spot_img
Friday, April 24, 2026
spot_img

ದಿನ ಕಳೆದಂತೆ ಪ್ರಭುತ್ವವನ್ನು ದಿಕ್ಕರಿಸುವ ಪಾರಂಪರಿಕ ಶಕ್ತಿ ಗೌಣವಾಗುತ್ತಿದೆ : ಡಾ.ಪುರುಷೋತ್ತಮ ಬಿಳಿಮಲೆ

ಸಮುದಾಯ ಕರ್ನಾಟಕ 8ನೇ ಸಮ್ಮೇಳನ | ‘ಘನತೆಯ ಬದುಕು: ಸಾಂಸ್ಕೃತಿಕ ಮಧ್ಯಪ್ರವೇಶ’

ಜನಪ್ರತಿನಿಧಿ ವಾರ್ತೆ (ಕುಂದಾಪುರ) : ಪ್ರಭುತ್ವವನ್ನು ಪ್ರಶ್ನಿಸುವ ಶಕ್ತಿಯನ್ನು ನಾಶಮಾಡುವ ವ್ಯವಸ್ಥೆಯನ್ನು ಸೃಷ್ಟಿ ಮಾಡಲಾಗಿದೆ. ದಿನ ಕಳೆದಂತೆ ಪ್ರಭುತ್ವವನ್ನು ದಿಕ್ಕರಿಸುವ ಪಾರಂಪರಿಕ ಶಕ್ತಿ ಗೌಣವಾಗುತ್ತಿದೆ. ಭಾರತದ ಮೂಲ ಸಂಸ್ಕೃತಿಯನ್ನು ನಾಶ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಜೆ.ಎನ್.ಯು ನವದೆಹಲಿಯ ನಿವೃತ್ತ ಪ್ರಾಧ್ಯಾಪಕರಾದ ಡಾ.ಪುರುಷೋತ್ತಮ ಬಿಳಿಮಲೆ ಅವರು ಹೇಳಿದ್ದಾರೆ.  

ಅವರು, ಸಮುದಾಯ ಕರ್ನಾಟಕ 8ನೇ ಸಮ್ಮೇಳನ ಘನತೆಯ ಬದುಕು: ಸಾಂಸ್ಕೃತಿಕ ಮಧ್ಯಪ್ರವೇಶ ಕುಂದಾಪುರದ ಬಸ್ರೂರು ಮೂರ್‌ಕೈ ಸಮೀಪದ ಆಶೀರ್ವಾದ ಸಭಾಂಗಣದಲ್ಲಿ ನಡೆದ  ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ಸಂವಿಧಾನದ ಮೂಲ ತತ್ವದ ಮೂಲಕ ರಾಷ್ಟ್ರೀಯತೆ ಬಗ್ಗೆ ತಿಳಿದುಕೊಳ್ಳಬೇಕು ಎಂದು ಕಲಿಸಿಕೊಟ್ಟವರು ಡಾ. ಬಿ. ಆರ್‌ ಅಂಬೇಡ್ಕರ್.‌ ಇಂದಿನ ರಾಷ್ಟ್ರೀಯತರೆ ವಿಕೃತವಾಗಿದೆ. ನಮ್ಮ ರಾಷ್ಟ್ರೀಯತೆ ಎನ್ನುವುದು ಭಾರತೀಯ ಸಂಸ್ಕೃತಿಗಳಿಗೆ ಒಂದು ಸಂವಿಧಾನದ ಮೂಲಕ ವ್ಯಾಕೃಣ ಮಾಡಿಕೊಟ್ಟ ಡಾ. ಬಿ.ಆರ್‌ ಅಂಬೇಡ್ಕರ್‌ ಅವರ ತತ್ವ. ಸಂವಿಧಾನವನ್ನೇ ಹತ್ತಿಕ್ಕುವ ಮನಸ್ಥಿತಿ ದೇಶದಲ್ಲಿ ಇದೆ. ನಮ್ಮ ನೆಲದ ಘನತೆಯ ಬದುಕಿನ ಮೂಲ ಸಂಸ್ಕೃತಿಯ ಮರು ಸೃಷ್ಟಿ ಮಾಡುವ ವ್ಯವಸ್ಥಿತ ಹುನ್ನಾರ ನಡೆದಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ಧರ್ಮ ಇವತ್ತು ಅಪಭ್ರಂಶಗೊಂಡಷ್ಟು ಎಂದೂ ಆಗಿಲ್ಲ. ಶಿಕ್ಷಣ ವ್ಯವಸ್ಥೆ ನಮ್ಮ ಮಕ್ಕಳಿಗೆ ಸಹಿಷ್ಣುತೆ ಹಾಗೂ ಸೌಹಾರ್ಧತೆಯನ್ನು ಕಲಿಸಿಕೊಡುತ್ತದೆ ಎನ್ನುವುದಕ್ಕೆ ಯಾವುದೇ ಆಧಾರವಿಲ್ಲದಂತಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತ ಪಡಿಸಿದರು.

