spot_img
Saturday, March 28, 2026
spot_img

ಸೇನಾಪುರ ರೈಲು ನಿಲ್ದಾಣದಲ್ಲಿ ಎಕ್ಸ್ ಪ್ರೆಸ್ ರೈಲು ನಿಲುಗಡೆಗೆ ಒತ್ತಾಯಿಸಿ ಅ.10ರಂದು ಪಾದಯಾತ್ರೆ

ಸೇನಾಪುರದಲ್ಲಿ ಸುಸಜ್ಜಿತವಾದ ರೈಲ್ವೆ ನಿಲ್ದಾಣವಿದೆ. ಮೂರು ರೈಲ್ವೆ ಟ್ರ್ಯಾಕ್‍ಗಳಿವೆ. ಆದರೆ ಎಕ್ಸ್ ಪ್ರೆಸ್ ರೈಲು ನಿಲುಗಡೆಯ ಭಾಗ್ಯ ಮಾತ್ರ ಈ ರೈಲ್ವೆ ನಿಲ್ದಾಣಕ್ಕೆ ಸಿಕ್ಕಿಲ್ಲ. ಇವತ್ತಿನ ದಿನಗಳಲ್ಲಿ ಬೆಂಗಳೂರು, ಮುಂಬಯಿ ಸಹಿತ ಅನೇಕ ಪಟ್ಟಣಗಳಿಗೆ ರೈಲ್ವೆ ಸಂಪರ್ಕವಿದೆ. ಮುಖ್ಯವಾಗಿ ಬೆಂಗಳೂರು ಮುಂಬಯಿಗೆ ಈ ಭಾಗದಿಂದ ದೊಡ್ಡ ಸಂಖ್ಯೆಯಲ್ಲಿಯೇ ಜನರು ಹೋಗುತ್ತಾರೆ. ಪ್ರಸ್ತುತ ಕುಂದಾಪುರ ಅಥವಾ ಬೈಂದೂರು ರೈಲ್ವೆ ನಿಲ್ದಾಣಕ್ಕೆ ಹೋಗಿ ಅಲ್ಲಿಂದ ರೈಲು ಪಯಣ ಮಾಡಬೇಕಾಗುತ್ತದೆ. ಸೇನಾಪುರದಲ್ಲಿ ಸಕಲ ವ್ಯವಸ್ಥೆಗಳಿದ್ದರೂ ಕೂಡಾ ಜನರ ಬೇಡಿಕೆ ಕೊಂಕಣ ರೈಲ್ವೆ ಆಡಳಿತಕ್ಕೆ ತಲುಪದ ಕಾರಣ ದಿನಕ್ಕೊಂದು ಬಾರಿ ಲೋಕಲ್ ರೈಲು ನಿಲುಗಡೆಗಷ್ಟೇ ಸೀಮಿತವಾಗಿದೆ.

