spot_img
Friday, May 8, 2026
spot_img

ಕಲಾಕೇಂದ್ರ ಹಂಗಾರಕಟ್ಟೆ ಐರೋಡಿ: ಯಕ್ಷ ಸಪ್ಪೋತ್ಸವಕ್ಕೆ ಚಾಲನೆ

ಸಾಸ್ತಾನ: ಕಲಾಕೇಂದ್ರ ಹಂಗಾರಕಟ್ಟೆ ಐರೋಡಿ ಇದರ ಐವತ್ತರ ಸಂಭ್ರಮದ ಪ್ರಯುಕ್ತ ಹಿರಿಯರ ನೆನಪಾಗಿ ಯಕ್ಷ ಸಪ್ರೋತ್ಸವ ಎನ್ನುವ ಸಮಾರಂಭ ಜ.1ರಿಂದ 7ರ ತನಕ ಸಾಲಿಗ್ರಾಮ ಗುಂಡ್ಮಿ ಸದಾನಂದ ರಂಗ ಮಂಟಪದಲ್ಲಿ ನಡೆಯಲಿದ್ದು, ಜ.1 ರಂದು ಇದಕ್ಕೆ ಚಾಲನೆ ನೀಡಲಾಯಿತು.

ಉಡುಪಿಯ ರಂಗಭೂಮಿ ಸಂಸ್ಥೆಯ ಅಧ್ಯಕ್ಷತಲ್ಲೂರು ಶಿವರಾಮ ಶೆಟ್ಟಿ ಚಾಲನೆ ನೀಡಿ ಯಕ್ಷಗಾನ ರಂಗಕ್ಕೆ ನೂರಾರು ಪ್ರಬುದ್ಧ ಕಲಾವಿದರನ್ನು ನೀಡಿದ ಹಿರಿಮೆ ಹಂಗಾರ ಕಟ್ಟೆ ಯಕ್ಷಗಾನ ಕಲಾಕೇಂದ್ರಕ್ಕೆ ಸಲ್ಲುತ್ತದೆ ಎಂದರು. ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ್ ಎಸ್.ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.

ಉಡುಪಿ ಜಿಲ್ಲಾಧಿಕಾರಿಗಳ ಆಪ್ತ ಸಹಾಯಕ, ಹವ್ಯಾಸಿ ಯಕ್ಷಗಾನಕಲಾವಿದ ಜನಾಬ್ ಮಹಮ್ಮದ್ ಅಶ್ಚಕ್ ಹುಸೇನ್ ಅವರನ್ನು ಸಮ್ಮಾನಿಸಲಾಯಿತು.

ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲಾ ನಿರ್ದೇಶಕಿ ಪೂರ್ಣಿಮಾ, ಉಳ್ಳೂರು ವಿನಾಯಕ ಯುವಕ ಸಂಘದ ಅಧ್ಯಕ್ಷ ವೆಂಕಟೇಶ್ ಕರ್ಮಧಾರಿ, ಸಾಲಿಗ್ರಾಮ ಗುರು ನರಸಿಂಹ ದೇಗುಲದ ಆಡಳಿತ ಮಂಡಳಿ

ಸದಸ್ಯ ಆನಂತಪದ್ಮನಾಭ ಐತಾಳ ಇದ್ದರು. ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ್ ಹೆಬ್ಬಾರ್ ಸ್ವಾಗತಿಸಿ, ಕ.ಸಾ.ಪ. ಬ್ರಹ್ಮಾವರ ತಾ| ಅಧ್ಯಕ್ಷರಾಮಚಂದ್ರ ಐತಾಳ ನಿರೂ ಪಿಸಿದರು. ಅನಂತರ ಅಚ್ಯುತ್ ಪೂಜಾರಿ ಕಾರ್ಕಡ ಅವರಿಂದ ಸ್ವರಸಿಂಚನ, ಆಯ್ದ ಕಲಾವಿದರ ಕೂಡುವಿಕೆಯಲ್ಲಿ ರಾಮಾಯಾಣದ ಧರ್ಮಸೂಕ್ಷ್ಮಗಳು ಯಕ್ಷಗಾನ ಪ್ರದರ್ಶನ ಜರಗಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!