spot_img
Tuesday, March 24, 2026
spot_img

ರಾಜ್ಯ ಬಿಜೆಪಿಯ ನಾಯಕರು ನಿಜವಾಗಿಯೂ ಹಿಡಿದು ಕೂರಬೇಕಾದ ಪೋಸ್ಟರ್ ಹೀಗಿರಬೇಕು…. : ಕಾಂಗ್ರೆಸ್‌ ಹೇಳಿದ್ದೇನು ?

ಜನಪ್ರತಿನಿಧಿ ವಾರ್ತೆ (ಬೆಂಗಳೂರು) : ರಾಮ ಮಂದಿರದ ಹೋರಾಟದಲ್ಲಿ ಭಾಗಿಯಾಗಿರುವ ಕರ ಸೇವಕರನ್ನು  ಬಂಧಿಸಿ ಹಿಂದೂ ವಿರೋಧಿ ಧೋರಣೆಯನ್ನು ಪ್ರದರ್ಶಿಸುತ್ತಿದೆ ಎಂದು ವಿರೋಧ ಪಕ್ಷ  ಬಿಜೆಪಿ ಕಾಂಗ್ರೆಸ್‌ ವಿರುದ್ಧ , ʼನಾನೂ ಕರಸೇವಕ ನನ್ನನ್ನೂ ಬಂಧಿಸಿʼ ಎಂಬ ಹೊಸ ಅಭಿಯಾನ ಆರಂಭಿಸಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ಬಿಜೆಪಿಗೆ ತಿರುಗೇಟು ನೀಡಿದೆ.

ತನ್ನ ಅಧಿಕೃತ ಮೈಕ್ರೋಬ್ಲಾಗಿಂಗ್‌ ʼಎಕ್ಸ್‌ʼ ಖಾತೆಯ ಮೂಲಕ ಬಿಜೆಪಿ ನಾಯಕರನ್ನು ಕಾಂಗ್ರೆಸ್‌  ತರಾಟೆಗೆ ತೆಗೆದುಕೊಂಡಿದೆ. ಮಾಜಿ ಶಾಸಕ ಸಿಟಿ ರವಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ, ವೈ ವಿಜಯೇಂದ್ರ, ಕಾರ್ಕಳ ಶಾಸಕ ಸುನೀಲ್‌ ಕುಮಾರ್‌, ಬಿಜೆಪಿ ನಾಯಕ ಈಶ್ವರಪ್ಪ ಹಾಗೂ ಮೈಸೂರು ಸಂಸದ ಪ್ರತಾಪ್‌ ಸಿಂಹ ಅವರುಗಳನ್ನು ಟೀಕೆ ಮಾಡಿದೆ.

ರಾಜ್ಯ ಬಿಜೆಪಿಯ ನಾಯಕರು ನಿಜವಾಗಿಯೂ ಹಿಡಿದು ಕೂರಬೇಕಾದ ಪೋಸ್ಟರ್ ಹೀಗಿರಬೇಕು ಎಂದು ಮಾಜಿ ಶಾಸಕ ಸಿಟಿ ರವಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ, ವೈ ವಿಜಯೇಂದ್ರ, ಕಾರ್ಕಳ ಶಾಸಕ ಸುನೀಲ್‌ ಕುಮಾರ್‌, ಬಿಜೆಪಿ ನಾಯಕ ಈಶ್ವರಪ್ಪ ಹಾಗೂ ಮೈಸೂರು ಸಂಸದ ಪ್ರತಾಪ್‌ ಸಿಂಹ ಅವರ ಅವರುಗಳು ಒಂದು ಪೋಸ್ಟರ್ ಹಿಡಿದಿರುವಂತೆ ಪೋಸ್ಟರ್‌ ರಚಿಸಿ ಟೀಕೆ ಮಾಡಿದೆ.

ಸಿಟಿ ರವಿ ಅವರೇ, ನಿಮ್ಮನ್ನು ಬಂಧಿಸಬೇಕಾದ ಕಾರಣಗಳು ಬೇರೆ ಇವೆಯಲ್ಲವೇ ? ಎಂದು ಪ್ರಶ್ನಿಸಿ ʼನಾನು ಕಾರು ಚಲಾಯಿಸಿ ಇಬ್ಬರ ಹತ್ಯೆ ಮಾಡಿದ್ದೇನೆ ನನ್ನನ್ನೂ ಬಂಧಿಸಿʼ ಎಂದಿರುವ ಪೋಸ್ಟರ್‌ ಹಿಡಿದಿರುವ ಪೋಟೋ ಹಿಡಿದು ಟೀಕೆ ಮಾಡಿದೆ.  

ಇನ್ನು, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಅವರು ಈ ಪೋಸ್ಟರ್ ಹಿಡಿದು ಕುಳಿತರೆ ಸೂಕ್ತ.  ಎಂದು ʼನಾನು ಆರ್ ಟಿ ಜಿ ಎಸ್‌ ಮೂಲಕ ಲಂಚ ಪಡೆದಿದ್ದೇನೆ, ೪೦,೦೦೦ ಕೋಟಿಯ ಅಕ್ರಮದಲ್ಲಿ ಪಾಲುದಾರ ನನ್ನನ್ನೂ ಬಂಧಿಸಿʼ ಎಂದು ಬರೆಯಲಾಗಿರುವ ಪೋಸ್ಟರ್‌ ನನ್ನು ವಿಜಯೇಂದ್ರ ಹಿಡಿದಿರುವಂತೆ ಪೋಸ್ಟರ್‌ ರಚಿಸಿ, ಬಿಜೆಪಿಗರೆಲ್ಲರೂ “ನನ್ನನ್ನೂ ಬಂಧಿಸಿ“ ಎಂದು ಒತ್ತಾಯಿಸುತ್ತಿರುವುದು ತಾವು ಮಾಡಿದ ಅಕ್ರಮಗಳ, ಹಗರಣಗಳ ಪ್ರಾಯಶ್ಚಿತ್ತಕ್ಕಾಗಿಯೇ? ಎಂದು ಪ್ರಶ್ನೆ ಮಾಡಿದೆ.

