Sunday, September 8, 2024

ಕುಂದಾಪುರಕ್ಕೆ1, ಬೈಂದೂರಿಗೆ 2: ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ರಚನೆ

ಕುಂದಾಪುರ: ರಾಜ್ಯ ಸರ್ಕಾರ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣದ ಬಗ್ಗೆ ಸಮಿತಿ ರಚನೆಯಾಗಿದೆ. ಕುಂದಾಪುರ ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಸಮಿತಿಗಳ ರಚನೆಯಾಗಿದೆ. ವಿಶೇಷವೆಂದರೆ ಈ ಬಾರಿ ಕುಂದಾಪುರ ಕ್ಷೇತ್ರಕ್ಕೆ ಒಂದು, ಬೈಂದೂರು ಕ್ಷೇತ್ರಕ್ಕೆ ಎರಡು ಸಮಿತಿ ರಚನೆಯಾಗಿದೆ. ಕ್ಷೇತ್ರದ ಶಾಸಕರುಗಳು ಹಾಗೂ ಬೈಂದೂರು ಮಾಜಿ ಶಾಸಕರನ್ನು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿ ಅದಿಸೂಚನೆ ನೀಡಲಾಗಿದೆ.

ಇತ್ತೀಚೆಗಿನ ವರ್ಷಗಳಲ್ಲಿ ಅಕ್ರಮ ಸಕ್ರಮ ಸಮಿತಿಗಳ ಬಗ್ಗೆ ಸರ್ಕಾರ ಮೃದು ಧೋರಣೆ ಹೊಂದಿತ್ತು. ಈ ಹಿಂದಿನ ಅವಧಿಯಲ್ಲಿ ಕೊನೆಯ ಹಂತದಲ್ಲಿ ಸಮಿತಿ ರಚನೆಯಾಗಿತ್ತು. ಆದರೆ ಸಮಿತಿ ಸಭೆಗಳು ನಿರೀಕ್ಷಿತ ಮಟ್ಟದಲ್ಲಿ ನಡೆದಿರಲಿಲ್ಲ. ಹಾಗಾಗಿ ಹಲವಾರು ವರ್ಷಗಳಿಂದ ಸರ್ಕಾರಿ, ಕಂದಾಯ ಭೂಮಿಗಳಲ್ಲಿ ಕೃಷಿ ಮಾಡಿಕೊಂಡು ಬಂದ ಸಾಗುವಳಿದಾರರು ಅವಕಾಶದಿಂದ ವಂಚಿತರಾಗಿದ್ದರು. ಈ ಬಾರಿ ಸರ್ಕಾರ ವಿಶೇಷ ಆಸಕ್ತಿ ವಹಿಸಿ ಕಂದಾಯ ಇಲಾಖೆಯ ಮೂಲಕ ಸಮಿತಿ ರಚನೆ ಮಾಡಿದ್ದು ಈಗಾಗಲೇ ಆದೇಶ ಹೊರಡಿಸಿದೆ.

ಕುಂದಾಪುರ ವಿಧಾನಸಭಾ ಕ್ಷೇತ್ರದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಅಧ್ಯಕ್ಷರಾಗಿ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿ ಅವರನ್ನು ನೇಮಕ ಮಾಡಲಾಗಿದೆ. ಸದಸ್ಯರನ್ನಾಗಿ ಕೆ.ಸದಾನಂದ ಶೆಟ್ಟಿ ಕೆದೂರು, ರಾಜೇಶ ಕಾರ್ಕಡ, ಜಾನಕಿ ಬಿಲ್ಲವ ಹಳುವಳ್ಳಿ ಕೋಟೇಶ್ವರ ಅವರನ್ನು ನೇಮಿಸಲಾಗಿದೆ. ಕಾರ್ಯದರ್ಶಿಯಾಗಿ ಸಂಬಂಧಪಟ್ಟ ತಹಶೀಲ್ದಾರರು ಇರುತ್ತಾರೆ.

ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎರಡು ಸಮಿತಿಗಳ ರಚನೆ ಮಾಡಲಾಗಿದ್ದು ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಅವರು ಒಂದು ಸಮಿತಿಯ ಅಧ್ಯಕ್ಷರಾಗಿದ್ದಾರೆ. ಸದಸ್ಯರಾಗಿ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಅನಂತ ಮೊವಾಡಿ, ಸಾವಿತ್ರಿ ಅಳ್ವೆಗದ್ದೆ ಹಾಗೂ ಕಾರ್ಯದರ್ಶಿಯಾಗಿ ಕಾರ್ಯದರ್ಶಿಯಾಗಿ ಸಂಬಂಧಪಟ್ಟ ತಹಶೀಲ್ದಾರರು ಇರುತ್ತಾರೆ.

ಬೈಂದೂರು ಕ್ಷೇತ್ರದ ಇನ್ನೊಂದು ಸಮಿತಿಯ ಅಧ್ಯಕ್ಷರಾಗಿ ಮಾಜಿ ಶಾಸಕರಾದ ಕೆ.ಗೋಪಾಲ ಪೂಜಾರಿ ಅವರನ್ನು ನೇಮಕ ಮಾಡಲಾಗಿದೆ. ಸಮಿತಿ ಸದಸ್ಯರನ್ನಾಗಿ ಶ್ರೀನಿವಾಸ ಸೌಡ, ಹೇಮಾವತಿ ಪೂಜಾರಿ ಹಳ್ಳಿಹೊಳೆ, ದಿನೇಶ ಹಳ್ಳಿಹೊಳೆ ಅವರನ್ನು ನೇಮಿಸಲಾಗಿದೆ. ಕಾರ್ಯದರ್ಶಿಯಾಗಿ ಸಂಬಂಧಪಟ್ಟ ತಹಶೀಲ್ದಾರರು ಇರುತ್ತಾರೆ.

ಸಕ್ರಮ ಸಕ್ರಮ ಸಮಿತಿ ರಚನೆಯಾಗುತ್ತಿದ್ದಂತೆ ಸಂಬಂಧಪಟ್ಟ ಫಲಾನುಭವಿಗಳಿಗೆ ಆಶಾಕಿರಣ ಮೂಡಿದಂತಾಗಿದೆ. ಹಿಂದಿನ ಫೈಲ್‌ಗಳ ಜೊತೆಗೆ ಫಾರಂ ಸಂಖ್ಯೆ ೫೭ನಲ್ಲಿ ಸ್ವೀಕರಿಸಲಾದ ಅರ್ಜಿಗಳಿಗೂ ಒಂದು ಪರಿಹಾರ ನೀಡುವ ಕೆಲಸ ಆಗಬೇಕಾಗಿದೆ. ಬಾಕಿ ಇರುವ ಅರ್ಜಿಗಳು ಹೆಚ್ಚಿನವು ಡೀಮ್ಡ್ ಇತ್ಯಾದಿ ತಾಂತ್ರಿಕ ಸಮಸ್ಯೆಯಿಂದ ಮಂಜೂರಾತಿ ಆಗದೇ ಇರುವಂತಹವು. ಗೋಮಾಳ, ಕಾಯ್ದಿರಿಸಿದ ಜಮೀನು ಇತ್ಯಾದಿ ಜಮೀನುಗಳಲ್ಲಿ ತಮಗರಿವಿಲ್ಲದೇ ಅತಿಕ್ರಮಣ ಮಾಡಿಕೊಂಡು ಅದನ್ನು ಅಭಿವೃದ್ದಿ ಪಡಿಸಿಕೊಂಡು ಬಂದ ರೈತರು ಇದ್ದಾರೆ. ಇಂತಹ ಅಹವಾಲುಗಳನ್ನು ವಿಶೇಷ ಆದ್ಯತೆಯಲ್ಲಿ ವಿಲೇ ಮಾಡುವ ಬಗ್ಗೆ ಸರ್ಕಾರ ಯೋಚನೆ ಮಾಡಬೇಕಾಗಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!