Sunday, September 8, 2024

ಅಲ್ಪ ಸಂಖ್ಯಾತರ ತುಷ್ಟೀಕರಣದಲ್ಲಿ ಮುಳುಗಿರುವ ಕಾಂಗ್ರೆಸ್‌ ಪಕ್ಷಕ್ಕೆ ಬುದ್ದಿ ಇನ್ನೂ ಬಂದಿಲ್ಲ : ವಿಜಯೇಂದ್ರ ಆಕ್ರೋಶ

ಜನಪ್ರತಿನಿಧಿ ವಾರ್ತೆ (ಬೆಂಗಳೂರು) : ಅಯೋಧ್ಯೆಯ ಶ್ರೀರಾಮ ಮಂದಿರ ಲೋಕಾರ್ಪಣಾ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಗೈರಾಗುತ್ತಿರುವುದರಲ್ಲಿ ಅಚ್ಚರಿಯ ಸಂಗತಿಯೇನಿಲ್ಲ. ರಾಮ ಭಕ್ತರ ನಂಬಿಕೆಗಳಿಗೆ ವಿರುದ್ಧವಾಗಿಯೇ ನಡೆದುಕೊಳ್ಳುವ ಕಾಂಗ್ರೆಸ್ ಈಗ ತೆಗೆದುಕೊಂಡಿರುವ ನಿರ್ಧಾರ ಸರಿಯಾಗಿಯೇ ಇದೆ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ. ವೈ ವಿಜಯೇಂದ್ರ ಹೇಳಿದ್ದಾರೆ.

ಅಯೋಧ್ಯೆಯ ರಾಮ ಮಂದಿರ ಲೋಕಾರ್ಪಣೆಗೆ ಕಾಂಗ್ರೆಸ್‌ ಭಾಗಿಯಾಗುವುದಿಲ್ಲ ಎಂದು ನಿರ್ಧಾರ ಮಾಡಿರುವುದಕ್ಕೆ ಅವರು ಪ್ರತಿಕ್ರಿಯಿಸಿ, ಕಾಂಗ್ರೆಸ್‌ ಪಕ್ಷದ ನಿರ್ಧಾರ ರಾಮ ಭಕ್ತರಿಗೆ ಅನಿರೀಕ್ಷಿತವೇನಲ್ಲ ಎಂದು ಹೇಳಿದ್ದಾರೆ.

ರಾಮನ ಅಸ್ತಿತ್ವವನ್ನೇ ಪ್ರಶ್ನೆ ಮಾಡುತ್ತಿದ್ದ ಕಾಂಗ್ರೆಸ್‌ ಪಕ್ಷದವರು, ಬಾಬ್ರಿ ಮಸೀದಿ ಕೆಡವಿದಂತ ಸಂದರ್ಭದಲ್ಲಿ ಐದು ರಾಜ್ಯಗಳಲ್ಲಿ ಭಾರತೀಯ ಜನತಾ ಪಾರ್ಟಿಯ ಸರ್ಕಾರವನ್ನು  ವಜಾ ಮಾಡಿದಂತವರು. ಪದೇ ಪದೇ ದೇಶದಲ್ಲಿ ರಾಮ ಭಕ್ತರಿಗೆ ನಿರಂತರವಾಗಿ ಕಾಂಗ್ರೆಸ್‌ ತೊಂದರೆ ನೀಡುತ್ತಲೇ ಬಂದ ಕಾಂಗ್ರೆಸ್‌ ಪಕ್ಷ ತೆಗೆದುಕೊಂಡ ನಿರ್ಧಾರ ಯಾರೂ ಕೂಡ ಆಶ್ಚರ್ಯ ಪಡುವಂತದಲ್ಲ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್‌ ಪಕ್ಷದ ನಿಜ ಬಣ್ಣ ಏನೆಂದು ದೇಶದ ಮುಂದೆ ಮತ್ತೆ  ಬಯಲಾಗಿದೆ. ಅಲ್ಪ ಸಂಖ್ಯಾತರ ತುಷ್ಟೀಕರಣದಲ್ಲಿ ಮುಳುಗಿರುವ ಕಾಂಗ್ರೆಸ್‌ ಪಕ್ಷಕ್ಕೆ ಬುದ್ದಿ ಇನ್ನೂ ಬಂದಿಲ್ಲ, ಬರುವುದೂ ಇಲ್ಲ. ಇನ್ನೆರಡು ದಿನಗಳಲ್ಲಿ ರಾಮ ಮಂದಿರದಲ್ಲಿ ರಾಮನ ಮೂರ್ತಿ ಪ್ರತಿಷ್ಟಾಪನೆ ದಿನ ರಾಜ್ಯದ ಮುಜರಾಯಿ ಇಲಾಖೆಗೆ ಒಳಪಟ್ಟ ದೇವಾಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲು ಹೊರಡಿಸಿರುವ ಆದೇಶವನ್ನು ವಾಪಾಸ್‌ ಪಡೆಯಬಹುದೇನೋ ಎಂದು ಅವರು ಹೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!