ಸೇನಾಪುರ ರೈಲ್ವೆ ನಿಲ್ದಾಣದಲ್ಲಿ ಎಲ್ಲಾ ಎಕ್ಸ್ ಪ್ರೆಸ್ ರೈಲು ನಿಲುಗಡೆಗೆ ಎಲ್ಲಾ ರೀತಿಯ ವ್ಯವಸ್ಥೆಗಳಿವೆ. ಇಲ್ಲಿ ಎಲ್ಲಾ ಎಕ್ಸ್ ಪ್ರೆಸ್ ರೈಲುಗಳು ನಿಂತರೆ ಸುತ್ತಲಿನ 20ಕ್ಕೂ ಹೆಚ್ಚು ಗ್ರಾಮಗಳ ಜನರಿಗೆ ಅನುಕೂಲವಾಗುತ್ತದೆ. ಸಮೀಪದಲ್ಲಿ ಮೀನುಗಾರಿಕಾ ಬಂದರು ಇದೆ. ಹಲವಾರು ಕೈಗಾರಿಕೆಗಳಿಗೆ. ಉದ್ಯಮ ವಲಯಗಳಿವೆ. ಎಲ್ಲರಿಗೂ ಅನುಕೂಲವಾಗುತ್ತದೆ.
ಸೇನಾಪುರ ರೈಲ್ವೆ ನಿಲ್ದಾಣ ಕುಂದಾಪುರ ಹಾಗೂ ಬೈಂದೂರು ತಾಲೂಕು ನಡುವೆ ಇದೆ. ಎಲ್ಲಾ ಕಡೆಗಳಿಂದ ರಸ್ತೆಯ ಸಂಪರ್ಕವಿದೆ. ಸುತ್ತಮುತ್ತಲಿನ ಗ್ರಾಮಗಳ ಬಹುತೇಕ ಜನರು ಉದ್ಯೋಗ, ಶಿಕ್ಷಣ ನಿಮಿತ್ತ ಕಾರವಾರ, ಗೋವಾ, ರತ್ನಗಿರಿ, ಮುಂಬಯಿ, ಹಾಸನ, ಮೈಸೂರು, ಬೆಂಗಳೂರು ನಗರಗಳಲ್ಲಿ ವಾಸವಿದ್ದಾರೆ.ಇಲ್ಲಿ ಎಕ್ಸ್ ಪ್ರೆಸ್ರೈಲು ನಿಲುಗಡೆಯಿಂದ ಅವರಿಗೆಲ್ಲ ಪ್ರಯೋಜನವಾಗಲಿದೆ. ಇಲ್ಲಿ ಎಕ್ಸ್ ಪ್ರೆಸ್ ರೈಲು ನಿಲುಗಡೆ ಆಗುವುದರಿಂದ ರೈಲ್ವೆ ಇಲಾಖೆಗೂ ಕೂಡಾ ಸಹ ಒಳ್ಳೆಯ ಲಾಭ ಆಗಲಿದೆ.

ಸೇನಾಪುರ ಎಕ್ಸ್ ಪ್ರೆಸ್ ರೈಲ್ವೆ ನಿಲ್ದಾಣದಲ್ಲಿ ಎಕ್ಸ್ ಪ್ರೆಸ್ ರೈಲು ನಿಲುಗಡೆಯ ಬಗ್ಗೆ ಸಾರ್ವಜನಿಕರು ಕೂಡಾ ಇತ್ತೀಚೆಗಿನ ದಿನಗಳಲ್ಲಿ ಆಸಕ್ತಿ ತಾಳುತ್ತಿದ್ದು ಹೋರಾಟದ ಹಾದಿಯತ್ತ ಬರುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಸೇನಾಪುರ ರೈಲ್ವೆ ನಿಲ್ದಾಣ ಎಕ್ಸ್ ಪ್ರೆಸ್ ರೈಲು ನಿಲುಗಡೆ ಹೋರಾಟ ಸಮಿತಿ ರಚನೆಯಾಗಿದ್ದು ಇದೇ ಅಕ್ಟೋಬರ್ 10ರಂದು ಪಾದಯಾತ್ರೆಯ ಮೂಲಕ ರೈಲ್ವೆ ನಿಲ್ದಾಣಕ್ಕೆ ಬಂದು ಎಕ್ಸ್ ಪ್ರೆಸ್ ರೈಲು ನಿಲುಗಡೆಗೆ ಒತ್ತಾಯಿಸುವ ಪ್ರತಿಭಟನೆ ಕೂಡಾ ನಡೆಯಲಿದೆ.

