spot_img
Thursday, April 16, 2026
spot_img

ಮುದೂರು: ಬೆಳ್ಕಲ್ ಗೋವಿಂದ ತೀರ್ಥದಲ್ಲಿ ಎಳ್ಳಮಾವಾಸ್ಯೆ ವಿಶೇಷ

ಕುಂದಾಪುರ: ಬೃಹದೆತ್ತರದ ಕಡಿದಾದ ಬರೆಯ ಮೇಲಿಂದ ಕವಲು-ಕವಲಾಗಿ ಗಾಳಿಯ ವೇಗೋತ್ಕರ್ಷಕ್ಕೆ ತಕ್ಕಂತೆ ತೇಲಾಡುತ್ತಾ ಧುಮ್ಮಿಕ್ಕುವ ಜಲಧಾರೆಯ ಆ ಭವ್ಯ ಸೊಬಗೇ ಕೊಡಚಾದ್ರಿ ತಪ್ಪಲಿನ ಬೆಳ್ಕಲ್ ಗೋವಿಂದ ತೀರ್ಥ. ದಟ್ಟ ಅರಣ್ಯದ ನಡುವೆ ಇರುವ ಮುದೂರು ಗ್ರಾಮದ ಬೆಳ್ಕಲ್ ತೀರ್ಥಕ್ಕೆ ಎಳ್ಳಮಾವಾಸ್ಯೆಯಾದ ಗುರುವಾರ ಸಾವಿರಾರು ಭಕ್ತಾದಿಗಳು ಆಗಮಿಸಿ ತೀರ್ಥಸ್ನಾನ ಮಾಡಿ ಪುನೀತರಾದರು.

ಮುದೂರು ಬೆಳ್ಕಲ್ ಗೋವಿಂದ ತೀರ್ಥಕ್ಕೆ ಎಳ್ಳಮಾವಾಸ್ಯೆಯಂದು ಸಾಕಷ್ಟು ಸಂಖ್ಯೆಯ ಭಕ್ತರು ಆಗಮಿಸುತ್ತಾರೆ. ಉಡುಪಿ ಜಿಲ್ಲೆಯ ವಿವಿಧೆಡೆಗಳಿಂದ ಭಕ್ತಾದಿಗಳು, ಚಾರಣಾಸಕ್ತರು ಇಲ್ಲಿಗೆ ಬರುತ್ತಾರೆ. ಈ ವರ್ಷವೂ ಕೂಡಾ ಸಾವಿರಾರು ಜನರು ಆಗಮಿಸಿದ್ದರು.

ಕೊಡಚಾದ್ರಿ ಮೇಲಿಂದ ಜಲಧಾರೆ ತುಂತುರು ಹನಿಯಾಗಿ, ಒಮ್ಮೊಮ್ಮೆ ದೊಡ್ಡ ಧಾರೆಯಾಗಿ ಮೈಮೇಲೆ ಬಿದ್ದಾಗ ಆ ಚೇತೋಹಾರಿ ಅನುಭವ ಗೋವಿಂದಾ ಎನ್ನುವ ಗಟ್ಟಿಯಾದ ಉದ್ಘೋಷ, ಉದ್ಗಾರದ ಹಿನ್ನೆಲೆಯಲ್ಲಿ ಧಾರ್ಮಿಕ ಭಾವನಾತ್ಮಕವಾದ ಸಂವೇಧನೆ ಇಲ್ಲಿ ಪುಟಿದೆಳುತ್ತದೆ. ಜಲ ಪಾತವಾಗುವ ಸ್ಥಳಕ್ಕೆ ತಲೆಕೊಟ್ಟು ನಿಂತು ಗೋವಿಂದಾ ಎಂದು ಭಕ್ತಿಯಿಂದ ಗೋವಿಂದನಾಮವಳಿ ಹೇಳುವುದನ್ನು ಕಾಣಬಹುದು.

ಮಾರ್ಗನಡುವೆ ಸ್ಥಳೀಯ ಭಜರಂಗದಳ ಘಟಕದ ವತಿಯಿಂದ ಭಕ್ತಾದಿಗಳಿಗೆ ಮಜ್ಜಿಗೆಯ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಾರ್ಗದ ಉದ್ದಕ್ಕೂ ಸ್ವಚ್ಛತೆ ಕಾಪಾಡುವಂತೆ ಫಲಕಗಳನ್ನು ಆಳವಡಿಸಲಾಗಿತ್ತು. ಗೋವಿಂದ ದೇವಸ್ಥಾನದಲ್ಲಿ ವಿಶೇಷ ಪೂಜೆ, ದಾರ್ಮಿಕ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನ ಆಗಮಿಸಿದ ಭಕ್ತಾದಿಗಳಿಗೆ ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಲಾಗಿತ್ತು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!