ಉದ್ಘಾಟನಾ ಅಧಿವೇಶನದ ಅಧ್ಯಕ್ಷತೆಯನ್ನು ಸಮುದಾಯ ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷರಾದ ಅಚ್ಯುತ ವಹಿಸಿದ್ದರು. ಸಮುದಾಯ ಕರ್ನಾಟಕ 8ನೇ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿರುವ ರಾಜಾರಾಂ ತಲ್ಲೂರು ಪ್ರಾಸ್ತಾವಿಕ ಮಾತನಾಡಿದರು. ಸಮನ್ವಯಕಾರರಾಗಿ ಸಮುದಾಯ ಕರ್ನಾಟಕ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್.ದೇವೇಂದ್ರ ಗೌಡ ಇದ್ದರು.

ವಿಶೆಷವಾಗಿ ಉದ್ಘಾಟನೆಯು ಯಕ್ಷಗಾನ ತಾಳಮದ್ದಳೆಯ ಮೂಲಕ ನಡೆಯಿತು. ರಾಮ ಧಾನ್ಯ ಚರಿತ್ರೆ ಆಖ್ಯಾನ ತಾಳಮದ್ದಲೆ ನಡೆಯಿತು. ಭಾಗವತಿಕೆಯಲ್ಲಿ ಚಿಂತನಾ ಮಾಳ್ಕೋಡು, ಮದ್ದಲೆ ಶಶಾಂಕ ಆಚಾರ್ಯ, ಅರ್ಥಧಾರಿಗಳಾಗಿ  ಜೆ.ಎನ್.ಯು ನವದೆಹಲಿಯ ನಿವೃತ್ತ ಪ್ರಾಧ್ಯಾಪಕರಾದ ಡಾ.ಪುರುಷೋತ್ತಮ ಬಿಳಿಮಲೆ ಅವರ ಪ್ರಸ್ತುತ ಪಡಿಸಲಾಗುವುದು., ಜಬ್ಬಾರ್ ಸಮೋ ಸಂಪಾಜೆ, ಸದಾಶಿವ ಆಳ್ವಾ ತಲಪಾಡಿ, ಸತೀಶ್‌ ಶೆಟ್ಟಿ ಮೂಡುಬಗೆ, ಮಾಧವಿ ಭಂಡಾರಿ ಕೆರೆಕೋಣ, ಮುಷ್ತಾಕ್ ಹೆನ್ನಾಬೈಲ್ ಭಾಗವಹಿಸಿದರು.

ಕರಾವಳಿಯ ಸಾಮಾಜಿಕ ಬದುಕು ದಿನ ಬೆಳಗಾದರೇ ಆತಂಕಪಡುವ ಹಾಗಾಗಿದೆ : ರಾಜಾರಾಂ ತಲ್ಲೂರು

ಕರಾವಳಿಯಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಕೈಗಾರಿಕಾ ಉದ್ಯಮಗಳು ತುಂಬಿ ಹೋಗಿವೆ. ಕರಾವಳಿಯ ಬ್ಯಾಂಕುಗಳು ದೇಶದ ಅಳಿವಿನಂಚಿನಲ್ಲಿರುವ ಬ್ಯಾಂಕುಗಳೊಂದಿಗೆ ವಿಲೀನಗೊಂಡದ್ದು ದೇಶ ಮಟ್ಟದಲ್ಲಿ ಸುದ್ದಿಯಾಗಿದ್ದನ್ನು ಈ ನಾಡು ಕಂಡಿದೆ. ನಾಡಿನೆಲ್ಲೆಡೆ ಹಿಂದಿ ಹೇರಿಕೆ ದೊಡ್ಡ ಮಟ್ಟದಲ್ಲಾಗುತ್ತಿದೆ. ನಮ್ಮ ನೆಲ ಜಲದ ವಿಚಾರದಲ್ಲಿ ಎಚ್ಚರಗೊಳ್ಳಬೇಕಾದ ಸ್ಥಿತಿ ಬಂದೊದಗಿದೆ. ನಮ್ಮ ಮೂಲ ನೆಲೆ ಬದುಕು ನಾಶಗೊಳ್ಳುವುದರ ಮೊದಲು ಪ್ರಶ್ನೆ ಮಾಡುವ ಮನೋಧೋರಣೆಯನ್ನು ಬೆಳೆಸಿಕೊಳ್ಳಬೇಕಿದೆ ಚಿಂತಕ ರಾಜಾರಾಂ ತಲ್ಲೂರು ಅಭಿಪ್ರಾಯ ಪಟ್ಟರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!