spot_img
Wednesday, January 22, 2025
spot_img

ಮೋದಿ ಸರ್ವರಿಗೂ ಸೂರು ಎಂದಿದ್ದು ಕೇವಲ ಬಾಯಿಚಪಲದ ಮಾತುಗಳಷ್ಟೇ : ಕಾಂಗ್ರೇಸ್‌

ಜನಪ್ರತಿನಿಧಿ ವಾರ್ತೆ (ಬೆಂಗಳೂರು) : ಸರ್ವರಿಗೂ ಸೂರು ಅಭಿಯಾನ, ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ (ನಗರ) 1.80 ಲಕ್ಷ ಫಲಾನುಭವಿಗಳಿಗೆ ನಿಗದಿಪಡಿಸಲಾಗಿದ್ದು ವಂತಿಗೆಯನ್ನು ತಲಾ 3.50 ಲಕ್ಷ ರೂ. ಬದಲು ತಲಾ 1 ಲಕ್ಷ ರೂ. ಗೆ ತಗ್ಗಿಸುವ ಮೂಲಕ ಸರ್ಕಾರ ಮತ್ತೊಂದು ಗ್ಯಾರಂಟಿ ಘೋಷಣೆ ಮಾಡಿದೆ.
ಈ ಬಗ್ಗೆ ಕಾಂಗ್ರೆಸ್‌ ತನ್ನ ಸಾಮಾಜಿಕ ಜಾಲತಾಣ ʼಎಕ್ಸ್‌ʼ ನಲ್ಲಿ ಹಂಚಿಕೊಂಡಿದ್ದು, ಕೊಳೆಗೇರಿ ನಿವಾಸಿಗಳು ತಮ್ಮದೊಂದು ಕನಸಿನ ಮನೆ ನಿರ್ಮಿಸಿಕೊಳ್ಳಲು ಪಿಎಂ ಆವಾಸ್ ಯೋಜನೆಯಡಿಯಲ್ಲಿ 4.5 ಲಕ್ಷ ಪಾವತಿಸಬೇಕಿತ್ತು, ಈಗ ಫಲಾನುಭವಿಗಳ ಪಾಲಿನ ಮೊತ್ತದಲ್ಲಿ 3.5 ಲಕ್ಷವನ್ನು ರಾಜ್ಯ ಸರ್ಕಾರವೇ ಪಾವತಿಸಲಿದೆ ಎಂದು ಹೇಳಿದೆ.
ಫಲಾನುಭವಿಗಳು ಪಾವತಿಸಬೇಕಾದ ಮೊತ್ತವನ್ನು ಕೇವಲ 1 ಲಕ್ಷಕ್ಕೆ ಇಳಿಕೆಯಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಸರ್ವರಿಗೂ ಸೂರು ಎಂದಿದ್ದು ಕೇವಲ ಬಾಯಿಚಪಲದ ಮಾತುಗಳಷ್ಟೇ, ಅಸಲಿಗೆ ಸರ್ವರಿಗೂ ಸೂರಿನ ಕನಸನ್ನು ಸಾಕಾರಗೊಳಿಸುತ್ತಿರುವುದು ಕಾಂಗ್ರೆಸ್ ಸರ್ಕಾರ.

ಈ ಯೋಜನೆಗೆ 6,170 ಕೋಟಿ ಮೀಸಲಿಟ್ಟು, ಮೊದಲ ಹಂತದಲ್ಲಿ 500 ಕೋಟಿ ಬಿಡುಗಡೆ ಮಾಡಲಾಗಿದೆ.

ಸಚಿವ ಜಮೀರ್‌ ಖಾನ್ ಅವರ ನೇತೃತ್ವದಲ್ಲಿ ನಮ್ಮ ಸರ್ಕಾರ ಬಡವರ ಸೂರಿನ ಕನಸನ್ನು ನನಸು ಮಾಡುವ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ಬರೆದುಕೊಂಡಿದೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!