Sunday, September 8, 2024

ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ: ಡಿ. 3 ರಂದು 35 ನೇ ವಾರ್ಷಿಕ ಮಹಾಸಭೆ

ಮುಂಬಯಿ: ಸಮಾಜ ಬಾಂಧವರ ಶ್ರೇಯೋಭಿವೃದ್ಧಿಗಾಗಿ ಸದಾ ಶ್ರಮಿಸುತ್ತಿರುವ ಬಿಲ್ಲವ ಸೇವಾ ಸಂಘ ಕುಂದಾಪುರ (ರಿ) ಮುಂಬಯಿ ಇದರ ಸರ್ವ ಸದಸ್ಯರ 35ನೇ ವರ್ಷದ ವಾರ್ಷಿಕ ಮಹಾಸಭೆಯು ಡಿಸೆಂಬರ್ 3 ರವಿವಾರದಂದು ಅಪರಾಹ್ನ 3-30 ಕ್ಕೆ ಸರಿಯಾಗಿ ಸಂಘದ ನೂತನ ಕಾರ್ಯಾಲಯ 9 ಮಾನಸಿ ಪ್ರಥಮ ಮಹಡಿ, ಮುಕುಂದ ನಾಥು ಪಥ್, ಗಾಂವ್ದೇವಿ ಮೈದಾನದ ಸಮೀಪ, ನೌಪಾಡಾ, ಥಾಣೆ (ಪಶ್ಚಿಮ) ಇಲ್ಲಿ ಸಂಘದ ಅಧ್ಯಕ್ಷರಾದ ಸೂರ್ಯ ಎಸ್. ಪೂಜಾರಿಯವರ ಅಧ್ಯಕ್ಷತೆಯಲ್ಲಿ ಜರಗಲಿದೆ.

ಅಂದು ಗತ ಮಹಾಸಭೆಯ ವರದಿ ವಾಚನ ಮತ್ತು ಅಂಗೀಕಾರ ಹಾಗೂ ಆಡಳಿತ ಮಂಡಳಿ ಒಪ್ಪಿಸುವ ೨೦೨೨-೨೩ರ ಅವಧಿಯ ವಾರ್ಷಿಕ ವರದಿ ಮತ್ತು ಲೆಕ್ಕ ಪರಿಶೋಧಕರಿಂದ ಪರಿಶೀಲಿಸಲ್ಪಟ್ಟ ಲೆಕ್ಕ ಪತ್ರಗಳ ಅಂಗೀಕರಿಸುವುದಲ್ಲದೆ ಸದಸ್ಯರ ಸಲಹೆ ಸೂಚನೆ ಸಭಾಧ್ಯಕ್ಷರ ಭಾಷಣ ಸೇರಿದಂತೆ ಮಹಾಸಭೆಯ ಕಾರ್ಯಕಲಾಪಗಳು ಜರಗಲಿವೆ ಎಂದು ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ ಎನ್. ಪೂಜಾರಿ ತಿಳಿಸಿದ್ದಾರೆ.

