Sunday, September 8, 2024

ರಾಮ ಮಂದಿರ ನಿರ್ಮಿಸಿ ಗಾಂಧೀಜಿ ಕಲ್ಪನೆಗೆ ಜೀವ ತುಂಬಿದ್ದು ಮೋದಿ ಸರ್ಕಾರ : ಬಿಜೆಪಿ ತಿರುಗೇಟು !

ಜನಪ್ರತಿನಿಧಿ ವಾರ್ತೆ (ಬೆಂಗಳೂರು) : ಅಯೋಧ್ಯೆ ರಾಮಮಂದಿರದಲ್ಲಿ ಪ್ರತಿಷ್ಠಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಪ್ರತಿಷ್ಠೆಯ ವಾರ್‌ ಆರಂಭವಾಗಿದೆ.  ಭಾರತದ ಹಳ್ಳಿ, ಹಳ್ಳಿಗಳಲ್ಲಿ ಲಕ್ಷಾಂತರ ರಾಮದೇಗುಲ ನಿರ್ಮಾಣವಾಗಿದ್ದು ಕಾಂಗ್ರೆಸ್ ಆಡಳಿತದಲ್ಲಿ ಎಂದು ಕಾಂಗ್ರೆಸ್‌ ತನ್ನ ಬೆನ್ನನ್ನೇ ತಾನು ತಟ್ಟಿಕೊಂಡಿತ್ತು. ಈಗ ಬಿಜೆಪಿಯ ಸರದಿ. ರಾಮ ಮಂದಿರ ಹೋರಾಟಕ್ಕೆ ಸಂಬಂಧಿಸಿದಂತೆ ಈಗ ಬಿಜೆಪಿ ತನ್ನನ್ನು ತಾನೇ ಶ್ಲಾಘನೆ ಮಾಡಿಕೊಂಡಿದೆ.

ಈ ಬಗ್ಗೆ ತನ್ನ ಅಧಿಕೃತ ಮೈಕ್ರೋಬ್ಲಾಗಿಂಗ್‌ ʼಎಕ್ಸ್‌ʼ ಖಾತೆಯ ಮೂಲಕ ಕಾಂಗ್ರೆಸ್‌ ಗೆ ತಿರುಗೇಟು ನೀಡಿ ತನ್ನ ಬೆನ್ನನ್ನು ತಟ್ಟಿ ಕೊಂಡ ಬಿಜೆಪಿ, ಹಳ್ಳಿ ಹಳ್ಳಿಗಳಲ್ಲಿ ರಾಮ ಮಂದಿರ ನಿರ್ಮಾಣವಾಗಿದ್ದು ರಾಮ ಭಕ್ತರಿಂದ, ಆದರೆ ದೇವಾಲಯವನ್ನು ಮುಜರಾಯಿ ಇಲಾಖೆಗೆ ಸೇರಿಸಿ ಅದರಿಂದ ಬರುವ ಆದಾಯವನ್ನು ದೋಚಿದ್ದು ನೀವು!  ಮಹಾತ್ಮಾ ಗಾಂಧಿಯವರ ರಾಮರಾಜ್ಯದ ಕಲ್ಪನೆಯನ್ನು ಮೂಲೆಗೆ ಸೇರಿಸಿದ್ದು ಕಾಂಗ್ರೆಸ್, ಆದರೆ ಇಂದು ರಾಮ ಮಂದಿರ ನಿರ್ಮಿಸಿ ಅವರ ಕಲ್ಪನೆಗೆ ಜೀವ ತುಂಬಿದ್ದು ಮೋದಿ ಸರ್ಕಾರ ಎಂದು ಹೇಳಿದೆ.

ಇನ್ನು ಪುಂಖಾನುಪುಂಖವಾಗಿ ಕಾಂಗ್ರೆಸ್‌ನನ್ನು ಪ್ರಶ್ನಿಸಿದ ಬಿಜೆಪಿ, ರಾಮ ಮಂದಿರದ ಬೀಗ ತೆಗಿಸಲು ಅವಕಾಶ ಕಲ್ಪಿಸಿಕೊಟ್ಟಿದ್ದು ರಾಜೀವ್ ಗಾಂಧಿಯಾದರೆ..!? ರಾಮ‌ ಮಂದಿರದ ವಿರುದ್ಧವಾಗಿ ನ್ಯಾಯಾಲಯದಲ್ಲಿ ದಾವೆ ಹೂಡಲು ಕಪಿಲ್ ಸಿಬಲ್‌ರನ್ನು ಕಳುಹಿಸಿದ್ದು ಯಾರು ?  ಸ್ವಾತಂತ್ರ್ಯ ದೊರಕಿದಾಗಿನಿಂದ ರಾಮ ಮಂದಿರದ ಕಲ್ಪನೆ ದೇಶದ ಜನರಲ್ಲಿತ್ತು, ಅಂದಿನಿಂದ ಇಂದಿನವರೆಗೂ ನಿರ್ಮಾಣವಾಗದ ರಾಮ ಮಂದಿರ ನಿಮ್ಮ ರಾಜೀವ್ ಗಾಂಧಿ ಕಾಲಘಟ್ಟದಲ್ಲಿ ಯಾಕೆ ಆಗಲಿಲ್ಲ ? ತಡೆದವರು ಯಾರು ?  ರಾಮ ಮತ್ತು ರಾಮನ ಆದೇಶವನ್ನು ಪಾಲಿಸುತ್ತಾ ಬಂದಿದ್ದರೆ ಕಾಂಗ್ರೆಸ್ ಪಕ್ಷ ರಾಮನನ್ನು ಕೇವಲ ಕಾಲ್ಪನಿಕ ಎಂದು ಏಕೆ ವ್ಯಂಗ್ಯ ಮಾಡುತ್ತಿತ್ತು ? ಎಂದು ಕಟುವಾಗಿ ಪ್ರಶ್ನಿಸಿದೆ.

ಮಾತ್ರವಲ್ಲದೆ, ಕಳೆದ 70 ವರ್ಷಗಳಿಂದಲೂ ಹಿಂದುಗಳ ಆದರ್ಶ ಪುರುಷನಾದ ಶ್ರೀ ರಾಮನ ಮಂದಿರ ನಿರ್ಮಾಣ ಮಾಡಲು ಮೀನಾಮೇಷ ಎಣಿಸಿದ್ದು ಕಾಂಗ್ರೆಸ್ಸಿನಿಂದ ಜನರ ನಂಬಿಕೆಗೆ ಆದ ದುರಂತ ಎಂದು ಹೇಳಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!