶ್ ಕುಂಪಲ

ಉಡುಪಿ- ಕಿಶೋರ್ ಕುಂದಾಪುರ

ಚಿಕ್ಕಮಗಳೂರು- ದೇವರಾಜ ಶೆಟ್ಟಿ

ಶಿವಮೊಗ್ಗ- ಟಿ.ಡಿ. ಮೇಘರಾಜ್

ಉತ್ತರ ಕನ್ನಡ- ಎನ್.ಎಸ್. ಹೆಗಡೆ

ಹಾವೇರಿ- ಅರುಣ್ ಕುಮಾರ್ ಪೂಜಾರ

ಹುಬ್ಬಳ್ಳಿ- ಧಾರವಾಡ- ತಿಪ್ಪಣ್ಣ ಮಜ್ಜಗಿ

ಧಾರವಾಡ ಗ್ರಾಮಾಂತರ- ನಿಂಗಪ್ಪ ಸುತ್ತಗಟ್ಟಿ

ಗದಗ- ರಾಜು ಕುರಡಗಿ

ಬೆಳಗಾವಿ ನಗರ- ಗೀತಾ ಸುತಾರ್

ಬೆಳಗಾವಿ ಗ್ರಾಮಾಂತರ- ಸುಭಾಷ್ ಪಾಟೀಲ್

ಚಿಕ್ಕೋಡಿ- ಸತೀಶ್ ಅಪ್ಪಾಜಿಗೋಳ್

ಬಾಗಲಕೋಟೆ- ಶಾಂತಗೌಡ ಪಾಟೀಲ್

ವಿಜಯಪುರ- ಆರ್.ಎಸ್. ಪಾಟೀಲ್

ಬೀದರ್- ಸೋಮನಾಥ‌ ಪಾಟೀಲ್

ಕಲ್ಬುರ್ಗಿ ನಗರ- ಚಂದ್ರಕಾಂತ ಪಾಟೀಲ್

ಕಲ್ಬುರ್ಗಿ ಗ್ರಾಮಾಂತರ- ಶಿವರಾಜ ಪಾಟೀಲ್ ರದ್ದೇವಾಡಿ

ಯಾದಗಿರಿ- ಅಮೀನ್ ರೆಡ್ಡಿ

ರಾಯಚೂರು- ಡಾ. ಶಿವರಾಜ ಪಾಟೀಲ್

ಕೊಪ್ಪಳ- ನವೀನ್ ಗುಳಗಣ್ಣನವರ್

ಬಳ್ಳಾರಿ- ಅನಿಲ್ ಕುಮಾರ್ ಮೋಕಾ

ವಿಜಯನಗರ- ಚನ್ನಬಸವನಗೌಡ ಪಾಟೀಲ್

ದಾವಣಗೆರೆ- ರಾಜಶೇಖರ್

ಚಿತ್ರದುರ್ಗ- ಎ. ಮುರಳಿ

ತುಮಕೂರು – ಹೆಚ್.ಎಸ್. ರವಿಶಂಕರ್

ಮಧುಗಿರಿ- ಬಿ.ಸಿ. ಹನುಮಂತೇಗೌಡ

ರಾಮನಗರ- ಆನಂದಸ್ವಾಮಿ

ಬೆಂಗಳೂರು ಗ್ರಾಮಾಂತರ- ರಾಮಕೃಷ್ಣಪ್ಪ

ಚಿಕ್ಕಬಳ್ಳಾಪುರ-ರಾಮಲಿಂಗಪ್ಪ

ಕೋಲಾರ- ಡಾ. ಕೆ.ಎನ್. ವೇಣುಗೋಪಾಲ್

ಬೆಂಗಳೂರು ಉತ್ತರ- ಎಸ್. ಹರೀಶ್

ಬೆಂಗಳೂರು ಕೇಂದ್ರ- ಸಪ್ತಗಿರಿಗೌಡ

ಬೆಂಗಳೂರು ದಕ್ಷಿಣ- ಸಿ.ಕೆ. ರಾಮಮೂರ್ತಿ

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!