Sunday, September 8, 2024

ವಿಶ್ವಕಪ್‌ ಟೂರ್ನಿಯಲ್ಲಿ ಆಡಿದ ಪ್ರತಿ ಪಂದ್ಯದುದ್ದಕ್ಕೂ ನೋವು ನಿವಾರಕ ಚುಚ್ಚುಮದ್ಧು ತೆಗೆದುಕೊಂಡು ಶಮಿ ದೇಶಕ್ಕಾಗಿ ಆಡಿದ್ದರು ! : ಪಿಟಿಐ ವರದಿ

ಜನಪ್ರತಿನಿಧಿ ವಾರ್ತೆ (ನವ ದೆಹಲಿ) :  ಭಾರತದಲ್ಲಿ ನಡೆದ ODI ವಿಶ್ವಕಪ್ 2023 ರ ಮೊದಲ ನಾಲ್ಕು ಪಂದ್ಯಗಳಲ್ಲಿ ಟೀಂ ಇಂಡಿಯಾದ ಶರವೇಗದ ಬೌಲರ್ ಮೊಹಮ್ಮದ್ ಶಮಿ ಆಡಿರಲಿಲ್ಲ, ಆದರೇ, ಉಳಿದ ಪಂದ್ಯಗಳಿಗೆ ಶಮಿ ಮರಳಿದರು. ಶಮಿ ಏಳು ಪಂದ್ಯಗಳಲ್ಲಿ 10.70 ಸರಾಸರಿ ಮತ್ತು 12.20 ಸ್ಟ್ರೈಕ್ ರೇಟ್‌ನಲ್ಲಿ 24 ವಿಕೆಟ್‌ಗಳನ್ನು ವಿಶ್ವಕಪ್‌ ಟೂರ್ನಿಯಲ್ಲಿ ಪಡೆದಿದ್ದರು.

ಟೀಂ ಇಂಡಿಯಾ ವಿಶ್ವಕಪ್‌ನ ಫೈನಲ್‌ ತಲುಪುವರೆಗೆ ಬಹು ಮುಖ್ಯ ಪಾತ್ರವೂ ಆಗಿದ್ದ ಶಮಿ. ವಿಶ್ವಕಪ್‌ನುದ್ದಕ್ಕೂ ‘ದೀರ್ಘಕಾಲದ ಹಿಮ್ಮಡಿ ಸಮಸ್ಯೆ’ಯ ಜೊತೆಜೊತೆಗೆ ಪಂದ್ಯವನ್ನು ಆಡಿ ಟೀಂ ಇಂಡಿಯಾದ ಗೆಲುವಿಗೆ ಪ್ರಮುಖ ಕಾರಣರಾಗಿದ್ದಾರೆ. ವಿಶ್ವಕಪ್‌ ಟೂರ್ನಿಯುದ್ದಕ್ಕೂ ಶಮಿ ನೋವು ನಿವಾರಣೆಗಾಗಿ ಚುಚ್ಚುಮದ್ದನ್ನು (ಇಂಜೆಕ್ಶನ್) ತೆಗೆದುಕೊಳ್ಳುತ್ತಿದ್ದರು ಎಂಬ ವರದಿಯೊಂದು ಈಗ ಹೊರಬಂದಿದೆ.  

ಶಮಿ ದೀರ್ಘಕಾಲ ಹಿಮ್ಮಡಿ ನೋವಿನಿಂದ ಬಳಲುತ್ತಿದ್ದರೂ ನೋವು ನಿವಾರಕ ಚುಚ್ಚುಮದ್ದನ್ನು ತೆಗೆದುಕೊಂಡು ಟೀಂ ಇಂಡಿಯಾದ ಗೆಲುವಿಗಾಗಿ ಶ್ರಮ ಪಟ್ಟಿದ್ದಾರೆ. ಇಡೀ ಪಂದ್ಯಾವಳಿಯನ್ನು ನೋವಿನಿಂದ ಆಡಿದರು ಎಂಬುದು ಬಹಳಷ್ಟು ಜನರಿಗೆ ತಿಳಿದಿಲ್ಲ,   ಎಂದು ಹೆಸರು ಹೇಳಲಿಚ್ಛಿಸದ ಶಮಿ ಅವರ ಬಂಗಾಳದ  ಮಾಜಿ ಸಹ ಆಟಗಾರರೊಬ್ಬರು ತಿಳಿಸಿದ್ದಾರೆಂದು ಅಂತರಾಷ್ಟ್ರೀಯ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!