Sunday, September 8, 2024

ಹಿಮ್ಮೇಳ-ಮುಮ್ಮೇಳದಲ್ಲಿ ಮಿಂಚಿದ 3ನೇ ತರಗತಿ ವಿದ್ಯಾರ್ಥಿ ಅಗಸ್ತ್ಯ ಗಣೇಶ ಗುನಗ

ಕುಂದಾಪುರ: (ಜನಪ್ರತಿನಿಧಿ ವಾರ್ತೆ) ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ ಕುಂದಾಪುರ ಘಟಕ ಇದರ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆದ ಯಕ್ಷಗಾನ ಕಾರ್ಯಕ್ರಮ ಪೌರಾಣಿಕ ಪ್ರಸಂಗ “ಅಮರ ಪಾರ್ಥಿ” ಕುಂದಾಪುರದ ಕಲಾಮಂದಿರದಲ್ಲಿ ಹವ್ಯಾಸಿ ಕಲಾವಿದರಿಂದ ನಡೆದ ಯಕ್ಷಗಾನ ಜನಮನ ಸೆಳೆದು ಅತ್ಯುತ್ತಮ ಪ್ರದರ್ಶನವಾಗಿ ಕಲಾಪ್ರೇಮಿಗಳ ಮೆಚ್ಚುಗೆ ಗಳಿಸಿದೆ.

ಈ ಪ್ರದರ್ಶನದಲ್ಲಿ ಕೋಡಿ ಶ್ರೀರಾಮನಗರದಲ್ಲಿರುವ ಶ್ರೀ ರಾಮ ವಿದ್ಯಾಕೇಂದ್ರದಲ್ಲಿ 3ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿ ಕುಮಾರ ಅಗಸ್ತ್ಯ ಗಣೇಶ ಗುನಗ ಚಂಡೆ ಹಾಗೂ ಹೆಜ್ಜೆ ಹಾಕುವುದರ ಮೂಲಕ ಎಲ್ಲರ ಮನಸ್ಸನ್ನು ಗೆದ್ದಿದ್ದಾನೆ. ಚಂಡೆ ವಾದಕನಾಗಿ ಕಾಣಿಸಿಕೊಂಡ ಈ ಪುಟ್ಟ ಪ್ರತಿಭೆ, ನಂತರ ಗೆಜ್ಜೆ ಕಟ್ಟಿ ರಂಗದಲ್ಲಿ ಚುರುಕಿನ ಹೆಜ್ಜೆ ಹಾಕುವ ಮೂಲಕ ಅಚ್ಚರಿ ಮೂಡಿಸಿದ್ದಾನೆ. ಈತ ಈ ಹಿಂದೆಯೂ ಕೂಡಾ ಅನೇಕ ಪ್ರದರ್ಶನಗಳಲ್ಲಿ ಎರಡು ವಿಭಾಗಗಳಲ್ಲೂ ಗಮನ ಸಳೆದಿದ್ದಾನೆ.

ಅಗಸ್ತ್ಯ ಗಣೇಶ ಗುನಗ ಯಕ್ಷಗುರು ಪ್ರಸಾದ ಕುಮಾರ ಮೊಗೇಬೆಟ್ಟು ಅವರ ಗುರುತನದ ಶ್ರೀ ಸ್ವರ್ಣನೂಪುರ ಯಕ್ಷಗಾನ ಮಂಡಳಿಯ ವಿದ್ಯಾರ್ಥಿ ಆಗಿದ್ದಾನೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!