spot_img
Thursday, April 30, 2026
spot_img

ಹಿರಿಯ ಚಾಲಕ ನಾರಾಯಣ ಶೆಟ್ಟಿ ನಿಧನ


ಕುಂದಾಪುರ: ಕರ್ಕುಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆರ್ಜಾಡಿ ತೋಟದಮನೆ ನಾರಾಯಣ ಶೆಟ್ಟಿ (81ವ) ಆ 21ರಂದು ನಿಧನ ಹೊಂದಿದರು. ಮೃತರು ಪತ್ನಿ, ಪುತ್ರ ಪತ್ರಕರ್ತ ಗೋಪಾಲ ಶೆಟ್ಟಿ, ಪುತ್ರಿಯರು, ಅಪಾರ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

ನಾರಾಯಣ ಶೆಟ್ಟಿಯವರು ಲಾರಿ, ಬಸ್ ಚಾಲಕರಾಗಿ, ಸ್ವತಃ ಲಾರಿ ಮಾಲಕರಾಗಿಯೂ ವೃತ್ತಿ ಬದುಕಿನಲ್ಲಿ ಗುರುತಿಸಿಕೊಂಡಿದ್ದರು. 60 ವರ್ಷಗಳ ಹಿಂದೆ ವಾಹನ ಚಾಲನೆ ಅದರಲ್ಲೂ ಘನ ವಾಹನಗಳ ಚಾಲನೆ ಕಲಿಯುವುದು ಸವಾಲಾಗಿತ್ತು. ನಿರ್ವಾಹಕರಾಗಿ ಸೇರಿಕೊಂಡು ಲಾರಿ ಚಾಲನೆ ಕಲಿತ ಇವರು ಬಳಿಕ ಯಶಸ್ವಿ ಚಾಲಕರಾಗಿ ಅಂದಿನ ದಿನಗಳಲ್ಲಿ ಬೇಡಿಕೆಯ ಲಾರಿ ಚಾಲಕರಾಗಿ ಗಮನ ಸಳೆದವರು. ಡ್ರೈವರ್ ನಾಣು ಶೆಟ್ಟಿ ಎಂದೇ ಪ್ರಸಿದ್ದಿ ಪಡೆದ ಇವರು ಕುಂದಾಪುರ ತಾಲೂಕಿನ ಅಸಂಖ್ಯಾತ ಲಾರಿ ಚಾಲನಾ ಆಸಕ್ತರಿಗೆ ತರಬೇತಿ ನೀಡಿದ್ದರು. ಇವತ್ತು ನೂರಾರು ಯಶಸ್ವಿ ಚಾಲಕರು ತಾವು ನಾಣು ಶೆಟ್ಟಿಯವರ ಶಿಷ್ಯರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಅಂದಿನ ದಿನಗಳಲ್ಲಿ ಲಾರಿ, ಬಸ್‌ಗಳ ಸಂಖ್ಯೆ ತುಂಬಾ ವಿರಳವಾಗಿತ್ತು. ಲಾರಿ ಡ್ರೈವರ್ ಎಂದರೆ ಅದು ದೊಡ್ಡ ಸ್ಥಾನಮಾನ. ಜನ ಗುರುತಿಸುತ್ತಿದ್ದರು. ಆದರೆ ನಾರಾಯಣ ಶೆಟ್ಟರು ಯಾವುದೇ ಹಮ್ಮು-ಬಿಮ್ಮುಗಳಿಲ್ಲದೇ ಸುರಕ್ಷಿತ ಚಾಲನೆಗೆ ಹೆಸರು ಮಾಡಿದ ನಿರ್ಗವಿ, ಸೌಮ್ಯ ಸ್ವಭಾವದ ಚಾಲಕ. ವಂಡ್ಸೆ ಭಾಗದಲ್ಲಿ ಯಾರೇ ಹೊಸ ಲಾರಿ ಖರೀದಿಸುವುದಿದ್ದರೂ ಅದನ್ನು ಊರಿಗೆ ತಂದು ಬಾಡಿ ಕಟ್ಟಲು ಇಡುವುದು ನಾರಾಯಣ ಶೆಟ್ಟರೇ ಆಗಬೇಕು ಎಂದು ಅಂದಿನ ದಿನಗಳಲ್ಲಿ ಲಾರಿ ಮಾಲಕರುಗಳು ಬಯಸುತ್ತಿದ್ದರು. ಅದು ಅವರ ಚಾಲನಾ ನೈಪುಣ್ಯತೆಗೆ ಸಾಕ್ಷಿಯಾಗಿತ್ತು. 80ರ ದಶಕದಲ್ಲಿ ನಾರಾಯಣ ಶೆಟ್ಟರು ಸ್ವತಃ ಲಾರಿ ಮಾಲಕರಾಗುತ್ತಾರೆ. ಬಸ್‌ನ ಚಾಲಕರಾಗಿಯೂ ಸೇವೆಗೆ ಹೆಸರು ಪಡೆಯುತ್ತಾರೆ. ನಾರಾಯಣ ಶೆಟ್ಟರು ವೃತ್ತಿ ಸೇವೆಯಲ್ಲಿ ಸಾರ್ಥಕತೆ ಕಂಡುಕೊಂಡವರು. ಅವರ ವೃತ್ತಿಬದ್ಧತೆ, ಸೇವಾಧರ್ಮ ಅನುಕರಣೀಯವಾಗಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!