Sunday, September 8, 2024

ರಾಜ್‌ – ಲೀಲಾ ನಮ್ಮ ಕಾಲದ ಜನಪ್ರಿಯ ಜೋಡಿ : ಲೀಲಾವತಿಯವರಿಗೆ ರಾಷ್ಟ್ರಮಟ್ಟದ ಅತ್ಯುನ್ನತ ಗೌರವ ಸಿಗಬೇಕಿತ್ತು : ಸಿಎಂ ಸಿದ್ದರಾಮಯ್ಯ

ಜನಪ್ರತಿನಿಧಿ ವಾರ್ತೆ (ಬೆಂಗಳೂರು) : ಲಿಲಾವತಿಯವರು ಅನಾರೋಗ್ಯದಿಂದಿದ್ದಾಗ ಹಾಸಿಗೆ ಹಿಡಿದಿದ್ದಾಗ್‌ ಸೋಲದೇವನಹಳ್ಳಿಯ ಅವರ ಮನೆಗೆ ತೆರಳಿ ಭೇಟಿ ಮಾಡಿದ್ದೆ. ವಿನೋದ್‌ ಅವರಲ್ಲಿ ತಾಯಿಯನ್ನು ಚೆನ್ನಾಗಿ ನೋಡಿಕೋ ಎಂದು ಹೇಳಿ ಬಂದಿದ್ದೆ. ತಾಯಿ-ಮಗನ ಬಾಂಧವ್ಯ ಅನ್ಯೋನ್ಯವಾಗಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಇಲ್ಲಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕೆ ಇರಿಸಲಾಗಿತ್ತಿ. ಅಂತ್ಯಸಂಸ್ಕಾರಕ್ಕೂ ಮುನ್ನಾ ಲೀಲಾವತಿಯವರ ಪಾರ್ಥೀವ ಶರೀರದ ದರ್ಶನ ಪಡೆದ ಸಿದ್ದರಾಮಯ್ಯ, ಅಂತ್ಯ ಸಂಸ್ಕಾರದ ವೇಳೆ ಸರ್ಕಾರಿ ಗೌರವವನ್ನು ನೀಡಲು ಆದೇಶಿಸಿದ್ದೇನೆ. ಕನ್ನಡ ಸಿನೆಮಾ ರಂಗ ಕಂಡ ಅಪರೂಪದ ನಟಿ. ದಕ್ಷಿಣ ಭಾರತದ ಎಲ್ಲಾ ಭಾಷೆಗಳ ಸಿನೆಮಾಗಳಲ್ಲಿ ನಟನೆ ಮಾಡಿದ ನೈಜ ಕಲಾವಿದೆ ಎಂದರು.

ರಾಜ್‌-ಲೀಲಾ ಜನಪ್ರಿಯ ಜೋಡಿ : ಲೀಲಾವತಿಯವರು ಯಾವುದೇ ಪೊಆತ್ರವಿದ್ದರೂ ಜೀವ ತುಂಬಿಸಿ ಅಭಿನಯಿಸುತ್ತಿದ್ದರು. ನಾಯಕಿ ಹಾಗೂ ಪೋಷಕ ಪಾತ್ರಗಳಲ್ಲಿ ಅವರ ನಟೆ ಸಹಜ ಸುಂದರ. ಸಾಮಾಜಿಕ, ಕೌಟುಂಬಿಕ, ಪೌರಾಣಿಕ ಚಿತ್ರಗಳ ಪಾತ್ರಗಳಲ್ಲಿ ಮನೋಜ್ಙವಾಗಿ ನಟನೆ ಮಾಡುತ್ತಿದ್ದರು. ಕಾಲೇಜು ದಿನಗಳಲ್ಲಿ ಅವರ ಸಿನೆಮಾಗಳನ್ನು ನಾನು ನೋಡುತ್ತಿದ್ದೆ. ನಮ್ಮ ಕಾಲದಲ್ಲಿ ರಾಜ್‌ ಕುಮಾರ್-ಲೀಲಾವತಿ ಜೋಡಿ ಜನಪ್ರಿಯ. ಅವರಿಬ್ಬರೂ ಅಭಿನಯಿಸಿದ ಎಲ್ಲಾ ಸಿನೆಮಾಗಳನ್ನು ನಾನು ನೋಡಿದ್ದೇನೆ. ಅವರಂತೆ ನಟಿಸುವುದಕ್ಕೆ ಎಲ್ಲರಿಗೂ ಬರುವುದಿಲ್ಲ. ಅದು ರಾಜ್‌ ಕುಮಾರ್‌ ಗೆ ಸಿದ್ದಿಸಿತ್ತು. ಲೀಲಾವತಿಯವರಿಗೂ ಒಲಿದಿತ್ತು ಎಂದು ರಾಜ್-ಲೀಲಾ ಜೋಡಿಯ ನಟನೆಯನ್ನು ಸಿಎಂ ಪ್ರಶಂಸಿಸಿದರು.

ಲೀಲಾವತಿಯವರು ದುಡಿದ ಹಣವನ್ನು ಬಚ್ಚಿಟ್ಟುಕೊಳ್ಳುತ್ತಿರಲಿಲ್ಲ. ಬಡಬಗ್ಗರಿಗೆ ದಾನ ಮಾಡುತ್ತಿದ್ದರು. ಜೀವರಾಶಿಗಳನ್ನು ಪ್ರೀತಿ ಮಾಡುತ್ತಿದ್ದರು. ರೈತಾಪಿ ಕೆಲಸಗಳನ್ನು ತಾವೇ ಮಾಡುತ್ತಿದ್ದರು. ಅವರಿಗೆ ರಾಷ್ಟ್ರಮಟ್ಟದ ಅತ್ಯುನ್ನತ ಪ್ರಶಸ್ತಿ ಸಿಗಬೇಕಾಗಿತ್ತು ಎಂದು ನನ್ನ ಭಾವನೆ ಎಂದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!