Sunday, September 8, 2024

ಡಿಎಂಡಿಕೆ ಸಂಸ್ಥಾಪಕ ನಾಯಕ ಹಾಗೂ ತಮಿಳಿನ ಹಿರಿಯ ನಟ ವಿಜಯಕಾಂತ್‌ ವಿಧಿವಶ !

ಜನಪ್ರತಿನಿಧಿ ವಾರ್ತೆ(ತಮಿಳುನಾಡು ) : ತೀವ್ರ ಅನಾರೋಗ್ಯಕ್ಕೀಡಾಗಿದ್ದ ತಮಿಳಿನ ಸೂಪರ್‌ ಸ್ಟಾರ್‌ ಹಾಗೂ ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಸಂಸ್ಥಾಪಕ ನಾಯಕ ವಿಜಯಕಾಂತ್‌ ಇಂದು(ಗುರುವಾರ) ವಿಧಿವಶರಾಗಿದ್ದಾರೆ.

ಹಲವು ದಿನಗಳಿಂದೀಚೆಗೆ ತೀವ್ರ  ಅನಾರೋಗ್ಯಕ್ಕೆ ಈಡಾಗಿದ್ದ ಅವರು, ತಮಿಳುನಾಡಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗೆ ಒಳಗಾಗಿದ್ದರು. ಈ ಸಂದರ್ಭದಲ್ಲಿ ಅವರಿಗೆ ಕೋವಿಡ್‌ ಸೋಂಕು ತಗುಲಿತ್ತು ಎಂಬ ವರದಿಯೂ ಬಂದಿದೆ.

ಆಸ್ಪತ್ರೆಯು ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಬಿಡುಗಡೆ ಮಾಡಿದ್ದು, ಕ್ಯಾಪ್ಟನ್‌  ವಿಜಯಕಾಂತ್‌ ಅವರು ನ್ಯುಮೋನಿಯಾದಿಂದ ಬಳಲುತ್ತಿದ್ದರು. ಇಲ್ಲಿ ದಾಖಲಾದ ಬಳಿಕ ವೆಂಟಿಲೇಟರ್‌ ನಲ್ಲಿದ್ದರು. ಎಲ್ಲಾ ವೈದ್ಯಕೀಯ ಸಿಬ್ಬಂದಿಗಳ ಪ್ರಯತ್ನದ ಆಚೆಗೂ ಅವರು ಇಂದು ಬೆಳಗ್ಗೆ ಇಹಲೋಕವನ್ನು ತ್ಯಜಿಸಿದ್ದಾರೆ ಎಂದು ತಿಳಿದು ಬಂದಿದೆ.

ಕೋವಿಡ್‌ ಪಾಸಿಟಿವ್‌ : ವಿಜಯಕಾಂತ್‌ ಅವರಿಗೆ ಕೋವಿಡ್‌ ಸೋಂಕು ತಗುಲಿದ್ದು ಪತ್ತೆಯಾಗಿತ್ತು. ಅವರಲ್ಲಿ ಉಸಿರಾಟದ ಸಮಸ್ಯೆಯೂ ಕಾಣಿಸಿಕೊಂಡಿತ್ತು. ಈ ಕಾರಣದಿಂದ ಅವರನ್ನು ವೆಂಟಿಲೇಟರ್‌ಗೆ ಅಳವಡಿಸಲಾಗಿತ್ತು. ಕೋವಿಡ್‌ ಟೆಸ್ಟ್‌ ನಲ್ಲಿ ಅವರಿಗೆ ಕೋವಿಡ್‌ ಪಾಸಿಟಿವ್‌ ಕಂಡುಬಂದಿದೆ ಎಂದು ಆಸ್ಪತ್ರೆ ತನ್ನ ಅಧಿಕೃತ ಮಾಹಿತಿಯಲ್ಲಿ ತಿಳಿಸಿದೆ.

ತಮಿಳಿನ ಸೂಪರ್‌ ಸ್ಟಾರ್‌ ವಿಜಯಕಾಂತ್‌ ರಾಜಕೀಯ ಪ್ರವೇಶ ಪಡಯುವುದಕ್ಕೂ ಮುನ್ನ ಸುಮಾರು 154 ಸಿನೆಮಾಗಳಲ್ಲಿ ನಟಿಸಿದ್ದರು. 2005 ರಲ್ಲಿ ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ ಪಕ್ಷವನ್ನು ಸ್ಥಾಪಿಸಿದರು. 2006ರಲ್ಲಿ ಡಿಎಂಡಿಕೆ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ರಾಜ್ಯದಲ್ಲಿ ಶೇಕಡಾ 10 ಕ್ಕಿಂತ ಕಡಿಮೆ ಮತ ಗಳಿಸಿತ್ತು. ವಿಜಯಕಾಂತ್‌ ಮಾತ್ರ ಚುನಾವಣೆಯಲ್ಲಿ ಗೆದ್ದು, ಉಳಿದವರೆಲ್ಲರೂ ಸೋಲನುಭವಿಸಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!