Sunday, September 8, 2024

ಡಿ.16-17ರಂದು ಕುಂದಾಪುರದಲ್ಲಿ ಸಮುದಾಯ 8ನೇ ರಾಜ್ಯ ಸಮ್ಮೇಳನ

ಕುಂದಾಪುರ: ಸಮುದಾಯ ಕರ್ನಾಟಕ 8ನೇ ಸಮ್ಮೇಳನ ‘ಘನತೆಯ ಬದುಕು: ಸಾಂಸ್ಕೃತಿಕ ಮಧ್ಯಪ್ರವೇಶ’ ಕುಂದಾಪುರದ ಬಸ್ರೂರು ಮೂರ್‌ಕೈ ಸಮೀಪದ ಆಶೀರ್ವಾದ ಸಭಾಂಗಣದಲ್ಲಿ ಡಿಸೆಂಬರ್ 16 ಮತ್ತು 17ರಂದು ನಡೆಯಲಿದೆ.

ಬೆಳಿಗ್ಗೆ 10-30ಕ್ಕೆ ಉದ್ಘಾಟನಾ ಅಧಿವೇಶನ ನಡೆಯಲಿದೆ. ಅಧ್ಯಕ್ಷತೆಯನ್ನು ಸಮುದಾಯ ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷರಾದ ಅಚ್ಯುತ ವಹಿಸಲಿದ್ದಾರೆ. ಉದ್ಘಾಟನೆಯು ಯಕ್ಷಗಾನ ತಾಳಮದ್ದಳೆಯ ಮೂಲಕ ನಡೆಯಲಿದೆ. ಜೆ.ಎನ್.ಯು ನವದೆಹಲಿಯ ನಿವೃತ್ತ ಪ್ರಾಧ್ಯಾಪಕರಾದ ಡಾ.ಪುರುಷೋತ್ತಮ ಬಿಳಿಮಲೆ ಅವರ ರಾಮ ಧಾನ್ಯ ಚರಿತ್ರೆ ಆಖ್ಯಾನ ಪ್ರಸ್ತುತ ಪಡಿಸಲಾಗುವುದು. ಭಾಗವತಿಕೆಯಲ್ಲಿ ಚಿಂತನಾ ಮಾಳ್ಕೋಡು, ಮದ್ದಲೆ ಶಶಾಂಕ ಆಚಾರ್ಯ, ಅರ್ಥಧಾರಿಗಳಾಗಿ ಜಬ್ಬಾರ್ ಸಮೋ ಸಂಪಾಜೆ, ಸದಾಶಿವ ಆಳ್ವಾ ತಲಪಾಡಿ, ಡಾ.ಜಗದೀಶ ಶೆಟ್ಟಿ, ಮಾಧವಿ ಭಂಡಾರಿ ಕೆರೆಕೋಣ, ಮುಷ್ತಾಕ್ ಹೆನ್ನಾಬೈಲ್ ಭಾಗವಹಿಸಲಿದ್ದಾರೆ.

ಸಮನ್ವಯಕಾರರಾಗಿ ಸಮುದಾಯ ಕರ್ನಾಟಕ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್.ದೇವೇಂದ್ರ ಗೌಡ ಭಾಗವಹಿಸಲಿದ್ದಾರೆ. ವಿಶೇಷ ಆಮಂತ್ರಿತರಾಗಿ ಡಾ.ಎನ್ ಗಾಯತ್ರಿ, ಮಂಜುಳಾ, ಶ್ಯಾಮಲಾ ಪೂಜಾರ, ಸುಕನ್ಯ, ವೇದಾ, ಯಮುನಾ ಗಾಂವಕಾರ ಭಾಗವಹಿಸಲಿದ್ದಾರೆ.

ಅಪರಾಹ್ನ 2 ಗಂಟೆಗೆ ಮೊದಲ ಅಧಿವೇಶನ ನಡೆಯಲಿದ್ದು ಸಮುದಾಯ ರಾಜ್ಯ ಉಪಾಧ್ಯಕ್ಷ ವಾಸುದೇವ ಉಚ್ಚಿಲ ಅಧ್ಯಕ್ಷತೆ ವಹಿಸಲಿದ್ದಾರೆ. ಲಿಂಗತ್ವ ಸಮಾನತೆಯ ಹೋರಾಟಗಾರರಾದ ಅಕೈ ಪದ್ಮಶಾಲಿ, ರೈತ ಮುಂದಾಳು ರವಿಕಿರಣ ಪುಣಚ, ಮಹಿಳಾ ಹೋರಾಟಗಾರರಾದ ಕೆ.ಎಸ್.ಲಕ್ಷ್ಮೀ ಆಧಿವಾಸಿ ಹಕ್ಕುಗಳ ಹೋರಾಟಗಾರರಾದ ಶ್ರೀಧರ ನಾಡ ವಿಷಯ ಮಂಡನೆ ಮಾಡಲಿದ್ದಾರೆ.

