Sunday, September 8, 2024

ಕುಂದಾಪುರ ರೈಲು ನಿಲ್ದಾಣದಲ್ಲಿ ಪ್ರಿಪೈಡ್ ಅಟೋ ರಿಕ್ಷಾ ಕೌಂಟರ್ ಆರಂಭ

ಕುಂದಾಪುರ ರೈಲು ನಿಲ್ದಾಣದಲ್ಲಿ ಪ್ರಿಪೈಡ್ ಅಟೋ ರಿಕ್ಷಾ ಕೌಂಟರ್ ಸೋಮವಾರದಿಂದ ಆರಂಭವಾಗಿದೆ. ರೈಲು ಪ್ರಯಾಣಿಕರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ.

ಬೆಂಗಳೂರು ಮುಂಬಯಿಗಳಿಂದ ಬೆಳಿಗ್ಗೆ ಬರುವ ಪ್ರಯಾಣಿಕರಿಂದ ಹಿಡಿದು ,ಗೋವಾ ,ಕೇರಳಗಳಿಂದ ಬರುವ ಅಸಂಖ್ಯಾತ ರೈಲು ಪ್ರಯಾಣಿಕರಿಗೆ ಈ ಪ್ರಿಪೈಡ್ ಅಟೋ ರಿಕ್ಷಾ ಕೇಂದ್ರ ವರದಾನವಾಗಲಿದೆ.

ಕಳೆದ ಹಲವಾರು ವರ್ಷಗಳಿಂದ ಪತ್ರಿಕೆಗಳ ವಾಚಕರ ವಿಭಾಗ ಹಾಗು ಪುರವಣಿಗಳಲ್ಲಿ ಸಾರ್ವಜನಿಕರ ಪ್ರಿಪೈಡ್ ಬೇಡಿಕೆ ನಿರಂತರವಾಗಿ ಬರುತಿದ್ದ ಹಿನ್ನೆಲೆಯಲ್ಲಿ ಕೊಂಕಣ ರೈಲ್ವೆ ಪ್ರಿಪೈಡ್ ಅಟೋ ಟೆಂಡರ್ ಕರೆದಿತ್ತು.

ಇದರ ಜತೆ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯು ಆಯೋಜಿಸಿದ್ದ ಕೊಂಕಣ ರೈಲ್ವೆ ಅದಿಕಾರಿಗಳ ಸಭೆಯಲ್ಲೂ ಪ್ರಯಾಣಿಕರ ದೂರು ದುಮ್ಮಾನಗಳ ಆಲಿಸುವಿಕೆಯ ಸಂದರ್ಭದಲ್ಲೂ ಜನರ ಸಮಸ್ಯೆಯನ್ನು ಅದಿಕಾರಿಗಳ ಮುಂದಿಡಲಾಗಿತ್ತು.

ಕುಂದಾಪುರ ರೈಲು ನಿಲ್ದಾಣದಲ್ಲಿ ಇಳಿದು ಯಾವುದೇ ಭಾಗಕ್ಕೂ ರಾಜ್ಯ ಸರ್ಕಾರ ನಿಗದಿ ಪಡಿಸಿದ ದರದಲ್ಲಿ ಅಟೋ ಬಾಡಿಗೆಗೆ ಲಭ್ಯವಾಗಲಿದೆ.

ಕುಂದಾಪುರ ರೈಲು ನಿಲ್ದಾಣದ ಹಲವಾರು ಜನ ರಿಕ್ಷಾ ಚಾಲಕರು ಪ್ರಯಾಣಿಕರ ದೂರು ಗೊಂದಲಗಳ ನಿವಾರಿಸಲು ಪ್ರಿಪೈಡ್ ಅಟೋ ಆರಂಭವಾಗಲಿ ಎಂದೇ ಬಯಸಿದ್ದು ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಗಮನಕ್ಕೆ ತಂದಿದ್ದರು.

ಪ್ರಿಪೈಡ್ ಅಟೋ ಆರಂಭವಾಗುವ ಮೂಲಕ ಪ್ರಯಾಣಿಕರು ಮನೆಗಳಿಂದ ಅಥವಾ ಪರಿಚಯದ ವಾಹನಗಳನ್ನು ನಿಲ್ದಾಣಕ್ಕೆ ಮುಂಚಿತವಾಗಿ ಬರ ಹೇಳ ಬೇಕಾದ ಸಮಸ್ಯೆ ಪರಿಹಾರವಾಗುವ ನಿರೀಕ್ಷೆ ಇದ್ದು ಈ ಮೂಲಕ ನಿಲ್ದಾಣದ ಪರಿಸರದ ಅಟೋ ಚಾಲಕರಿಗೇ ಬಾಡಿಗೆ ಹೆಚ್ವಾಗುವ ಆಶಾ ಭಾವನೆ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಗಿದೆ.

ಗೋವಾ ಬೆಂಗಳೂರಿನಿಂದ ಬರುವ ಟಿಕೇಟ್ ದರಕ್ಕಿಂತ ನಿಲ್ದಾಣದಿಂದ ಕುಂದಾಪುರಕ್ಕೆ ತೆರಳುವ ಅಟೋ ಬಾಡಿಗೆ ಜಾಸ್ತಿ ಎಂಬ ಬಗ್ಗೆ ನಿರಂತರವಾಗಿ ಸಮಾಜಿಕ ಜಾಲತಾಣಗಳಲ್ಲಿ ಬರುತಿದ್ದ ದೂರುಗಳಿಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದ್ದು ಜನಸಾಮಾನ್ಯರು ಈ ಸೌಲಭ್ಯದ ಸದುಪಯೋಗ ಪಡೆಯ ಬಹುದು ಎಂದು ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯು ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!