Sunday, September 8, 2024

ಹಟ್ಟಿ‌ಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಸಂಭ್ರಮದ ತುಳಸಿ ಪೂಜೆ

kundapura: ಭಾರತೀಯ ಸಂಸ್ಕೃತಿಯಲ್ಲಿ ಪ್ರಕೃತಿಯ ಆರಾಧನೆ ಅತ್ಯಂತ ಪ್ರಾಚೀನ ಹಾಗೂ ಅನುಸರಣೀಯವಾಗಿವೆ. ದಿನಾಂಕ 24-11-2023 ರಂದು ಸಂಜೆ ಉತ್ಥಾನ ದ್ವಾದಶಿಯ ಪರ್ವಸಮಯದಲ್ಲಿ ಹಟ್ಟಿ‌ಅಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ತುಳಸಿಪೂಜೆಯನ್ನು ಸಡಗರದಿಂದ ಆಚರಿಸಲಾಯಿತು.

ಈ ಸಮಯದಲ್ಲಿ ಶಾಲೆಯ ವಿದ್ಯಾರ್ಥಿಗಳು ಏಕಕಂಠದಿಂದ ವಿಷ್ಣುಸಹಸ್ರನಾಮಶ್ಲೋಕಗಳನ್ನು ಪಠಿಸಿದರು. ಅನಂತರ ವಸತಿ ಶಾಲೆಯ ವಿದ್ಯಾರ್ಥಿಗಳು ದೀಪಗಳನ್ನು ಬೆಳಗಿಸಿ, ತುಳಸಿ ಮತ್ತು ಕಾರ್ತಿಕ ದಾಮೋದರರನ್ನು ಭಜನೆಗಳ ಮೂಲಕ ಆರಾಧಿಸಿದರು. ಶ್ರೀನಿವಾಸ ಶೇಟ್ ಕುಂದಾಪುರ ತಮ್ಮ ಸಿರಿಕಂಠದಿಂದ ಭಜನೆಯ ಮೂಲಕ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರೆ ಅಧ್ಯಾಪಕ ರಾಮಕೃಷ್ಣ ಉಡುಪರು ತುಳಸಿಪೂಜೆಯನ್ನು ನೆರವೇರಿಸಿ, ಅದರ ಮಹತ್ವವನ್ನು ತಿಳಿಸಿದರು. ಅನಂತರ ಸಿಡಿಮದ್ದುಗಳ ಪ್ರದರ್ಶನದ ಮೂಲಕ ವಿದ್ಯಾರ್ಥಿಗಳ ಮನಸ್ಸನ್ನು ರಂಜಿಸಲಾಯಿತು.

ಈ ಸಮಯದಲ್ಲಿ ಶ್ರೀ ಸಿದ್ಧಿ ಪ್ರತಿಷ್ಠಾನ ಹಟ್ಟಿ‌ಅಂಗಡಿಯ ಕಾರ್ಯದರ್ಶಿಗಳೂ, ಶಾಲೆಯ ಪ್ರಾಂಶುಪಾಲರೂ ಆದ ಶರಣ ಕುಮಾರ, ಆಡಳಿತಾಧಿಕಾರಿ ವೀಣಾರಶ್ಮಿ ಎಮ್, ಉಪಪ್ರಾಂಶುಪಾಲರಾದ ರಾಮ ದೇವಾಡಿಗ, ಶಿಕ್ಷಕ- ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!