spot_img
Friday, March 27, 2026
spot_img

ಮಕರ ಸಂಕ್ರಮಣದ ನಂತರ ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆ : ಹುಬ್ಬಳ್ಳಿಯ ದಲಿತ ಕೇರಿಯ ಪಾದಯಾತ್ರೆಯಲ್ಲಿ ಪೇಜಾವರ ಶ್ರೀ ಹೇಳಿಕೆ

ಜನಪ್ರತಿನಿಧಿ ವಾರ್ತೆ : ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಪೇಜಾವರ ಮಠದ ವಿಶ್ವ  ಪ್ರಸನ್ನ ತೀರ್ಥ ಸ್ವಾಮೀಜಿ ಇಂದು (ಗುರುವಾರ, ಅ.೧೨) ಹುಬ್ಬಳ್ಳಿಯ ಭುವನೇಶ್ವರಿ ನಗರದ ದಲಿತ ಕಾಲೋನಿಯಲ್ಲಿ ಪಾದಯಾತ್ರೆ ಮಾಡಿದರು.

ಕಾಲೋನಿಯ ಭುವನೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ  ದೇವಿಗೆ ಪೂಜೆ ಸಲ್ಲಿಸಿ, ಆರತಿ ಬೆಳಗಿಸಿ ಮಾತನಾಡಿದ ಅವರು, ರಾಮ ಆದರ್ಶ ಪುರುಷ, ಶತಮಾನಗಳ ಹೋರಾಟದ ಫಲವಾಗಿ ಇಂದು ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣವಾಗುತ್ತಿದೆ. ನಾವೆಲ್ಲರೂ ಸನಾತನ ಧರ್ಮದವರೇ ಆಗಿದ್ದೇವೆ. ಸುಖ ಸಂತೋಷಕ್ಕಾಗಿ ರಾಮನನ್ನು ಆರಾಧನೆ ಮಾಡೋಣ, ಜಗತ್ತು ಇಂದು ಸುಖವಾಗಿದೆ ಎಂದರೇ ಅದಕ್ಕೆ ಶ್ರೀರಾಮಚಂದ್ರ ಕಾರಣ ಎಂದು ಅವರು ಹೇಳಿದರು.

ಇನ್ನೊಬ್ಬರನ್ನು ಬಡಿಯುತ್ತೇವೆ, ಕಡಿಯುತ್ತೇವೆ ಎನ್ನುವುದು ರಾವಣನ ಕೆಟ್ಟ ಗುಣ. ಎಲ್ಲರೂ ಶ್ರೀರಾಮನ ಜಪ ಮಾಡೋಣ. ಮಕರ ಸಂಕ್ರಮಣದ ನಂತರ ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆ ಆಗಲಿದೆ. ಐದು ದೀಪಗಳನ್ನು ಬೆಳಗುವ ಮೂಲಕ ಎಲ್ಲರೂ ರಾಮನನ್ನು ಭಜಿಸಿ ಆರಾಧಿಸುವ ಎಂದು ಅವರು ಹೇಳಿದರು.  

ಪಾಯಾತ್ರೆ ಆರಂಭವಾಗುತ್ತಿದ್ದಂತೆ  ಭಕ್ತರು ಸ್ವಾಮೀಜಿಯವರ ಮೇಲೆ ಪುಷ್ಪ ಮಳೆ ಸುರಿಸಿ ಭಕ್ತಿಯನ್ನು ಸಮರ್ಪಸಿದರಲ್ಲದೇ, ಜೈ ಶ್ರೀರಾಮ, ಬೋಲೋ ಭಾರತ್‌ ಮಾತಾ ಕಿ ಜೈ ಎಂದು ಘೋಷಣೆ ಮಾಡಿದರು.

ಭುವನೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡುವ ಮುನ್ನ, ವಿಶ್ವ ಹಿಂದೂ ಪರಿಷತ್‌ ಹುಬ್ಬಳ್ಳಿ ಮಹಾನಗರದ ಧರ್ಮಚಾರಿ ಸಂಪರ್ಕದ ಮುಖ್ಯಸ್ಥ ಯಲ್ಲಪ್ಪ ನಾಗಲೋಟಿ ಅವರ ಮನೆಗೆ ಭೇಟಿ ನೀಡಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!