spot_img
Thursday, April 23, 2026
spot_img

ಉದ್ಯೋಗ ಸೃಷ್ಟಿಗೆ ಬದಲಾಗಿ ನಿರುದ್ಯೋಗ ಸೃಷ್ಟಿ ಮಾಡುತ್ತಿರುವ ಕಾಂಗ್ರೆಸ್‌ …. : ಕಾಂಗ್ರೆಸ್ ಆಡಳಿತವನ್ನು ತಿವಿದ ಬಿಜೆಪಿ ಹೇಳಿದ್ದೇನು ?

ಜನಪ್ರತಿನಿಧಿ ವಾರ್ತೆ (ಬೆಂಗಳೂರು) :  ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ಅತಿಹೆಚ್ಚು ಪ್ರಮಾಣದಲ್ಲಿ ರೈತರು ಗುಳೆ ಹೋಗಿದ್ದಾರೆ. ನಿರುದ್ಯೋಗಿಗಳು ಮತ್ತು ಕೌಶಲ್ಯ ವಂಚಿತರಿಗೆ ಅತಿಹೆಚ್ಚು ಪ್ರಮಾಣದಲ್ಲಿ ಉದ್ಯೋಗ ದಯಪಾಲಿಸುವ ರಾಜ್ಯದ ಕೃಷಿ ವಲಯದಲ್ಲಿ ಕಾಂಗ್ರೆಸ್‌ ಆಡಳಿತಕ್ಕೆ ಬಂದ ನಂತರ ಶೇ.57ರಷ್ಟು ಉದ್ಯೋಗಗಳು ಕಡಿತವಾಗಿದೆ ಎಂದು ಆಡಳಿತಾರೂಢ ಕಾಂಗ್ರೆಸ್ ವಿರುದ್ದ ರಾಜ್ಯ ಬಿಜೆಪಿ ಹರಿಹಾಯ್ದಿದೆ.

ಕೇರಳದ ಗಡಿಗಳಲ್ಲಿ ಇರುವ ಕರ್ನಾಟಕದ ಅಷ್ಟೂ ಗ್ರಾಮಗಳ ಕಾರ್ಮಿಕರು ಉದ್ಯೋಗವನ್ನರಸಿ ಪ್ರತಿನಿತ್ಯ ಕೇರಳಕ್ಕೆ ಪ್ರಯಾಣ ಬೆಳೆಸುತ್ತಿದ್ದಾರೆ. ನಿತ್ಯವೂ ನಡೆಯುತ್ತಿರುವ ಈ ವಿದ್ಯಮಾನವನ್ನು ಫ್ರೀಡಂ ಪಾರ್ಕಿನಲ್ಲಿ ಕೂತವರು ಫ್ರೀಯಾದ ಮೇಲೆ ಒಂದು ಬಾರಿಯಾದರೂ ನೋಡಿ ಬರಲೇಬೇಕು.

ಉದ್ಯೋಗ ಸೃಷ್ಟಿಗೆ ಬದಲಾಗಿ ನಿರುದ್ಯೋಗ ಸೃಷ್ಟಿ ಮಾಡುತ್ತಿರುವ ಕಾಂಗ್ರೆಸ್‌ ಆಡಳಿತದಲ್ಲಿ ಕಾಂಗ್ರೆಸ್‌ ಪಕ್ಷವೇ ಪ್ರತಿಭಟಿಸುವ ಸ್ವ ವಿಡಂಬನೆ ಏಕೆ ಎಂಬುದಕ್ಕೆ #ATMSarkara ವೇ ಉತ್ತರ ನೀಡಬೇಕು.

ಆದರೆ ಕಾಂಗ್ರೆಸ್ ಮಾಡಿರುವುದೆಲ್ಲಾ ಇದಕ್ಕೆ ವಿರುದ್ಧವಾದ ಕಾರ್ಯಗಳು ಎಂಬುದಕ್ಕೆ ಕಳೆದ ಏಳು ತಿಂಗಳಲ್ಲೇ ಸಾಕಷ್ಟು ಸಾಕ್ಷಿ ಸಿಗುತ್ತದೆ. ಅತಿಹೆಚ್ಚು ಪ್ರಮಾಣದಲ್ಲಿ ಉದ್ಯೋಗಾವಕಾಶ ಹೆಚ್ಚಳಕ್ಕೆ ಅನುವು ಮಾಡುವ ಕೈಗಾರಿಕಾ ವಲಯಕ್ಕೆ ಕಾಂಗ್ರೆಸ್‌ ಸರ್ಕಾರ ಕೊಡಲಿ ಪೆಟ್ಟು ನೀಡಿದೆ.