ಸೇನಾಪುರ ರೈಲ್ವೆ ನಿಲ್ದಾಣದಲ್ಲಿ ಎಕ್ಸ್ ಪ್ರೆಸ್ ರೈಲುಗಳು ನಿಲುಗಡೆಯಾದರೆ ಸೇನಾಪುರ, ನಾಡ, ಬಡಾಕೆರೆ, ಹಕ್ಲಾಡಿ, ಕುಂದಬಾರಂದಡಿ, ನೂಜಾಡಿ,ಆಲೂರು, ಹರ್ಕೂರು, ವಂಡ್ಸೆ, ಚಿತ್ತೂರು, ಇಡೂರು, ಹೊಸೂರು, ಕೆರಾಡಿ, ಬೆಳ್ಳಾಲ, ದೇವಲ್ಕುಂದ, ಕಟ್ ಬೆಲ್ತೂರು, ಹೆಮ್ಮಾಡಿ, ಹೊಸಾಡು, ಗುಜ್ಜಾಡಿ, ಗಂಗೊಳ್ಳಿ, ತ್ರಾಸಿ, ಮರವಂತೆ, ನಾವುಂದ ಸೇರಿದಂತೆ 15 ಗ್ರಾಮ ಪಂಚಾಯಿತಿಗಳ 24 ಗ್ರಾಮ ಗ್ರಾಮಗಳಿಗೆ ಅನುಕೂಲವಾಗಲಿದೆ. ಅದಕ್ಕಾಗಿ ಸಂಬಂಧಪಟ್ಟ ಗ್ರಾಮ ಪಂಚಾಯತ್‍ಗಳಿಂದ ನಿರ್ಣಯ ಮಾಡಲಾಗಿದ್ದು ಸಂಬಂಧಪಟ್ಟ ಇಲಾಖೆಗೆ ನೀಡಲಾಗುವುದು.

“ಸೇನಾಪುರ ರೈಲ್ವೆ ನಿಲ್ದಾಣ ರಚನೆಯಾಗುವಾಗಲೇ ಮೂರು ಟ್ರ್ಯಾಕ್‍ಗಳನ್ನು ಅಳವಡಿಸಲಾಗಿದೆ. ಅಂದರೆ ಆಗ ಎಕ್ಸ್ ಪ್ರೆಸ್ ರೈಲು ನಿಲುಗಡೆಗೆ ಪೂರಕವಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಜನರ ಬೇಡಿಕೆ ವ್ಯಕ್ತವಾಗದ ಕಾರಣ ಅದು ಆಗಲಿಲ್ಲ. ಈಗ ಜನರಿಗೆ ರೈಲ್ವೆ ಅಗತ್ಯವಾಗಿದೆ. ಬೆಂಗಳೂರು, ಮುಂಬಯಿ, ಗೋವಾಕ್ಕೆ ಎಕ್ಸ್‍ಪ್ರೆಸ್ ರೈಲು ಸಂಚರಿಸುವುದರಿಂದ ಸಾವಿರಾರು ಜನರಿಗೆ ಅನುಕೂಲವಾಗುತ್ತದೆ. ಈ ಬಗ್ಗೆ ಹಿಂದೆ ಕೂಡಾ ಸಾಷ್ಟು ಮನವಿ ಸಲ್ಲಿಸಲಾಗಿತ್ತು ಈಗ 15 ಗ್ರಾಮ ಪಂಚಾಯತ್ 24 ಗ್ರಾಮಗಳ ಜನರು ಕೊಂಕಣ ರೈಲ್ವೆ ಕಾರ್ಪೋರೇಷನ್‍ಗೆ ಮನವಿ ಮಾಡಲಿದ್ದಾರೆ. ನಾಡ ಗ್ರಾ.ಪಂ. ಮುಂಭಾಗದಿಂದ ಪಾದಯಾತ್ರೆಯ ಮೂಲಕ ಸೇನಾಪುರ ರೈಲ್ವೆ ನಿಲ್ವಾಣದ ಬಂದು ಮನವಿ ಸಲ್ಲಿಸಲಾಗುವುದು. ಸಂಬಂಧಪಟ್ಟ 24 ಗ್ರಾಮಗಳ ಜನರು ಈ ಪಾದಯಾತ್ರೆಯಲ್ಲಿ ಭಾಗವಹಿಸಬೇಕು”

-ರಾಜೀವ ಪಡುಕೋಣೆ, ಸಂಚಾಲಕರು. ರೈಲು ನಿಲ್ದಾಣದಲ್ಲಿ ಎಕ್ಸ್ ಪ್ರೆಸ್ ರೈಲು ನಿಲುಗಡೆ ಸಮಿತಿ

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!