spot_img
Wednesday, January 22, 2025
spot_img

ʼಸ್ವಾಭಿಮಾನದ ನಲ್ಲೆʼಗೆ ಕಂಬನಿಗಳ ವಿದಾಯ : ಸೋಲದೇವನಹಳ್ಳಿ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿಸಿದ ಪುತ್ರ ವಿನೋದ್‌ ರಾಜ್‌

ಜನಪ್ರತಿನಿಧಿ ವಾರ್ತೆ (ಬೆಂಗಳೂರು) : ಕನ್ನಡ ಸಿನೆಮಾ ರಂಗದ ಅಭಿಜಾತ ಕಲಾವಿದೆ, ಬಹುಭಾಷಾ ನಟಿ ಲೀಲಅವತಿ ಅವರ ಅಂತ್ಯ ಸಂಸ್ಕಾರವು ಸಕಲ ಸರ್ಕಾರಿ ಗೌರವಗಳೊಂದಿಗೆ  ಅವರ ಸೋಲದೇವನಹಳ್ಳಿ ತೋಟದಲ್ಲಿ ನೆರವೇರಿತು.

ಮೂರು ಸುತ್ತು ಕುಶಾಲತೋಪು ಸಿಡಿಸಿ, ಪೊಲೀಸರು ಅಂತಿಮ ಗೌರವ ಸಲ್ಲಿಸಿದರು.ಪುತ್ರ, ನಟ ವಿನೋದ್‌ ರಾಜ್‌ ಅಂತಿಮ ವಿಧಿ ವಿಧಾನ ನೆರವೇರಿಸಿದರು.

ಕೆಲವು ದಿನಗಳಿಂದ ವಯೋಸಹಜ ಖಾಯಿಲೆಯತಿಂದ ಬಳಲುತ್ತಿದ್ದ ನಟಿ ಲೀಲಾವತಿ ಅವರು ನಿನ್ನೆ(ಶುಕ್ರವಾರ) ಇಹಲೋಕವನ್ನು ತ್ಯಜಿಸಿದ್ದರು. ಅವರಿಗೆ 85 ವರ್ಷವಾಗಿತ್ತು.

ಅಂತ್ಯ ಸಂಸ್ಕಾರಕ್ಕೂ ಮುನ್ನ ಇಲ್ಲಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಚಿತ್ರರಂಗದ ನಟ, ನಟಿಯರು, ಗಣ್ಯರು, ರಾಜಕೀಯ ನಾಯಕರು, ಅಭಿಮಾನಿಗಳು ಲೀಲಾವತಿಯವರಿಗೆ ಅಂತಿಮ ನಮನ ಸಲ್ಲಿಸಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!