Sunday, September 8, 2024

ದೇಶದಲ್ಲಿ ಗಂಟೆಗೆ 19 ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ! : ಎನ್‌ಸಿಆರ್‌ಬಿ ವರದಿ

ಜನಪ್ರತಿನಿಧಿ ವಾರ್ತೆ (ನವ ದೆಹಲಿ) : ದೇಶದಲ್ಲಿ ದಿನದಿಂದ ದಿನಕ್ಕೆ ಆತ್ಮಹತ್ಯಾ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ನಡುವೆ ಎನ್‌ಸಿಆರ್‌ಬಿ (ನ್ಯಾಷನಲ್‌ ಕ್ರೈಮ್‌ ರೆಕಾರ್ಡ್‌ ಬ್ಯೂರೋ) ಒಂದು ಆಘಾತಕಾರಿ ವರದಿಯನ್ನು ಬಿಡುಗಡೆಗೊಳಿಸಿದೆ.

ಎನ್‌ಸಿಆರ್‌ಬಿ ನೀಡಿರುವ ವರದಿಯ ಪ್ರಕಾರ ಕಳೆದ ವರ್ಷ(2022) ಒಂದರಲ್ಲಿ ದೇಶದಲ್ಲಿ ಬರೋಬ್ಬರಿ 1,70,924 ಮಂದಿ ಬೇರೆ ಬೇರೆ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದೆ. ಮಾತ್ರವಲ್ಲದೇ, ಪ್ರತಿ ಗಂಟೆಗೆ ಸರಾಸರಿ‌ 19 ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕೂಡ ತಿಳಿಸಿದೆ.

2022ರಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಪೈಕಿ ಶೇ. 31.7ರಷ್ಟು ಮಂದಿ ಕೌಟುಂಬಿಕ ಸಮಸ್ಯೆಗಳಿಗೆ ಮನನೊಂದು ಆತ್ಮಹತ್ಯೆ ಮಾಡಿಕೊಂಡರೇ, ಶೇ. 18.4ರಷ್ಟು ಮಂದಿ ಅನಾರೋಗ್ಯದ ಕಾರಣದಿಂದ, ಶೇ. 6.8ರಷ್ಟು ಮಂದಿ ಮಾದಕ ವ್ಯಸನ, ಶೇ. 4.8 ರಷ್ಟು ಮಂದಿ ವೈವಾಹಿಕ ಸಂಬಂಧ, ಶೇ. 4.5 ರಷ್ಟು ಮಂದಿ ಪ್ರೇಮ ಸಂಬಂಧ, ಶೇ. 4.1ರಷ್ಟು ಮಂದಿ ಸಾಲ ಅಥವಾ ಆರ್ಥಿಕ ಸಮಸ್ಯೆ ಹಾಗೂ ಶೇ. 1.9 ರಷ್ಟು ಮಂದಿ ನಿರುದ್ಯೋಗ ಸಮಸ್ಯೆಗೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎನ್‌ಸಿಆರ್‌ಬಿ  ತನ್ನ ವರದಿಯಲ್ಲಿ ಮಾಹಿತಿ ನೀಡಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!