spot_img
Wednesday, April 22, 2026
spot_img

ರಾಷ್ಟ್ರೀಯ ರೈತರ ದಿನಾಚರಣೆ: ಕೃಷಿ ಸಾಧಕರನ್ನು ಸನ್ಮಾನಿಸಿದ ಯುವ ಕೃಷಿಕ

ಸಿದ್ಧಾಪುರ: ರಾಷ್ಟ್ರೀಯ ರೈತರ ದಿನಾಚರಣೆಯಂದು ಹೊಸಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಗತಿಪರ ಕೃಷಿಕ ರಾಜೇಂದ್ರ ಬೆಚ್ಚಳ್ಳಿ ಇವರು ಕೃಷಿಯಲ್ಲಿ ಸಾಧನೆಗೈದವರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮ ನಡೆಯಿತು.

ವಿಶ್ರಾಂತ ಉಪನ್ಯಾಸಕ ಡಾ. ಶ್ರೀಕಾಂತ್ ರಾವ್ ಸಿದ್ಧಾಪುರ ಕಾರ್ಯಕ್ರಮ ಉದ್ಘಾಟಿಸಿ ಕೃಷಿ ಪ್ರಧಾನವಾದ ದೇಶ ನಮ್ಮದು, ರೈತ ಈ ದೇಶದ ಬೆನ್ನೆಲುಬು, ಕೃಷಿಯಲ್ಲಿ ಖುಷಿ ಕಂಡ ಅದೆಷ್ಟು ಕುಟುಂಬಗಳಿವೆ ಜೊತೆಗೆ ಆರೋಗ್ಯದ ದೃಷ್ಟಿಯಲ್ಲಿ ದೀರ್ಘಾಯುಷ್ಯ ಕಂಡ ಅದೆಷ್ಟು ಕೃಷಿಕರಿದ್ದಾರೆ ಕೃಷಿಕರಿಗೆ ಎಂದಿಗೂ ನಿವೃತ್ತಿ ಇಲ್ಲ ಉತ್ತಮ ಆರೋಗ್ಯ ಹಾಗೂ ಬದುಕಿಗೆ ಯುವ ಪೀಳಿಗೆ ಕೃಷಿಯುತ್ತ ಒಲವು ತೋರಿಸಬೇಕು ಎಂದರು.

ಸಾಹಿತಿ ಮುಸ್ತಾಕ್ ಹೆನ್ನಾಬೈಲ್ ಮಾತನಾಡಿ, ಪುರಾಣದಲ್ಲಿ ಪ್ರಕೃತಿ ಕೃಷಿ ಹಾಗೂ ಕೃಷಿಕ ಕುಟುಂಬದವರಿಗೆ ಒಂದು ರೀತಿಯ ಅನ್ಯೋನ್ಯತೆಯ ಸಂಬಂಧವಿದೆ ಕಾಲಘಟ್ಟದಲ್ಲಿ ಅವೆಲ್ಲವೂ ಬದಲಾಗಿದ್ದು ಮತ್ತೆ ಕೃಷಿ ಖುಷಿ ಕಾಯಕದಲ್ಲಿ ನಾವೆಲ್ಲರೂ ತೊಡಗಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಕಾಲೇಜು ಪ್ರಾಂಶುಪಾಲರಾದ ಗೋಪಾಲ್ ಭಟ್, ಕಾರ್ಯಕ್ರಮ ಪ್ರಾಯೋಜಕರಾದ ಪ್ರಗತಿಪರ ಕೃಷಿಕ ರಾಜೇಂದ್ರ ಬೆಚ್ಚಳ್ಳಿ ಉಪನ್ಯಾಸಕರಾದ ರಣಜಿತ್ ಕುಮಾರ್ ಶೆಟ್ಟಿ, ಎಜಾಸ್, ವೈಶಾಲಿ ಹೆಬ್ಬಾರ್, ಶೃತಿ ಶೆಟ್ಟಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಗಿರೀಶ್ ಪೂಜಾರಿ, ಪುಟ್ಟು, ಗುಲಾಬಿ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ರೈತ ದಿನಾಚರಣೆ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಜಾತಿಯ ಹಣ್ಣು ಹಾಗೂ ತರಕಾರಿ ಗಿಡಗಳ ಬೀಜ ಗುರುತಿಸುವಿಕೆ ಕಾರ್ಯಕ್ರಮ ನಡೆಯಿತು. ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!