Sunday, September 8, 2024

ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಹವಾನಿಯಂತ್ರಿತ ಮಟಪಾಡಿ ಶಾಖೆ ಹಾಗೂ ನವರತ್ನ ಮಿನಿ ಸಭಾಂಗಣ ಉದ್ಘಾಟನೆ

ಬ್ರಹ್ಮಾವರ: ಪ್ರತಿಷ್ಠಿತ ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಹವಾನಿಯಂತ್ರಿತ 9ನೇ ಶಾಖೆ ಮಟಪಾಡಿ ಗ್ರಾಮದಲ್ಲಿ ಉದ್ಘಾಟನೆಗೆ ಸಜ್ಜುಗೊಂಡಿದೆ. ಶಾಖೆಯ ಜೊತೆಗೆ ಪಡಿತರ ಗೋದಾಮು ಹಾಗೂ ಮಿನಿ ಸಭಾಂಗಣ ನಿರ್ಮಿಸಲಾಗಿದೆ. ಇದೇ ತಿಂಗಳ 15ನೇ ತಾರೀಖು ಭಾನುವಾರದಂದು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ. ಎಂ.ಎನ್.ರಾಜೇಂದ್ರ ಕುಮಾರ್ ರವರು ಶಾಖಾ ಕಟ್ಟಡವನ್ನು ಉದ್ಘಾಟನೆಗೊಳಿಸಲಿದ್ದಾರೆ.
ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಖಾತೆ ಸಚಿವರಾದ ಶೋಭಾ ಕರಂದ್ಲಾಜೆಯವರು ದೀಪ ಪ್ರಜ್ವಲನೆ ಮಾಡಲಿದ್ದಾರೆ.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ ಪಡಿತರ ಗೋದಾಮು ಉದ್ಘಾಟನೆ ಮಾಡಲಿದ್ದಾರೆ. ಉಡುಪಿ ವಿಧಾನ ಸಭಾಕ್ಷೇತ್ರದ ಶಾಸಕರಾದ ಯಶ್‌ಪಾಲ್ ಎ. ಸುವರ್ಣರವರು ನವರತ್ನ ಮಿನಿ ಸಭಾಂಗಣ ಉದ್ಘಾಟನೆಗೊಳಿಸಲಿದ್ದಾರೆ. ಶಾಸಕರು ಹಾಗೂ ಮಾಜಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಭದ್ರತಾ ಕೋಶ ಉದ್ಘಾಟನೆಗೊಳಿಸಲಿದ್ದು, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್‌ರವರು ಅಧಕಾರಿಗಳ ಕೊಠಡಿ ಉದ್ಘಾಟಿಸಲಿದ್ದಾರೆ. ಮಾಜಿ ಶಾಸಕರಾದ ಕೆ. ರಘುಪತಿ ಭಟ್‌ರವರು ಕಡತಗಳ ಕೊಠಡಿ ಉದ್ಘಾಟಿಸಲಿದ್ದಾರೆ. ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷರಾದ ಶ್ರೀ ಜಯಕರ ಶೆಟ್ಟಿ ಇಂದ್ರಾಳಿಯವರು ಕಂಪ್ಯೂಟರ್ ಉದ್ಘಾಟನೆ ಮಾಡಲಿದ್ದಾರೆ. ಹಾಗೂ ದ.ಕ.ಜಿ.ಕೇ.ಸ.ಬ್ಯಾಂಕಿನ ನಿರ್ದೇಶಕರಾದ ಡಾ| ಐ. ದೇವಿಪ್ರಸಾದ್ ಶೆಟ್ಟಿ ಬೆಳಪುರವರು ಠೇವಣಿ ಪತ್ರ ಬಿಡುಗಡೆ ಗೊಳಿಸಲಿದ್ದಾರೆ.

ಉಡುಪಿ ತಾ.ವ್ಯ.ಉ.ಸಹಕಾರ ಮಾರಾಟ ಸಂಘ, ಉಡುಪಿಯ ಅಧ್ಯಕ್ಷರಾದ ಬಿ.ಅಶೋಕ ಕುಮಾರ್ ಶೆಟ್ಟಿ, ಮೈರ್ಮಾಡಿ, ದ.ಕ.ಜಿ.ಕೇ.ಸ.ಬ್ಯಾಂಕಿನ ನಿರ್ದೇಶಕರಾದ ಆಶೋಕ್ ಕುಮಾರ್ ಶೆಟ್ಟಿ, ಬೆಳ್ಳಂಪಳ್ಳಿ, ದ.ಕ.ಜಿ.ಕೇ.ಸ.ಬ್ಯಾಂಕಿನ ನಿರ್ದೇಶಕರಾದ ರಾಜೇಶ್ ರಾವ್ ಪಾಂಗಾಳ, ಉಡುಪಿ ಮತ್ತು ಮಂಗಳೂರು ಸಹಕಾರಿ ಸಂಘಗಳ ಉಪನಿಬಂಧಕರಾದ ರಮೇಶ್ ಎಚ್.ಎನ್, ಕುಂದಾಪುರ ಸಹಕಾರಿ ಸಂಘಗಳ ಸಹಾಯಕ ನಿಬಂಧಕರಾದ ಅರುಣ್‌ಕುಮಾರ್ ಎಸ್.ವಿ. ಹಾಗೂ ಹಂದಾಡಿ ಗ್ರಾಮ ಪಂಚಾಯತ್‌ನ ಅಧ್ಯಕ್ಷರಾದ ಶ್ರೀಮತಿ ಶೋಭಾ ಪೂಜಾರಿಯವರು ಗೌರವ ಉಪಸ್ಥಿತಿ ನೀಡಲಿದ್ದಾರೆ.

ಸಂಘದ ಎಲ್ಲಾ ಸದಸ್ಯರು, ಗ್ರಾಹಕರು, ಹಿತೈಷಿಗಳು ಈ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸ ಬೇಕಾಗಿ ಸಂಘದ ಅಧ್ಯಕ್ಷರಾದ ಇರ್ಮಾಡಿ ಕೆ. ತಿಮ್ಮಪ್ಪ ಹೆಗ್ಡೆಯವರು ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!