ನನ್ನನ್ನೂ ಬಂಧಿಸಿ ಎನ್ನುತ್ತಿರುವ ಸುನೀಲ್‌ ಕುಮಾರ್‌ ಕಾರ್ಕಳ ಅವರೇ, ಪರಶುರಾಮ ಮೂರ್ತಿಗೆ ಕಂಚಿನ ಬದಲು ಫೈಬರ್ ಹಾಕಿದ್ದಕ್ಕೆ ನಿಮ್ಮನ್ನು ಬಂಧಿಸಬೇಕೆ? ಅಥವಾ ಸರ್ಕಾರದ ಸಿಮೆಂಟ್ ಕಳ್ಳತನದ ಆರೋಪಕ್ಕಾಗಿ ಬಂಧಿಸಬೇಕೆ? ಎಂದು ಪ್ರಶ್ನಿಸಿದ್ದಲ್ಲದೇ, ʼನಾನು ಪರಶುರಾಮನ ಮೂರ್ತಿಯ ಕಂಚನ್ನು ಕದ್ದಿದ್ದೇನೆ, ಸರ್ಕಾರಿ ಸಿಮೆಂಟ್‌ ಕದ್ದಿದ್ದೇನೆ ನನ್ನನ್ನೂ ಬಂಧಿಸಿʼ ಎಂದಿರುವ ಪೋಸ್ಟರ್‌ ಹಿಡಿದಿರುವ ಸುನೀಲ್‌ ಕುಮಾರ್‌ ಅವರ ಪೋಸ್ಟರ್‌ ರಚಿಸಿ ತಿವಿದಿದ್ದಲ್ಲದೇ ರಾಮನ ಹೆಸರಲ್ಲಿ ರಾವಣನ ಕೆಲಸ ಮಾಡುವ ಆರೋಪಿಗಳನ್ನು ಬಂಧಿಸಬೇಕಲ್ಲವೇ? ಖಡಕ್‌ ಆಗಿ ಪ್ರಶ್ನಿಸಿದೆ.

ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ಈಶ್ವರಪ್ಪರನ್ನು ಟೀಕಿಸಿದ ಕಾಂಗ್ರೆಸ್‌, ಅವರು ಹಿಡಿಯಬೇಕಾದ ಪೋಸ್ಟರ್ ಇದು! ಎಂದು ʼ ೪೦% ಕಮಿಷನ್‌ ನುಂಗಿ ಸಂತೋಷ್‌ ಪಾಟೀಲ್‌ ಸಾವಿಗೆ ಕಾರಣನಾಗಿದ್ದೇನೆ ನನ್ನನ್ನೂ ಬಂಧಿಸಿʼ ಎಂದು ಬರೆದಿರವ ಪೋಸ್ಟರ್‌ ಹಿಡಿದಿರುಯವ ಈಶ್ವರಪ್ಪನವರ ಪೋಸ್ಟರ್‌ನನ್ನು ರಚಿಸಿ ಲೇವಡಿ ಮಾಡಿದ್ದಲ್ಲದೇ, ನ್ಯಾಯಾಲಯದಲ್ಲಿ ಬಿಜೆಪಿಗರ ಅಕ್ರಮಗಳು, ಅನಾಚಾರಗಳು, ಹಗರಣಗಳು ಸಾಬೀತಾದರೆ ನನ್ನನ್ನೂ ಬಂಧಿಸಿ ಎಂದು ಹೇಳುವುದೇ ಬೇಡ, ಬಂಧನ ಆಗೇ ಆಗುತ್ತದೆ!

ಪ್ರತಾಪ್‌ ಸಿಂಹ  ಅವರೇ, ʼನಾನು ಸಂಸತ್‌ ದಾಳಿಕೋರರಿಗೆ ಪಾಸ್‌ ಕೊಟ್ಟು ಸಹಕರಿಸಿದ್ದೇನೆ ನನ್ನನ್ನೂ ಬಂಧಿಸಿʼ ನೀವು ಈ ಪೋಸ್ಟರ್ ಹಿಡಿದು ಕೂರುವ ಧೈರ್ಯ ತೋರಿಸಿ, ನಿಮ್ಮವರೇ ಹೇಳುವ ದಮ್ಮು, ತಾಕತ್ತು ಪ್ರದರ್ಶಿಸಿ! ಎಂದು ವ್ಯಂಗ್ಯವಾಗಿ ಟೀಕೆ ಮಾಡಿದೆ.

(ಫೋಟೋಗಳು : ರಾಜ್ಯ ಕಾಂಗ್ರೆಸ್‌ ನ ಅಧಿಕೃತ ʼಎಕ್ಸ್‌ʼ ಖಾತೆಯಿಂದ ಪಡೆಯಲಾಗಿದೆ)

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!