ಲೋಡ್‌ ಶೆಡ್ಡಿಂಗ್‌ ಜತೆಗೆ ವಿದ್ಯುತ್‌ ದರ ಏರಿಕೆಯ ಕಾರಣ ಕರ್ನಾಟಕದ ಕೈಗಾರಿಕೆಗಳೆಲ್ಲಾ ಕಡಿಮೆ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಒಂದಷ್ಟು ಉದ್ಯಮಗಳು ವಲಸೆ ಹೋಗಿವೆ, ಹೊಸ ಹೂಡಿಕೆ ಬಂದು ಹೊಸ ಉದ್ಯೋಗ ಸೃಷ್ಟಿಯಂತೂ ಕರ್ನಾಟಕದ ಪಾಲಿಗೆ ಈಗ ಮರೀಚಿಕೆ.

ಬಿಜೆಪಿ ಆಡಳಿತದಲ್ಲಿ ಹೂಡಿಕೆ ಆಕರ್ಷಣೆಯಿಂದ ಹಿಡಿದು ಕುಶಲ ಉದ್ಯೋಗಿಗಳ ಲಭ್ಯತೆಯವರಗೆ ಎಲ್ಲಾ ವಲಯಗಳಲ್ಲೂ ಮುಂಚೂಣಿಯಲ್ಲಿದ್ದ ನಮ್ಮ ರಾಜ್ಯ, ಕಾಂಗ್ರೆಸ್‌ ಬಂದ ಮೇಲೆ ನಿರುದ್ಯೋಗಿಗಳನ್ನು ತಯಾರಿಸುವ ಕಾರ್ಖಾನೆಯಾಗಿದೆ ಎಂದು ಬಿಜೆಪಿ ಕಾಂಗ್ರೆಸ್‌ ಸರ್ಕಾರವನ್ನು ಟೀಕೆ ಮಾಡಿದೆ.  

ಇನ್ನು, ಸ್ವತಂತ್ರ ಭಾರತದಲ್ಲೇ ಇದುವರೆಗೆ ಅತಿಹೆಚ್ಚು ಪ್ರಮಾಣದಲ್ಲಿ ರಸ್ತೆ ಅಭಿವೃದ್ಧಿ, ದಾಖಲೆಯ ಪ್ರಮಾಣದಲ್ಲಿ ರೈಲ್ವೆ ವಿದ್ಯುದೀಕರಣ,  ಹೊಸ ಬಂದರು-ವಿಮಾನ ನಿಲ್ದಾಣಗಳ ನಿರ್ಮಾಣಗಳೆಲ್ಲ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಆಡಳಿತದಲ್ಲಿ ನಡೆದಿದೆ ಮತ್ತು ಇದು ಮುಂದಿನ ಎರಡು ದಶಕಗಳ ಕಾಲ ನಿರಂತರ ಪ್ರಕ್ರಿಯೆಗಿರಲಿದೆ. ಇವುಗಳಿಗೆಲ್ಲಾ ಎಷ್ಟು ಮಂದಿ ಉದ್ಯೋಗಿಗಳು ಬೇಕು ಎಂಬ ಪರಿಕಲ್ಪನೆಯೂ ಕಾಂಗ್ರೆಸ್‌ಗೆ ಇಲ್ಲ.

ಕಾಂಗ್ರೆಸ್‌ನ ಯುಪಿಎ ಸರ್ಕಾರದ ಕಾಲದಲ್ಲಿ ಇದ್ದುದಕ್ಕಿಂತ ದುಪ್ಪಟ್ಟಿಗಿಂತಲೂ ಅಧಿಕ, ಅಂದರೆ ವಾರ್ಷಿಕ ರೂ. 8400 ಕೋಟಿ ಡಾಲರ್‌ ಮೌಲ್ಯದ ಬಂಡವಾಳ ಹೂಡಿಕೆಯಾಗಿದೆ. ಮುದ್ರಾ ಯೋಜನೆಯೊಂದರಲ್ಲೇ ₹23 ಲಕ್ಷ ಕೋಟಿಯಷ್ಟು ಸಾಲ ನೇರವಾಗಿ ಹೂಡಿಕೆಯಾಗಿರುವುದು ಉದ್ಯೋಗ ಸೃಷ್ಟಿಯ ಮೇಲೆ.

