spot_img
Sunday, April 19, 2026
spot_img

ಪಾಕಿಸ್ತಾನಿಗಳು ಈ ಬಾರಿ ಹೊಸ ವರ್ಷವನ್ನು ಆಚರಿಸುವುದಿಲ್ಲವಂತೆ ! ಯಾಕೆ ಗೊತ್ತಾ..? ಇಲ್ಲಿದೆ ಮಾಹಿತಿ.

ಜನಪ್ರತಿನಿಧಿ ವಾರ್ತೆ (ನವ ದೆಹಲಿ ) : ಇಡೀ ವಿಶ್ವಕ್ಕೆ ವಿಶ್ವವೇ 2024 ರನ್ನು ಸ್ವಾಗತಿಸುವುದಕ್ಕೆ ತಯಾರಾಗಿರುವಾಗ ಪಾಕಿಸ್ತಾನ ಸರ್ಕಾರ ನಾವು ಈ ಬಾರಿ ಹೊಸ ವರ್ಷ ಆಚರಣೆ ಮಾಡುವುದಿಲ್ಲ ಎಂದು ಹೇಳಿದೆ.

ವಿಡಿಯೋ ಕಾನ್ಫರೆನ್ಸ್‌ ಮೂಲಕ ಈ ಬಗೆಗ ಮಾತನಾಡಿದ  ಪಾಕಿಸ್ತಾನದ ಉಸ್ತುವಾರಿ, ಪ್ರಭಾರ ಪ್ರಧಾನಿ ಅನ್ವಾರುಲ್ ಹಕ್ ಕಾಕರ್,  ಹೊಸ ವರ್ಷದ ಸಂಕಲ್ಪಗಳು ಇರುತ್ತವೆ ಆದರೆ 2024 ಹೊಸ ವರ್ಷದ ಸಂಭ್ರಮಾಚರಣೆ ಇರುವುದಿಲ್ಲ. ಪ್ಯಾಲೆಸ್ಟೈನ್ ಜನರಿಗೆ ಬೆಂಬಲ ಸೂಚಿಸುವ ದೃಷ್ಟಿಯಿಂದ ಈ ಬಾರಿ ಪಾಕಿಸ್ತಾನಿಗಳಿಗೆ ಹೊಸ ವರ್ಷಾಚರಣೆ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ. ಪ್ಯಾಲೆಸ್ಟೈನ್ನರಿಗೆ ಬೆಂಬಲ ಸೂಚಿಸುವ ದೃಷ್ಟಿಯಿಂದ ಸರ್ಕಾರವು “ಹೊಸ ವರ್ಷದ ಆಚರಣೆಗೆ ಸಂಬಂಧಿಸಿದ ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ” ಎಂದು ಹೇಳಿದ್ದಾರೆ.

ಗಾಜಾ ಪಟ್ಟಿಯಲ್ಲಿ “ದಮನಕ್ಕೊಳಗಾದ ಪ್ಯಾಲೆಸ್ಟೀನಿಯನ್ನರ ನರಮೇಧ, ವಿಶೇಷವಾಗಿ ಮುಗ್ಧ ಮಕ್ಕಳ ಹತ್ಯಾಕಾಂಡ” ದಿಂದ ರಾಷ್ಟ್ರ ಮತ್ತು ಮುಸ್ಲಿಂ ‘ಉಮ್ಮಾ’ (ಸಹೋದರತ್ವ) ತೀವ್ರವಾಗಿ ದುಃಖಿತವಾಗಿದೆ ಎಂದು ಹೇಳಿದರು.

ಅಕ್ಟೋಬರ್ 7, 2023 ರಿಂದ, ಕ್ರೂರ ಇಸ್ರೇಲಿ ಪಡೆಗಳಿಂದ 21,000 ಕ್ಕೂ ಹೆಚ್ಚು ಅಮಾಯಕ ಪ್ಯಾಲೆಸ್ಟೀನಿಯನ್ನರು ಹುತಾತ್ಮರಾಗಿದ್ದಾರೆ, 9,000 ಹೆಚ್ಚಿನ ಸಂಖ್ಯೆಯ ಮುಗ್ಧ ಮಕ್ಕಳು ಮೃತರಾಗಿದ್ದಾರೆಂದು ಕಾಕರ್ ಹೇಳಿದ್ದಾರೆ ಎಂದು ಪಾಕಿಸ್ತಾನಿ ಸುದ್ದಿ ಸಂಸ್ಥೆ ಡಾನ್ ವರದಿ ಮಾಡಿದೆ.

ಪ್ಯಾಲೇಸ್ಟಿನಿಯನ್ ಜನರಿಗೆ ಸಹಾಯದ ಹಸದತ ಚಾಚುವ ದೃಷ್ಟಿಯಿಂದ ಪಾಕಿಸ್ತಾನ ಸರ್ಕಾರವು ಈಗಾಗಲೇ ಎರಡು ಬಾರಿ ಸಾಮಗ್ರಿಗಳನ್ನು ಕಳುಹಿಸಿದೆ, ಮೂರನೇ ಸುತ್ತಿನ ಸಾಮಾಗ್ರಿಗಳನ್ನು ಹಾಗೂ ಅಗತ್ಯ ವಸ್ತುಗಳನ್ನು ಶೀಘ್ರದಲ್ಲೇ ಕಳುಹಿಸಲಾಗುವುದು. ಅಂತೆಯೇ, ಪ್ಯಾಲೆಸ್ಟೀನಿಯನ್ನರ ಸಕಾಲಿಕ ಪರಿಹಾರ, ಗಾಜಾದಲ್ಲಿ ಗಾಯಗೊಂಡವರನ್ನು ಸ್ಥಳಾಂತರಿಸುವುದು ಮತ್ತು ಅವರ ಚಿಕಿತ್ಸೆಗಾಗಿ ಪಾಕಿಸ್ತಾನ ಸರ್ಕಾರವು ಈಜಿಪ್ಟ್ ಮತ್ತು ಜೋರ್ಡಾನ್‌ನೊಂದಿಗೆ ನಿಕಟ ಸಂಪರ್ಕದಲ್ಲಿದೆ ಎಂದು ಅವರು ಹೇಳಿರುವುದಾಗಿ ಅಂತರಾಷ್ಟ್ರೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ.  

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!