Sunday, September 8, 2024

ಕುಂದಾಪುರ ಕುಂದೇಶ್ವರ ಲಕ್ಷದೀಪೋತ್ಸವ ಸಂಪನ್ನ

ಕುಂದಾಪುರ: ಕುಂದಾಪುರದ ಕುಂದೇಶ್ವರದ ವಾರ್ಷಿಕ ಕಾರ್ತಿಕ ಲಕ್ಷದೀಪೋತ್ಸವ ಮಂಗಳವಾರ ಸಂಭ್ರಮದಿಂದ ಜರುಗಿತು.

ಭಾನುವಾರದಿಂದ ಮೊದಲ್ಗೊಂಡ ಧಾರ್ಮಿಕ ವಿಧಿವಿಧಾನಗಳು ವಿಜೃಂಭಣೆಯಿಂದ ನಡೆದವು. ಭಾನುವಾರದಿಂದ ದೇವಳದಲ್ಲಿ ಪುಣ್ಯಾಹ ವಾಚನ, ದೇವನಾಂದಿ, ದ್ವಾದಶ ನಾರಿಕೇಳ ಮಹಾ ಗಣಪತಿ ಹೋಮ, ಸಂಪೂರ್ಣ ನವಗ್ರಹ ಹೋಮ, ದುರ್ಗಾ ಹೋಮ ಸಹಿತ ಲೋಕಕಲ್ಯಾಣಾರ್ಥವಾಗಿ ಸದ್ಯೋಜಾತಾದಿ ಅಧಿವಾಸ ಯಾಗ, ಪೂರ್ಣಾಹುತಿ ಬ್ರಹ್ಮಕಲಶಾಭಿಷೇಕ, ಮಹಾಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು. ಬಳಿಕ ಸಂಜೆ ಸಾಲಿಗ್ರಾಮ ಮಕ್ಕಳ ಮಹಿಳಾ ಕೋಟ ಇವರಿಂದ ವೀರಶ ಸೇನಾ ಯಕ್ಷಗಾನ ಕಾರ್ಯಕ್ರಮ ನಡೆಯಿತು.

ಮಂಗಳವಾರ ಸೂರ್ಯೋದಯದಿಂದ ಸೂರ್ಯಾಸ್ತಮಾನದವರೆಗೆ ಕುಂದಾಪುರ ತಾಲೂಕಿನ ಭಜನಾ ಮಂಡಳಿಗಳ ಒಕ್ಕೂಟದಿಂದ ದೇವರ ನಾಮ ಸಂಕೀರ್ತನೆ ಮತ್ತು ಕುಣಿತ ಭಜನೆ ಕಾರ್ಯಕ್ರಮ ನಡೆಯಿತು.

ಕುಂದೇಶ್ವರ ದೇವರ ಸನ್ನಿಧಿಯಲ್ಲಿ ರಂಗಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗದ ಬಳಿಕ ಸಾವಿರಾರು ಭಕ್ತರ ಸಮ್ಮುಖದಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು. ಪುಷ್ಪಕ ರಥದಲ್ಲಿ ಶ್ರೀದೇವರ ಪುರ ಮೆರವಣಿಗೆ, ಕಟ್ಟೆ ಪೂಜೆ, ಕೆರೆದೀಪ ಇತ್ಯಾದಿ ಕಾರ್ಯಕ್ರಮಗಳು ಜರುಗಿದವು.

ದೇವರ ಪುಷ್ಪಕ ರಥೋತ್ಸವದುದ್ದಕ್ಕೂ ಜಾನಪದ ಮತ್ತು ಸಾಂಸ್ಕೃತಿಕ ವೈಭವ ಪ್ರದರ್ಶನಗಳು ನಡೆದವು. ಸಂಜೆ ೭ ರಿಂದ ನಿತ್ಯ ವಸಂತ ನಾಟ್ಯಾಲಯದ ಕಲಾವಿದರಿಂದ ನೃತ್ಯ ಸಿಂಚನ ಕಾರ್ಯಕ್ರಮ ನಡೆಯಿತು. ಸಾವಿರಾರು ಭಕ್ತರು ದೀಪೋತ್ಸವದಲ್ಲಿ ಪಾಲ್ಗೊಂಡರು. ನಗರದ್ಯಂತ ಯಕ್ಷಗಾನ, ನಾಟಕ, ರಸಮಂಜರಿ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮ ವಿವಿಧ ಸಂಘ ಸಂಸ್ಥೆಗಳ ಆಯೋಜನೆಯಲ್ಲಿ ಸಂಪನ್ನಗೊಂಡವು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಎಸ್.ಕೃಷ್ಣಾನಂದ ಚಾತ್ರ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸತೀಶ್ ಶೆಟ್ಟಿ, ವಿಶ್ವನಾಥ ಪೂಜಾರಿ, ನಾಗರಾಜ ರಾಯಪ್ಪನಮಠ, ಜಯಾನಂದ ಖಾರ್ವಿ, ಸತೀಶ್, ವೀಣಾ ಹೆಚ್., ಸವಿತಾ ಜಗದೀಶ ಹಾಗೂ ತಂತ್ರಿಗಳು, ಅರ್ಚಕರು, ಪದನಿಮಿತ್ತ ಅರ್ಚಕರು, ಸಿಬ್ಬಂದಿಗಳು ಹಾಗೂ ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!