ಗ್ರಾಮೀಣ ಮೂಲಸೌಕರ್ಯಕ್ಕಾಗಿ ಮೋದಿ ಸರ್ಕಾರ ವಿನಿಯೋಗಿಸುತ್ತಿರುವ ರೂ. 50,000 ಕೋಟಿ ಗ್ರಾಮೀಣ ಭಾರತದಲ್ಲಿ ಹೊಸ ಉದ್ಯೋಗ ಸೃಷ್ಟಿಸಿದೆ.

ದೇಶದ ಯುವ ಸಮುದಾಯ ಅತಿಹೆಚ್ಚು ಪ್ರಮಾಣದಲ್ಲಿ ಭಾರತೀಯ ಜನತಾ ಪಾರ್ಟಿಯನ್ನು ಬೆಂಬಲಿಸುತ್ತಿರುವುದು ಕಾಂಗ್ರೆಸ್‌ ಗೆ ಆತಂಕ ಮೂಡಿಸುತ್ತಿದೆ. ಇನ್ನೊಂದೆಡೆ ತನ್ನ ಕಾಲದಲ್ಲಿ ಅತಿದೊಡ್ಡ ಸಮಸ್ಯೆಯಾಗಿದ್ದ ನಿರುದ್ಯೋಗ ಈ ಕಾಲದಲ್ಲೂ ಜೀವಂತವಿದೆ ಎಂದು ನಂಬಿದೆ. ಹಾಗಾಗಿ ನಿರುದ್ಯೋಗದ ವಿಚಾರವಾಗಿ ಪ್ರತಿಭಟನೆ ಮಾಡುತ್ತಿದೆ.

53 ವರ್ಷಗಳಾದರೂ ಸರಿಯಾದ ಉದ್ಯೋಗ ಸಿಗದೆ, ಈಗ ಅಳೆದುಳಿದಿರುವ ಮೈತ್ರಿಕೂಟದ ಮುಖ್ಯಸ್ಥಿಕೆಯನ್ನೂ ವಹಿಸುವುದಕ್ಕೆ ಸಿಗದೆ ನಿರುದ್ಯೋಗಿಯಾಗಿರುವ ಅವರ ರಾಜಕುವರನ ಹಾಗೆಯೇ ದೇಶದಲ್ಲಿ ಎಲ್ಲರೂ ಕೆಲಸವಿಲ್ಲದೆ ಕೂತಿದ್ದಾರೆ ಎಂಬುದು ಕಾಂಗ್ರೆಸ್ಸಿಗರ ಭಾವನೆ.

ಕಾಂಗ್ರೆಸ್‌ ಹೇಳುವಂತೆ ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಅತಿಹೆಚ್ಚು ಪ್ರಮಾಣದಲ್ಲಿ ಇದ್ದಿದ್ದರೆ ಕಾಂಗ್ರೆಸ್‌ ಪಕ್ಷದಲ್ಲಿ ಈಗ ಕಾರ್ಯಕರ್ತರು ತುಂಬಿ ತುಳುಕಬೇಕಿತ್ತು, ಕಾಂಗ್ರೆಸ್ಸೇ ಅತಿದೊಡ್ಡ ಪಕ್ಷವಾಗಬೇಕಿತ್ತು. ಆದರೆ ತಮ್ಮ ತಮ್ಮ ಕೆಲಸಗಳಲ್ಲಿ ನಿರತರಾಗಿರುವ  ಜನ ಸ್ವತಃ ನಿರುದ್ಯೋಗಿಗಳನ್ನು ಬೆಂಬಲಿಸುವುದಿಲ್ಲವಾದ ಕಾರಣ ಕಾಂಗ್ರೆಸ್‌ಗೆ ಮೌಲ್ಯಯುತ ಕಾರ್ಯಕರ್ತರದ್ದೂ ಕೊರತೆಯಿದೆ ಎಂದು ಕಾಂಗ್ರೆಸ್‌ ಸರ್ಕಾರವನ್ನು ತಿವಿದಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!