Sunday, September 8, 2024

ಸಾಲಿಗ್ರಾಮದಲ್ಲಿ “ಪ್ಯುಚರ್ ಡಿಸೈನ್ ಸೊಲ್ಯೂಷನ್ಸ್” ಕಾರ್ಯಾರಂಭ

ಸಾಲಿಗ್ರಾಮ : ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ಕ್ಲಪ್ತ ಸಮಯದಲ್ಲಿ ಸಮರ್ಪಕವಾಗಿ ನೀಡುವ ಉದ್ದೇಶದಿಂದ ಸಾಲಿಗ್ರಾಮದ ಕಾರಂತ ಬೀದಿಯ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಎದುರಿನ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾರಂಭಗೊಂಡಿರುವ “ಪ್ಯುಚರ್ ಡಿಸೈನ್ ಸೊಲ್ಯೂಷನ್ಸ್” ಕಚೇರಿಯನ್ನು ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿಯವರು ಉದ್ಘಾಟಿಸಿದರು.

ಬ್ಯಾನರ್ ಡಿಸೈನಿಂಗ್ ಮತ್ತು ಪ್ರಿಂಟಿಂಗ್, ಪೋಸ್ಟರ್ ಡಿಸೈನಿಂಗ್, ಲೋಗೋ ಡಿಸೈನಿಂಗ್, ವೆಬ್ಸೈಟ್ ಡಿಸೈನಿಂಗ್, ವಿಡಿಯೋ ಎಡಿಟಿಂಗ್, ಎಲ್ಲಾ ರೀತಿಯ ಆಹ್ವಾನ ಪತ್ರಿಕೆಗಳ ಡಿಸೈನಿಂಗ್ ಮತ್ತು ಪ್ರಿಂಟಿಂಗ್, ವಿಸಿಟಿಂಗ್ ಕಾರ್ಡ್, ಐಡಿ ಕಾರ್ಡ್, ಶೀಲ್ಡ್ ಮತ್ತು ಟ್ರೋಫಿ ಸ್ಟಿಕರ್ ಅಲ್ಲದೆ ಎಲ್ಲಾ ರೀತಿಯ ಡಿಸೈನಿಂಗ್ ಮತ್ತು ಪ್ರಿಂಟಿಂಗ್ ಸೇವೆಗಳನ್ನು ಅತ್ಯುತ್ತಮ ಗುಣಮಟ್ಟದಲ್ಲಿ ಸಾರ್ವಜನಿಕರಿಗೆ ನೀಡುವ ಉದ್ದೇಶದಿಂದ ಪ್ಯುಚರ್ ಡಿಸೈನ್ ಸೊಲ್ಯೂಷನ್ಸ್ ಕಾರ್ಯಚರಿಸಲಿದೆ ಎಂದು ಸಂಸ್ಥೆಯ ಮಾಲೀಕರಾದ ಪ್ರಕಾಶ್ ಹಂದಟ್ಟು ತಿಳಿಸಿದರು.

ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಆನಂದ ಸಿ ಕುಂದರ್, ಆಶ್ರಿತ್ ಕಾಲೇಜ್ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ವಿಧ್ಯಾದರ ಶೆಟ್ಟಿ, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ್ ಬಾರಿಕೆರೆ, ಉಪಾಧ್ಯಕ್ಷರಾದ ಶ್ರೀಮತಿ ಸರಸ್ವತಿ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದಸ್ಯರಾದ ಶ್ರೀಮತಿ ರತ್ನ ನಾಗರಾಜ್ ಗಾಣಿಗ, ಕಟ್ಟಡದ ಮಾಲೀಕರಾದ ನಾಗರಾಜ್ ಗಾಣಿಗ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯತ್ ಮತ್ತು ಕೋಟತಟ್ಟು ಗ್ರಾಮ ಪಂಚಾಯತ್ ಸದಸ್ಯರುಗಳು ಮತ್ತು ಇನ್ನಿತರರ ಪ್ರಮುಖರು, ಸಾರ್ವಜನಿಕರು ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪಸ್ಥಿರಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!