ಬಿ.ಐ ಈಳಿಗೇರ, ಉಪಾಧ್ಯಕ್ಷರು ಸಮನ್ವಯ, ಸಮುದಾಯ ಕರ್ನಾಟಕ ರಾಜ್ಯ ಸಮಿತಿ ಜೊತೆ ಕಾರ್ಯದರ್ಶಿ ವಿಮಲಾ ಕೆ.ಎಸ್ ಉಪಸ್ಥಿತರಿರಲಿದ್ದಾರೆ. ಬಳಿಕ ಜರ್ನಿ ತಂಡ ಮಂಗಳೂರು ಇವರಿಂದ ರಂಗ ಹಾಡುಗಳು ನಡೆಯಲಿದೆ.

ಸಂಜೆ 4.30ಕ್ಕೆ ಎರಡನೇ ಅಧಿವೇಶನ ನಡೆಯಲಿದ್ದು ಸಮುದಾಯ ಕರ್ನಾಟಕ ರಾಜ್ಯ ಸಮಿತಿ ಕೋಶಾಧಿಕಾರಿ ವಸಂತರಾಜ ಎನ್.ಕೆ ಅಧ್ಯಕ್ಷತೆ ವಹಿಸಲಿದ್ದಾರೆ. ಗಾಯಕರು ಹಾಗೂ ರಂಗಕಲಾವಿದೆ ಎಂ.ಡಿ ಪಲ್ಲವಿ, ರಂಗಭೂಮಿ ಕಲಾವಿದರು, ನಿರ್ದೇಶಕರಾದ ಮಂಗಳ ಎನ್., ಸಿನಿಮಾ ನಿರ್ದೇಶಕರಾದ ಮಂಸೋರೆ ವಿಷಯ ಮಂಡನೆ ಮಾಡಲಿದ್ದಾರೆ. ಟಿ.ಸುರೇಂದ್ರ ರಾವ್, ಉಪಾಧ್ಯಕ್ಷರು, ಶಶಿಧರ ಜೆ.ಸಿ ಜೊತೆ ಕಾರ್ಯದರ್ಶಿ ಸಮನ್ವಯ, ಸಮುದಾಯ ಕರ್ನಾಟಕ ರಾಜ್ಯ ಸಮಿತಿ ಜೊತೆ ಕಾರ್ಯದರ್ಶಿ ಉದಯ ಗಾಂವಕರ್ ಉಪಸ್ಥಿತರಿರಲಿದ್ದಾರೆ. ಸಂಜೆ 7 ಗಂಟೆಗೆ ಸಮುದಾಯ ಧಾರವಾಡ ತಂಡದವರಿಂದ ಕುಂ.ವೀರಭದ್ರಪ್ಪ ಅವರ ಕಥೆ, ವಾಸುದೇವ ಗಂಗೇರ ನಿರ್ದೇಶನದ ದೇವರ ಹೆಣ ನಾಟಕ ಪ್ರದರ್ಶನಗೊಳ್ಳಲಿದೆ.

ಡಿಸೆಂಬರ್ 17ರಂದು ಪೂರ್ವಾಹ್ನ 9.30ರಿಂದ ಪ್ರತಿನಿಧಿಗಳ ಸಮಾವೇಶ ನಡೆಯಲಿದೆ ಎಂದು ಸಮುದಾಯ ಕರ್ನಾಟಕ 8ನೇ ರಾಜ್ಯ ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷರಾದ ರಾಜಾರಾಂ ತಲ್ಲೂರು, ಕಾರ್ಯಾಧ್ಯಕ್ಷರಾದ ಉದಯ ಗಾಂವಕಾರ, ಪ್ರಧಾನ ಕಾರ್ಯದರ್ಶಿ ಡಾ.ಸದಾನಂದ ಬೈಂದೂರು, ಕೋಶಾಧಿಕಾರಿ ಬಾಲಕೃಷ್ಣ ಕೆ.ಎಂ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!