ಮುಂಬಯಿ ಮಹಾನಗರ ಮತ್ತು ಉಪನಗರಗಳ ಶಾಲಾ-ಕಾಲೇಜುಗಳಲ್ಲಿ ಅಥವಾ ಯಾವುದೇ ವಿಶ್ವ ವಿದ್ಯಾಲಯಗಳಲ್ಲಿ ೨೦೨೨-೨೦೨೩ನೇ ಶೈಕ್ಷಣಿಕ ವರ್ಷಾಂತಿಕ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪರಸ್ಕಾರ ಮತ್ತು ಅಸಹಾಯಕ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡುವ ನಿಟ್ಟಿನಲ್ಲಿ ಅರ್ಜಿ ಅಹ್ವಾನಿಸಲಾಗಿದ್ದು ಮತ್ತು ಸಂಘದ ವಾರ್ಷಿಕೋತ್ಸವದಂದು ಸದಸ್ಯರು ಹಾಗೂ ಸದಸ್ಯರ ಮಕ್ಕಳಿಗಾಗಿ ಗಾನ-ನೃತ್ಯ ವೈಭವದ ಸಾಂಸ್ಕೃತಿಕ ಉತ್ಸವ ಹಮ್ಮಿಕೊಂಡಿದ್ದು ಅದಕ್ಕಾಗಿ ಅರ್ಹ ವಿದ್ಯಾರ್ಥಿಗಳು ಪ್ರತಿಭಾ ಪರಸ್ಕಾರ ಮತ್ತು ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಸಲ್ಲಿಸಲು ಹಾಗೂ ಗಾನ-ನೃತ್ಯ ವೈಭವದಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಲು ಆಸಕ್ತಿ ಇರುವ ಪ್ರತಿಭಾವಂತರು ಹೆಸರು ನೋಂದಾಯಿಸಲು ಡಿಸೆಂಬರ್ 3 ಅಂತಿಮ ದಿನವಾಗಿದ್ದು ಆಮೇಲೆ ಬಂದ ಅರ್ಜಿ ಮತ್ತು ಹೆಸರನ್ನು ಸ್ವೀಕರಿಸಲಾಗುವುದಿಲ್ಲ. ಇದು ಕೇವಲ ಸಂಘದ ಸದಸ್ಯರು ಮತ್ತು ಸದಸ್ಯರ ಮಕ್ಕಳಿಗೆ ಸೀಮಿತವಾಗಿರುತ್ತದೆ ಈ ಕುರಿತು ವಿವರವಾದ ಮಾಹಿತಿ ಒಳಗೊಂಡ ಸಂಘದ ವಾರ್ಷಿಕ ವರದಿಯನ್ನು ಸದಸ್ಯರಿಗೆ ಈಗಾಗಲೇ ಅಂಚೆಯ ಮುಖಾಂತರ ಕಳುಹಿಸಲಾಗಿದ್ದು ವರದಿಯ ಪ್ರತಿ ಸಿಗದೆ ಇರುವ ಸದಸ್ಯರು ಮತ್ತು ವಿಳಾಸ ಬದಲಾಯಿಸಿದ ಸದಸ್ಯರು ಸಂಘದ ಆಡಳಿತ ಮಂಡಳಿಯನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದೆಂದು ಅಧ್ಯಕ್ಷರಾದ ಸೂರ್ಯ ಎಸ್. ಪೂಜಾರಿ ಮತ್ತು ಕೋಶಾಧಿಕಾರಿ ರಾಜಶ್ರೀ ಪಿ. ಸಾಲ್ಯಾನ್ ತಿಳಿಸಿದ್ದಾರೆ.

ಸದಸ್ಯರೆಲ್ಲರೂ ಸಕಾಲದಲ್ಲಿ ಆಗಮಿಸಿ ಮಹಾಸಭೆಯಲ್ಲಿ ಉಪಸ್ಥಿತರಿದ್ದು ಸೂಕ್ತ ಸಲಹೆ ಸೂಚನೆಗಳನ್ನು ನೀಡುವುದರೊಂದಿಗೆ ಮಹಾಸಭೆಯನ್ನು ಯಶಸ್ವಿಗೊಳಿಸಬೇಕೆಂದು ಸಂಘದ ಗೌರವಾಧ್ಯಕ್ಷರಾದ ಸುರೇಶ ಎಸ್. ಪೂಜಾರಿ, ಅಧ್ಯಕ್ಷರಾದ ಸೂರ್ಯ ಎಸ್. ಪೂಜಾರಿ, ಉಪಾಧ್ಯಕ್ಷರುಗಳಾದ ನರಸಿಂಹ ಎಂ. ಬಿಲ್ಲವ, ಆನಂದ ಕೆ. ಪೂಜಾರಿ ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ ಎನ್. ಪೂಜಾರಿ, ಗೌರವ ಕೋಶಾಧಿಕಾರಿ ರಾಜಶ್ರೀ ಪಿ. ಸಾಲ್ಯಾನ್, ಜೊತೆ ಕಾರ್ಯದರ್ಶಿಗಳಾದ ಸುಶೀಲಾ ಆರ್. ಪೂಜಾರಿ, ಹರೀಶ ಎನ್. ಪೂಜಾರಿ, ಜೊತೆ ಕೋಶಾಧಿಕಾರಿಗಳಾದ ರಮೇಶ ಜಿ. ಬಿಲ್ಲವ, ರತ್ನಾಕರ ಎಸ್. ಪೂಜಾರಿ ಹಾಗೂ ಆಡಳಿತ ಮಂಡಳಿಯ ಸದಸ್ಯರು ಈ ಮೂಲಕ ವಿನಂತಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!