spot_img
Friday, March 27, 2026
spot_img

ರಾಜು ತೋಟದಬೆಟ್ಟು ಅವರಿಗೆ ಗೌರವ ಸಮ್ಮಾನ

ಕುಂದಾಪುರ: ಸಾಮಾಜಿಕ ಸೇವೆಗಾಗಿ ಹಲವಾರು ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸುತ್ತ ಸಾರ್ವಜನಿಕ ಕಳಕಳಿಗೆ ಸ್ಪಂದಿಸುತ್ತಾ, ಪ್ರಾಮಾಣಿಕ ಸೇವೆ ಸಲ್ಲಿಸುತ್ತ ಬಂದವರು ರಾಜು ತೋಟದಬೆಟ್ಟು. ಸದಾ ಸಾರ್ವಜನಿಕರ ಸೇವೆಗಳಲ್ಲಿ ನಿರತನಾಗುತ್ತ ಸೇವಾ ಮನೋಭಾವವನ್ನು ಹೊಂದಿ, ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಇದೀಗ ಬೀಜಾಡಿ ಮೀನುಗಾರಿಕಾ ಸಹಕಾರಿ ಸಂಘದಲ್ಲಿ ಉಪಾಧ್ಯಕ್ಷರಾಗಿ ಉತ್ತುಂಗಕ್ಕೇರಿರುವುದು ಸಾಮಾಜಿಕ ಬದ್ಧತೆಗೆ ಸಿಕ್ಕಿದ ಗೌರವ. ಇಂತಹ ಗೌರವಾನ್ವಿತರನ್ನು ಸಂಸ್ಥೆ ಗುರುತಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದು ಕೊಮೆ-ಕೊರವಡಿ ವಿವಿದೋದ್ಧೇಶ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಗೋಪಾಲ ಪೂಜಾರಿ ಹೇಳಿದರು.

ತೆಕ್ಕಟ್ಟೆ ಹಯಗ್ರೀವದಲ್ಲಿ ಅಕ್ಟೋಬರ್, 8ರಂದು ಯಶಸ್ವೀ ಕಲಾವೃಂದ (ರಿ.)ಕೊಮೆ, ತೆಕ್ಕಟ್ಟೆ ಹಾಗೂ ತೆಕ್ಕಟ್ಟೆ ರೋಟರಿ ಕ್ಲಬ್ ಸಂಸ್ಥೆಯ ಜಂಟಿ ಆಶ್ರಯದಲ್ಲಿ ನಡೆದ ಅರ್ಥಾಂಕುರ-4 ಕಾರ್ಯಕ್ರಮದಲ್ಲಿ ರಾಜು ತೋಟದಬೆಟ್ಟು ಅವರನ್ನು ಗೌರವಿಸಿ ಮಾತನ್ನಾಡಿದರು.

ಅರ್ಥಾಂಕುರ-4, ನಾನೂರು- ನಾಲ್ಕು ಸಾವಿರ, ನಾಲ್ಕು ಲಕ್ಷವಾಗಲಿ. ತನ್ಮೂಲಕ ಈ ಭಾಗದಲ್ಲಿ ಅನೇಕ ಕಲಾವಿದರು ಸಿದ್ಧರಾಗಲಿ. ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ವೇದಿಕೆಯನ್ನು ಸಂಸ್ಥೆ ಸಿದ್ಧಗೊಳಿಸಿದೆ. ಪ್ರಬುದ್ಧ ಕಲಾವಿದರಾಗುವ ಆಸೆಯುಳ್ಳ ಕಲಾವಿದರು ತಮ್ಮ ಹೆಸರನ್ನು ಸಂಸ್ಥೆಯಲ್ಲಿ ನೋಂದಾಯಿಸಿಕೊಂಡು ಅರ್ಥಾಂಕುರದಲ್ಲಿ ಸಿದ್ಧರಾಗಲಿ. ಈ ಸುವರ್ಣ ಅವಕಾಶದಿಂದ ಯಾರೂ ವಂಚಿತರಾಗದಿರಿ ಎಂದು ಅರ್ಥದಾರಿ, ನಿರ್ದೇಶಕ ಡಾ. ಜಗದೀಶ್ ಶೆಟ್ಟಿ ಮುಖ್ಯ ಅತಿಥಿಯಾಗಿ ಮಾತನ್ನಾಡಿದರು.

ತೆಕ್ಕಟ್ಟೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶೇಖರ ಕಾಂಚನ್, ಕೃಷಿಕರಾದ ಕೃಷ್ಣ ಪೂಜಾರಿ ಕೊರವಡಿ, ಗುರುಗಳಾದ ಲಂಬೋದರ ಹೆಗಡೆ ನಿಟ್ಟೂರು ಉಪಸ್ಥಿತರಿದ್ದರು.

ತೆಕ್ಕಟ್ಟೆ ರೋಟರಿ ಕ್ಲಬ್ ಅಧ್ಯಕ್ಷರಾದ ಸುಧಾಕರ ಶೆಟ್ಟಿ ಸ್ವಾಗತಿಸಿ, ಯಶಸ್ವೀ ಕಲಾವೃಂದದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ವಂದಿಸಿದರು. ಹೆರಿಯ ಮಾಸ್ಟರ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಬಳಿಕ ಅರ್ಥಾಂಕುರ-4, ಪಾರ್ಥ ಸಾರಥ್ಯ ಯಕ್ಷಗಾನ ತಾಳಮದ್ದಳೆ ರಂಗದಲ್ಲಿ ಪ್ರಸ್ತುತಿಗೊಂಡಿತು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!