spot_img
Wednesday, January 22, 2025
spot_img

ಅಯೋಧ್ಯೆ ರೈಲು ಜಂಕ್ಷನ್‌ಗೆ ʼಅಯೋಧ್ಯಾ ಧಾಮ್ʼ ಎಂದು ಮರುನಾಮಕರಣ !

ಜನಪ್ರತಿನಿಧಿ ವಾರ್ತೆ (ಅಯೋಧ್ಯೆ) :  ರಾಮ ಮಂದಿರದ ಉದ್ಘಾಟನೆಗೆ ಮುನ್ನ ಅಯೋಧ್ಯೆ ರೈಲು ನಿಲ್ದಾಣದ ಹೆಸರನ್ನು “ಅಯೋಧ್ಯಾ ಧಾಮ್” ಜಂಕ್ಷನ್ ಎಂದು ಬದಲಾಯಿಸಲಾಗಿದೆ.

ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ ಅವರು ದೇವಾಲಯವನ್ನು ಉದ್ಘಾಟಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ರೈಲ್ವೇ ಸ್ಟೇಶನ್‌ ನವೀಕರಣಗೊಳಿಸಲಾಗಿದ್ದು, ಈಗ ರೈಲ್ವೇ ಸ್ಟೇಶನ್‌ ಹೆಸರನ್ನೂ ಕೂಡ ಬದಲು ಮಾಡಲಾಗಿದೆ.

ಈ ಬಗ್ಗೆ ತಮ್ಮ ಅಧಿಕೃತ ಮೈಕ್ರೋಬ್ಲಾಗಿಂಗ್‌ ʼಎಕ್ಸ್‌ʼ ಖಾತೆಯ ಮೂಲಕ ಮಾಹಿತಿ ನೀಡಿದ ಬಿಜೆಪಿ ನಾಯಕ ಲಲ್ಲು ಸಿಂಗ್,  “ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ, ನವೀಕರಿಸದಲಾದ ಭವ್ಯವಾದ ಅಯೋಧ್ಯೆ ರೈಲು ನಿಲ್ದಾಣದ  ʼಅಯೋಧ್ಯೆ ಜಂಕ್ಷನ್‌ʼ ಹೆಸರನ್ನು ಸಾರ್ವಜನಿಕರ ನಿರೀಕ್ಷೆಯಂತೆ ʼಅಯೋಧ್ಯಾ ಧಾಮʼ ಎಂದು ಮರುನಾಮಕರಣ ಮಾಡಲಾಗಿದೆ” ಎಂದು ಹೇಳಿದ್ದರು.

ನಿಲ್ದಾಣವನ್ನು ಮರುನಾಮಕರಣ ಮಾಡಲು ಉತ್ತರ ಪ್ರದೇಶ ಸರ್ಕಾರವು ಹಂಚಿಕೊಂಡ ಪ್ರಸ್ತಾವನೆಯನ್ನು ಭಾರತೀಯ ರೈಲ್ವೇ ಒಪ್ಪಿಕೊಂಡಿದೆ. ಆದಾಗ್ಯೂ, ನಿಲ್ದಾಣದ ಕೋಡ್ ಒಂದೇ ಆಗಿರುತ್ತದೆ.

ನವೀಕರಣಗೊಂಡ ರೈಲ್ವೇ ನಿಲ್ದಾಣದ ವಿಶೇಷತೆಗಳೇನು :

ಅಯೋಧ್ಯಾ ಧಾಮ್ ರೈಲು ನಿಲ್ದಾಣವು ಹಲವು ವಿಶೇಷತೆಗಳಿಂದ ಕೂಡಿದೆ. ವಿಮಾನ ನಿಲ್ದಾಣಗಳಲ್ಲಿರುವ ಹಲವು ಸೌಲಭ್ಯಗಳನ್ನು ಇಲ್ಲಿ ಕಲ್ಪಿಸಲಾಗಿದೆ. ಕ್ಲಾಕ್‌ ರೂಮ್‌ಗಳು, ಫುಡ್ ಪ್ಲಾಜಾ, ವೇಟಿಂಗ್ ಹಾಲ್‌ಗಳು, ಮೆಟ್ಟಿಲುಗಳು, ಎಸ್ಕಲೇಟರ್‌ಗಳು, ಲಿಫ್ಟ್‌ಗಳು ಮತ್ತು ಶೌಚಾಲಯಗಳಂತಹ ಅಭಿವೃದ್ಧಿಪಡಿಸಿದ ನಿಲ್ದಾಣದಲ್ಲಿ ಕಂಡುಬರುವ ಗುಣಮಟ್ಟದ ಸೌಕರ್ಯಗಳ ಜೊತೆಗೆ, ನಿಲ್ದಾಣವು ಪ್ರಯಾಣಿಕರ ಸೌಲಭ್ಯಗಳ ಡೆಸ್ಕ್ ಮತ್ತು ಪ್ರವಾಸಿ ಮಾಹಿತಿ ಕೇಂದ್ರವನ್ನು ಒಳಗೊಂಡಿದೆ.

ಈ ಸೌಲಭ್ಯಗಳು ಪ್ರಯಾಣಿಕರಿಗೆ ಶ್ರೀರಾಮ ಮಂದಿರ ಸೇರಿದಂತೆ ಆ ಪ್ರದೇಶದಲ್ಲಿನ ಆಧ್ಯಾತ್ಮಿಕ ಮತ್ತು ಪ್ರವಾಸಿ ತಾಣಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಮತ್ತು ಸಮಗ್ರ ಮಾರ್ಗಗಳ ತೇಲ್ನೋಟವನ್ನು ಒದಗಿಸುತ್ತದೆ. ಹೆಚ್ಚುವರಿಯಾಗಿ, ಎಲ್ಲಾ ಮಹಡಿಗಳಲ್ಲಿ ಸುರಕ್ಷಿತ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!