spot_img
Friday, March 27, 2026
spot_img

ಅ.16ರಂದು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದಲ್ಲಿ ತೆಂಕುತಿಟ್ಟು ಯಕ್ಷ ಮಾರ್ಗ-2 ಉದ್ಘಾಟನೆ

ಕಾಸರಗೋಡು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದಲ್ಲಿ ಇದೇ ಬರುವ 16 ನೇ ತಾರೀಕು ಸೋಮವಾರ ಸಂಜೆ 4 ಗಂಟೆಗೆ ತೆಂಕುತಿಟ್ಟು ಯಕ್ಷ ಮಾರ್ಗ- 2 ಉದ್ಘಾಟನೆ ಹಾಗೂ ತೆಂಕುತಿಟ್ಟು ಹಿಮ್ಮೇಳ ತರಗತಿ ಆರಂಭವಾಗಲಿದೆ.

ತೆಂಕುತಿಟ್ಟು ಯಕ್ಷಗಾನದ ಶಾಸ್ತ್ರೀಯ ನಾಟ್ಯ ಗುರುಗಳಾದ ಕರ್ಗಲ್ಲು ವಿಶ್ವೇಶ್ವರ ಭಟ್ ಇವರಿಂದ ತೆಂಕುತಿಟ್ಟು ಯಕ್ಷಮಾರ್ಗ ಒಂದು ಕಾರ್ಯಕ್ರಮ ಕಳೆದ ತಿಂಗಳು ನಡೆದಿರುತ್ತದೆ. ತೆಂಕುತಿಟ್ಟು ಶಾಸ್ತ್ರಿಯ ನಾಟ್ಯದ ಪ್ರಾತ್ಯಕ್ಷಿಕೆ ಹಾಗೂ ದಾಖಲೀಕರಣ-ಸಂವಾದಗಳು ನಡೆಯಲಿದೆ. ದಾಖಲೀಕರಣಗಳು ಸಂಪೂರ್ಣ ಸಿರಿಬಾಗಿಲು ಪ್ರತಿಷ್ಠಾನದ ಅಧ್ಯಯನ ಕೇಂದ್ರದಲ್ಲಿ ಶಾಶ್ವತವಾಗಿರುತ್ತದೆ. ಮುಂದಿನ ದಿನಗಳಲ್ಲಿ ನಾಟ್ಯ ಅಭ್ಯಾಸದ ಕುರಿತು ಅಧ್ಯಯನ ನಡೆಸುವಲ್ಲಿ ಈ ದಾಖಲಿಕರಣಗಳು ಉಪಯುಕ್ತವಾಗಲಿದೆ. ಅದೇ ದಿನ ಮಾಂಬಾಡಿ ಗುರುಗಳ ಸಲಹೆಯಂತೆ ಕುದುರೆಕೂಡ್ಲು ರಾಮಮೂರ್ತಿ ಇವರಿಂದ ತೆಂಕುತಿಟ್ಟು ಯಕ್ಷಗಾನದ ಹಿಮ್ಮೇಳ ತರಗತಿಯು ಆರಂಭವಾಗಲಿದೆ.

ಈ ಕಾರ್ಯಕ್ರಮವನ್ನು ಉದ್ಯಮಿಗಳಾದ, ಕಲಾಪೋಷಕರು, ಧಾರ್ಮಿಕ ಮುಖಂಡರಾದ ಕೆ. ಕೆ. ಶೆಟ್ಟಿ ಅಹಮದ್ ನಗರ, ಮಹಾರಾಷ್ಟ್ರ ಇವರು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಕಲಾಭಿಮಾನಿಗಳಾದ ಶಿವರಾಮ ಭಟ್ ಕಾರಿಂಜೆ ಹಳೆಮನೆ ಇವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!